WITT TV9 Global Summit 2024: ಹತ್ತು ವರ್ಷಗಳಲ್ಲಿ ರಕ್ಷಣಾ ನೀತಿ ಎಷ್ಟು ಬದಲಾಗಿದೆ? ರಾಜನಾಥ್​ ಸಿಂಗ್​ ಹೇಳಿದ್ದೇನು?

|

Updated on: Feb 27, 2024 | 11:44 AM

ಪಾಕಿಸ್ತಾನ ಎಲ್ಲಿಯವರೆಗೆ ಭಯೋತ್ಪಾದನೆಯನ್ನು ಉತ್ತೇಜಿಸುತ್ತದೆಯೋ ಅಲ್ಲಿಯವರೆಗೆ ಸಂಬಂಧ ಸುಧಾರಿಸಲು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವ ರಾಜ್​ನಾಥ್​ ಸಿಂಗ್ ಹೇಳಿದ್ದಾರೆ. ಹಾಗೆಯೇ ಕಳೆದ ಹತ್ತು ವರ್ಷಗಳಲ್ಲಿ ರಕ್ಷಣಾ ನೀತಿ ಎಷ್ಟು ಬದಲಾಗಿದೆ ಎಂಬುದರ ಕುರಿತು ಮಾತನಾಡಿದ್ದಾರೆ.

WITT TV9 Global Summit 2024: ಹತ್ತು ವರ್ಷಗಳಲ್ಲಿ ರಕ್ಷಣಾ ನೀತಿ ಎಷ್ಟು ಬದಲಾಗಿದೆ? ರಾಜನಾಥ್​ ಸಿಂಗ್​ ಹೇಳಿದ್ದೇನು?
Follow us on

‘‘ಯಾವುದೇ ದೇಶವು ಯುದ್ಧ ಪೀಡಿತ ಜಗತ್ತಿನಲ್ಲಿ ಶಾಂತಿ ಸ್ಥಾಪಿಸಲು ಸಾಧ್ಯವಾದರೆ ಅದು ಭಾರತ ಮಾತ್ರ’’ ಎಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್(Rajnath Singh) ಹೇಳಿದ್ದಾರೆ. ಟಿವಿ9 ನೆಟ್​ವರ್ಕ್​ ಆಯೋಜಿಸಿರುವ ಮೂರು ದಿನಗಳ ‘ವಾಟ್​ ಇಂಡಿಯಾ ಥಿಂಕ್ಸ್​ ಟುಡೇ’’ ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ರಷ್ಯಾ-ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿಯವರು ಕೈಗೊಂಡ ಉಪಕ್ರಮವನ್ನು ಜಗತ್ತು ನೋಡಿದೆ ಮತ್ತು ಒಪ್ಪಿಕೊಂಡಿದೆ ಎಂದು ರಾಜನಾಥ್ ಸಿಂಗ್ ಹೇಳಿದರು. ಅನೇಕ ದೇಶಗಳಲ್ಲಿ ಭಾರತದ ಪಾತ್ರವನ್ನು ಪ್ರಮುಖವೆಂದು ಪರಿಗಣಿಸಲಾಗಿದೆ ಎಂದರು.

