ಗಣಪತಿಯೇ ನನ್ನ ಕಾಪಾಡಿದ!; 10 ನಿಮಿಷ ತಡವಾಗಿ ಏರ್ಪೋರ್ಟ್ಗೆ ಬಂದಿದ್ದಕ್ಕೆ ಉಳಿಯಿತು ಯುವತಿಯ ಪ್ರಾಣ
ಗುರುವಾರ ಅಹಮದಾಬಾದ್ನಲ್ಲಿ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನವನ್ನು ‘ಕೇವಲ 10 ನಿಮಿಷ’ದ ಅಂತರದಲ್ಲಿ ತಪ್ಪಿಸಿಕೊಂಡ ಯುವತಿ ಅದೃಷ್ಟವಶಾತ್ ಅಪಘಾತದಿಂದ ಪಾರಾದ ಬಗ್ಗೆ ಮಾತನಾಡಿದ್ದಾಳೆ. ಈಗಲೂ ‘ನನ್ನ ದೇಹವು ನಡುಗುತ್ತಿದೆ’ ಎಂದು ಆಕೆ ಹೇಳಿದ್ದಾಳೆ. ಆ ಹತ್ತೇ ಹತ್ತು ನಿಮಿಷ ಆಕೆಯ ಪ್ರಾಣ ಉಳಿಸಿದೆ.

ಅಹಮದಾಬಾದ್, ಜೂನ್ 13: ನಿನ್ನೆ (ಜೂನ್ 12) ಭಾರತದ ಪಾಲಿಗೆ ಕರಾಳ ದಿನ. ಆದರೆ, ಭೂಮಿ ಚೌಹಾಣ್ (Bhoomi Chauhan) ಎಂಬ ಯುವತಿಯ ಪಾಲಿಗೆ ಇದು ಅದೃಷ್ಟದ ದಿನ! ಏಕೆಂದರೆ ನಿನ್ನೆ ಅಪಘಾತಕ್ಕೀಡಾದ ಏರ್ ಇಂಡಿಯಾ (Air India) ವಿಮಾನಕ್ಕೆ ಈಕೆ ಕೂಡ ಟಿಕೆಟ್ ಬುಕ್ ಮಾಡಿದ್ದರು. ಆದರೆ, ವಿಮಾನ ನಿಲ್ದಾಣವನ್ನು ತಲುಪುವುದು 10 ನಿಮಿಷ ತಡವಾಗಿತ್ತು. ಹೀಗಾಗಿ, ಅಹಮದಾಬಾದ್ ಏರ್ಪೋರ್ಟ್ ಒಳಗೆ ಆಕೆಗೆ ಪ್ರವೇಶ ನಿರಾಕರಿಸಲಾಗಿತ್ತು. ಆಗ ತನ್ನ ದುರಾದೃಷ್ಟವನ್ನು ಹಳಿದುಕೊಂಡಿದ್ದ ಭೂಮಿ ಈಗ ತನ್ನ ಅದೃಷ್ಟವನ್ನು ನೆನೆದು ಭಾವುಕರಾಗುತ್ತಿದ್ದಾರೆ. ನಾನು ನಂಬುವ ಗಣಪತಿ ಬಪ್ಪನೇ ನನ್ನನ್ನು ಪ್ರಾಣಾಪಾಯದಿಂದ ಕಾಪಾಡಿದ ಎಂದು ಭೂಮಿ ಚೌಹಾಣ್ ಕೈ ಮುಗಿಯುತ್ತಿದ್ದಾರೆ.
