ಅಗತ್ಯ ಪ್ರಮಾಣದ ಲಸಿಕೆ ಸಿಕ್ಕರೆ 24 ಗಂಟೆಗಳಲ್ಲಿ ಇಡೀ ಮುಂಬೈಗೆ ಲಸಿಕೆ ವಿತರಣೆ ಮಾಡುತ್ತೇವೆ; ಮುಂಬೈ ಮೇಯರ್ ದೃಢ ನುಡಿ

Mumbai Mayor KIshori Pednekar: ಕಳೆದ 24 ಗಂಟೆಗಳಲ್ಲಿ 3,039 ಕೊವಿಡ್ ಪ್ರಕರಣಗಳು ಮುಂಬೈನಲ್ಲಿ ಪತ್ತೆಯಾಗಿದ್ದು 71 ಜನರು ಮೃತಪಟ್ಟಿದ್ದಾರೆ. ಕಳೆದ ಒಂದು ವಾರದಿಂದಲೂ ದೇಶದ ವಾಣಿಜ್ಯ ರಾಜಧಾನಿಯಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆ ದಿನವೊಂದಕ್ಕೆ ನಾಲ್ಕು ಸಾವಿರಕ್ಕಿಂತಲೂ ಕಡಿಮೆ ಇದೆ ಎಂಬುದು ಇಲ್ಲಿ ಉಲ್ಲೇಖನೀಯ.

ಅಗತ್ಯ ಪ್ರಮಾಣದ ಲಸಿಕೆ ಸಿಕ್ಕರೆ 24 ಗಂಟೆಗಳಲ್ಲಿ ಇಡೀ ಮುಂಬೈಗೆ ಲಸಿಕೆ ವಿತರಣೆ ಮಾಡುತ್ತೇವೆ; ಮುಂಬೈ ಮೇಯರ್ ದೃಢ ನುಡಿ
ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್
Follow us
guruganesh bhat
|

Updated on: May 08, 2021 | 9:10 PM

ಮುಂಬೈ: ಸ್ಥಳೀಯ ಆಡಳಿತಗಳಿಗೆ ಅವಶ್ಯಕವಿರುವ ಕೊರೊನಾ ಲಸಿಕೆಯನ್ನು ಒದಗಿಸಿದಲ್ಲಿ ಕೇವಲ 24 ಗಂಟೆಯಲ್ಲಿ ಇಡೀ ಮುಂಬೈ ನಗರಕ್ಕೆ ಲಸಿಕೆ ವಿತರಣೆ ಮಾಡುತ್ತೇವೆ ಅಚಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸದ್ಯ ಕೊವಿಡ್ ಎರಡನೆ ಅಲೆಗೆ ಪ್ರಬಲ ಸೆಡ್ಡು ಹೊಡೆದಿರುವ ಮುಂಬೈಗೆ ಅಗತ್ಯ ಪ್ರಮಾಣದಲ್ಲಿ ಕೊವಿಡ್ ಲಸಿಕೆ ದೊರೆಯುತ್ತಿಲ್ಲ. ಕೇಂದ್ರ ಸರ್ಕಾರ ಕೊವಿಡ್ ಲಸಿಕೆಯನ್ನು ಅಷ್ಟೊಂದು ವೇಗವಾಗಿ ಉತ್ಪಾದಿಸುತ್ತಿಲ್ಲ. ದೇಶದಲ್ಲೇ ಅತಿ ಬೃಹತ್ ನಗರಗಳಲ್ಲೊಂದಾದ ಮುಂಬೈಗೆ ಭಾರಿ ಪ್ರಮಾಣದ ಲಸಿಕೆಯ ಅಗತ್ಯವಿದೆ. ನಮ್ಮ ಅಗತ್ಯಕ್ಕೆ ತಕ್ಕಂತೆ ಮಹಾರಾಷ್ಟ್ರ ರಾಜ್ಯ ಸರ್ಕಾರ ಮುಂಬೈಗೆ ಹೆಚ್ಚಿನ ಪ್ರಮಾಣದಲ್ಲೇ ಲಸಿಕೆಯನ್ನು ಪೂರೈಸುತ್ತಿದೆ. ಆದರೆ ಕೇಂದ್ರ ಸರ್ಕಾರದಿಂದ ಮಹಾರಾಷ್ಟ್ರಕ್ಕೆ ದೊರೆಯುವ ಲಸಿಕೆ ಪ್ರಮಾಣವೇ ಕಡಿಮೆ ಇದೆ ಎಂದು ಅವರು ಕೇಂದ್ರ ಸರ್ಕಾರವನ್ನು ದೂರಿದ್ದಾರೆ.

ಒಂದಾನುವೇಳೆ ಮುಂಬೈ ಮಹಾನಗರಕ್ಕೆ ಅಗತ್ಯವಿರುವ ಕೊವಿಡ್ ಲಸಿಕೆಗಳು ದೊರೆತಲ್ಲಿ ದಿನದ ಮೂರು ಶಿಫ್ಟ್​ನಲ್ಲಿಯೂ ಕೆಲಸ ನಿರ್ವಹಿಸಿ ಕೇವಲ ಒಂದೇ ದಿನದಲ್ಲಿ ಇಡೀ ಮುಂಬೈನ ಜನತೆಗೆ ಲಸಿಕೆ ವಿತರಣೆ ಮಾಡುತ್ತೇವೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅಂದಹಾಗೆ ಮುಂಬೈನಲ್ಲಿ ಏಪ್ರಿಲ್ ತಿಂಗಳಲ್ಲಿ ಅತಿ ಹೆಚ್ಚು ಕೊವಿಡ್ ಪ್ರಕರಣಗಳು ಕಂಡುಬರುತ್ತಿದ್ದವು. ಆದರೆ ಮೇ ತಿಂಗಳ ಮೊದಲ ವಾರದಲ್ಲಿ ಕೊವಿಡ್ ಸೋಂಕಿತರ ಪ್ರಮಾಣ ಮೂರು ಸಾವಿರದ ಆಸುಪಾಸಿನಲ್ಲಿದೆ. ಮುಂಬೈ ಕೊವಿಡ್ ವಿರುದ್ಧ ಕೈಗೊಂಡ ಹೋರಾಟದ ಮಾದರಿಗೆ ಸ್ವತಃ ಸುಪ್ರೀಂಕೋರ್ಟ್ ಸಹ ಮೆಚ್ಚುಗೆ ವ್ಯಕ್ತಪಡಿಸಿದೆ. ಅಲ್ಲದೇ ದೇಶದ ಇತರ ನಗರ ಮತ್ತು ರಾಜ್ಯಗಳಿಗೂ ಮುಂಬೈ ಮಾದರಿಯನ್ನು ಅನುಸರಿಸುವಂತೆ ಸಲಹೆ ನೀಡಿದೆ.

ಸದ್ಯ ಮುಂಬೈ ನಗರದಲ್ಲಿ 49,499 ಕೊವಿಡ್ ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಗಳಲ್ಲಿ 3,039 ಕೊವಿಡ್ ಪ್ರಕರಣಗಳು ಮುಂಬೈನಲ್ಲಿ ಪತ್ತೆಯಾಗಿದ್ದು 71 ಜನರು ಮೃತಪಟ್ಟಿದ್ದಾರೆ. ಕಳೆದ ಒಂದು ವಾರದಿಂದಲೂ ದೇಶದ ವಾಣಿಜ್ಯ ರಾಜಧಾನಿಯಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆ ದಿನವೊಂದಕ್ಕೆ ನಾಲ್ಕು ಸಾವಿರಕ್ಕಿಂತಲೂ ಕಡಿಮೆ ಇದೆ ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ಓದಿ: ಆಕ್ಸಿಜನ್ ಪೂರೈಕೆಗಾಗಿ 12 ಸದಸ್ಯರ ಟಾಸ್ಕ್​ಫೋರ್ಸ್ ರಚಿಸಿದ ಸುಪ್ರೀಂ; ಕರ್ನಾಟಕದ ಡಾ.ದೇವಿ ಪ್ರಸಾದ್ ಶೆಟ್ಟಿಗೂ ಸ್ಥಾನ

ಕೊವಿಡ್ 3ನೇ ಅಲೆ ಎದುರಿಸಲು ಮುಂಬೈ ಸಜ್ಜು, ಏನಿದರ ಗುಟ್ಟು?

(Will vaccinate entire Mumbai in 24 hours says Mumbai Mayor KIshori Pednekar)