10 ನಿಮಿಷ ತಡವಾಗಿದ್ದಕ್ಕೆ ಭೂಮಿ ಚೌಹಾಣ್ ತನ್ನ ಲಂಡನ್ ವಿಮಾನವನ್ನು ತಪ್ಪಿಸಿಕೊಂಡಿದ್ದರು. ಇದರಿಂದಾಗಿ ಏರ್ ಇಂಡಿಯಾ ವಿಮಾನ AI-171 ರ ದುರಂತ ಅಪಘಾತದಲ್ಲಿ ಆಕೆಯ ಜೀವ ಉಳಿಯಿತು. ಅವರು ಕೂಡ ನಿನ್ನೆ ಪತನವಾದ ಅಹಮದಾಬಾದ್ ವಿಮಾನದಲ್ಲಿ ಇರಬೇಕಿತ್ತು. ಭೂಮಿ ತನ್ನ ಪತಿಯೊಂದಿಗೆ ವಾಸಿಸುವ ಲಂಡನ್‌ಗೆ ಪ್ರಯಾಣಿಸಲು AI 171 ಅನ್ನು ಹತ್ತಬೇಕಿತ್ತು.
#WATCH | Bhoomi Chauhan, a resident of Gujarat’s Bharuch, missed yesterday’s flight, AI-171, which crashed and 241 of 242 on board, including crew members, lost their lives.
Bhoomi Chauhan’s mother says, “We thank Mother Goddess for protecting my daughter. She left her child… pic.twitter.com/Mb4VFKI7x2
— ANI (@ANI) June 13, 2025
ಭೂಮಿ ಚೌಹಾಣ್‌ಗೆ ನಿನ್ನೆಯ ಟ್ರಾಫಿಕ್ ಜಾಮ್ ವರವಾಗಿ ಪರಿಣಮಿಸಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 1.30ರ ಸುಮಾರಿಗೆ ಹೊರಟ ಕೆಲವೇ ಸೆಕೆಂಡುಗಳಲ್ಲಿ ಏರ್ ಇಂಡಿಯಾ ವಿಮಾನ 171 ಅಪಘಾತಕ್ಕೀಡಾಯಿತು. ಈ ವಿಮಾನದಲ್ಲಿದ್ದ 242 ಪ್ರಯಾಣಿಕರು ಮತ್ತು ಸಿಬ್ಬಂದಿಗಳಲ್ಲಿ ಒಬ್ಬರು ಮಾತ್ರ ಬದುಕುಳಿದಿದ್ದಾರೆ.
ಇದನ್ನೂ ಓದಿ: ವಿಮಾನ ದುರಂತದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕ ಪ್ರಧಾನಿ ಮೋದಿ ಬಳಿ ಹೇಳಿದ್ದೇನು? ಇಲ್ಲಿದೆ ವಿವರ
“ಅಪಘಾತದ ಬಗ್ಗೆ ತಿಳಿದಾಗ ನಾನು ವಿಮಾನ ನಿಲ್ದಾಣದಿಂದ ಹೊರಬರಲು ಸಿದ್ಧಳಾಗಿದ್ದೆ. ವಿಷಯ ತಿಳಿದಾಗ ನಾನು ನಡುಗಲು ಪ್ರಾರಂಭಿಸಿದೆ. ನನ್ನ ಕಾಲುಗಳು ನಡುಗಲು ಪ್ರಾರಂಭಿಸಿದವು. ಸ್ವಲ್ಪ ಸಮಯದವರೆಗೆ ನಾನು ಶಾಕ್ಗೆ ಒಳಗಾಗಿದ್ದೆ” ಎಂದು ಭೂಮಿ ವಿಮಾನವನ್ನು ತಪ್ಪಿಸಿಕೊಂಡ ನಂತರ ಹೇಳಿದ್ದಾರೆ.
#WATCH | Bhoomi Chauhan, a resident of Gujarat’s Bharuch, missed yesterday’s flight, AI-171, which crashed and 241 of 242 on board, including crew members, lost their lives.
Bhoomi Chauhan says, “…We arrived at the check-in gate 10 minutes late, but they didn’t allow me, and I… pic.twitter.com/T1AqU9SSz0
— ANI (@ANI) June 13, 2025
ಭೂಮಿ ತನ್ನ ಪತಿಯೊಂದಿಗೆ ವಾಸಿಸುವ ಲಂಡನ್‌ಗೆ ಪ್ರಯಾಣಿಸಲು AI 171 ಅನ್ನು ಹತ್ತಲು ನಿರ್ಧರಿಸಿದ್ದರು. ಅವರು ರಜೆ ಪಡೆದು 2 ವರ್ಷಗಳ ನಂತರ ಭಾರತಕ್ಕೆ ಭೇಟಿ ನೀಡಿದ್ದರು. ಆದರೆ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡ ಕಾರಣದಿಂದ ಅವರು 10 ನಿಮಿಷಗಳ ನಂತರ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಬಂದರು.
“ಏರ್ ಇಂಡಿಯಾ ವಿಮಾನದ ಬೋರ್ಡಿಂಗ್ ಕಾರ್ಯ ಮಧ್ಯಾಹ್ನ 12.10ಕ್ಕೆ ಮುಗಿದಿತ್ತು. ನಾನು ಮಧ್ಯಾಹ್ನ 12.20ಕ್ಕೆ ತಲುಪಿದೆ. ನಾನು ಚೆಕ್-ಇನ್ ಗೇಟ್ ತಲುಪಿದ್ದೆ ಮತ್ತು ವಿಮಾನ ಹತ್ತಲು ಅವಕಾಶ ನೀಡುವಂತೆ ವಿನಂತಿಸಿದೆ. ನಾನು ಅವರಿಗೆ ಎಲ್ಲಾ ಫಾರ್ಮಾಲಿಟೀಸ್ಗಳನ್ನು ಬೇಗನೆ ಮುಗಿಸುತ್ತೇನೆ ಎಂದು ಹೇಳಿದೆ. ಆದರೆ ಅವರು ನನಗೆ ಒಳಗೆ ಹೋಗಲು ಅವಕಾಶ ನೀಡಲಿಲ್ಲ” ಎಂದು ಅವರು ಹೇಳಿದರು.
ಇದನ್ನೂ ಓದಿ: Air India Plane Crash: ಡಿಎನ್ಎ ಪರೀಕ್ಷೆ ಬಳಿಕ ಸಾವಿನ ಸಂಖ್ಯೆ ಘೋಷಣೆ; ಏರ್ ಇಂಡಿಯಾ ಅಪಘಾತದ ಬಗ್ಗೆ ಅಮಿತ್ ಶಾ ಹೇಳಿಕೆ
“ನಾನು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದರಿಂದ ತಡವಾಯಿತು. ಆಗ ಕೇವಲ 10 ನಿಮಿಷ ತಡವಾಗಿದ್ದಕ್ಕೆ ಬೋರ್ಡಿಂಗ್ ನಿರಾಕರಿಸಿದ್ದಕ್ಕೆ ನಾನು ಅಸಮಾಧಾನಗೊಂಡೆ. ಬಹಳ ಬೇಸರವಾಗಿತ್ತು. ಆದರೆ, ವಿಮಾನ ಅಪಘಾತಕ್ಕೀಡಾಗಿದೆ ಎಂದು ತಿಳಿದಾಗ ನಾನಿನ್ನೂ ವಿಮಾನ ನಿಲ್ದಾಣದ ಹೊರಗಿದ್ದೆ. ನನ್ನ ಗಣಪತಿ ಬಪ್ಪ ನನ್ನನ್ನು ಉಳಿಸಿದರು” ಎಂದು ಅವರು ಹೇಳಿದ್ದಾರೆ.
40 ವರ್ಷದ ಬ್ರಿಟಿಷ್-ಭಾರತೀಯ ವ್ಯಕ್ತಿ ವಿಶ್ವಾಸ್ ಕುಮಾರ್ ರಮೇಶ್ ನಿನ್ನೆಯ ವಿಮಾನ ಅಪಘಾತದಲ್ ಬದುಕುಳಿದ ಏಕೈಕ ವ್ಯಕ್ತಿ. ಉಳಿದ 239 ಪ್ರಯಾಣಿಕರು, ಇಬ್ಬರು ಪೈಲಟ್‌ಗಳು ಮತ್ತು 10 ಸಿಬ್ಬಂದಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