ನೆರೆಯ ದೇಶದಲ್ಲಿ ಶಾಂತಿ ಮತ್ತು ಪಾಕಿಸ್ತಾನದಲ್ಲಿ ಸ್ಥಿರತೆಯನ್ನು ಖಚಿತಪಡಿಸುವುದು ನಮ್ಮ ಪ್ರಯತ್ನವಾಗಿದೆ.
ಪರಿಸ್ಥಿತಿಗೆ ಪಾಕಿಸ್ತಾನದ ಜನರನ್ನು ನಾವು ದೂಷಿಸುವುದಿಲ್ಲ ಬದಲಿಗೆ, ಅಲ್ಲಿನ ಆಡಳಿತಗಾರರು ಅನುಸರಿಸುವ ತಂತ್ರಗಳು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಪಾಕಿಸ್ತಾನ ಎಲ್ಲಿಯವರೆಗೆ ಭಯೋತ್ಪಾದನೆಯನ್ನು ಉತ್ತೇಜಿಸುತ್ತದೆಯೋ ಅಲ್ಲಿಯವರೆಗೆ ಸಂಬಂಧ ಸುಧಾರಿಸಲು ಸಾಧ್ಯವಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಸ್ನೇಹಿತರು ಬದಲಾಗಬಹುದು ಆದರೆ ನೆರೆಹೊರೆಯವರು ಬದಲಾಗುವುದಿಲ್ಲ ಎಂದು ಅಟಲ್ ಜಿ ಹೇಳಿದ್ದರು. ನಾನು ಗೃಹ ಸಚಿವನಾಗಿದ್ದೆ ಆದರೆ ಇಂದು ನಮ್ಮ ಗೃಹ ಸಚಿವ ಅಮಿತ್ ಶಾ ಉತ್ತಮ ಪಾತ್ರ ನಿರ್ವಹಿಸುತ್ತಿದ್ದಾರೆ. ನಾನು ಅವರನ್ನು ಪ್ರಶಂಸಿಸುತ್ತೇನೆ.

ಮತ್ತಷ್ಟು ಓದಿ: WITT TV9 Global Summit 2024: ಸಂದೇಶ್​ಖಾಲಿಯಲ್ಲಿ ನಡೆದಿದ್ದು ಮನುಷ್ಯನ ಕಲ್ಪನೆಗೂ ಮೀರಿದ್ದು: ಸ್ಮೃತಿ ಇರಾನಿ

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಮತ್ತು ನಕ್ಸಲಿಸಂ ನಿರ್ಮೂಲನೆಯಲ್ಲಿ ಅವರು ದೊಡ್ಡ ಪಾತ್ರವನ್ನು ವಹಿಸಿದ್ದಾರೆ. ಇಂದು ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ. ಕಾಶ್ಮೀರ ಅಭಿವೃದ್ಧಿ ಪಥದಲ್ಲಿ ಮುಂದಿದೆ. ಪ್ರವಾಸಿಗರು ಬರುತ್ತಿದ್ದಾರೆ. ಜನರು ಬದಲಾವಣೆಯನ್ನು ಕಾಣುತ್ತಿದ್ದಾರೆ. ನಾವು ಭಯೋತ್ಪಾದನೆಯನ್ನು ಸಹಿಸಲು ಸಾಧ್ಯವಿಲ್ಲ.

ಏರ್ ಸ್ಟ್ರೈಕ್, ಬೇಕಾದರೆ ಸರ್ಜಿಕಲ್ ಸ್ಟ್ರೈಕ್ ಆದರೆ ನಮ್ಮದೇ ವಿರೋಧ ಪಕ್ಷಗಳು ಇದಕ್ಕೆ ಪುರಾವೆ ಕೇಳುತ್ತವೆ. ಆರೋಗ್ಯಕರ ಪ್ರಜಾಪ್ರಭುತ್ವದಲ್ಲಿ ಆಲೋಚನೆಗಳು ಸ್ವಾಗತಾರ್ಹ. ನಮ್ಮ ಮಾಜಿ ಪ್ರಧಾನಿ ಅಟಲ್ ಜೀ ಅವರು ಸಂಸತ್ತಿನಲ್ಲಿ ಇಂದಿರಾಜಿ ದುರ್ಗಾ ಎಂದು ಕರೆದಿದ್ದರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡಿ, ಕಳೆದ ಹತ್ತು ವರ್ಷಗಳಲ್ಲಿ ಭಾರತವನ್ನು ವಿಶ್ವದ ಅಗ್ರ ರಫ್ತು ರಾಷ್ಟ್ರವಾಗಿ ಸೇರಿಸಲಾಗಿದೆ. ಇಂದು ನಾವು 20 ಸಾವಿರ ಕೋಟಿ ರೂ.ಗೂ ಹೆಚ್ಚು ರಫ್ತು ಮಾಡಿದ್ದು, ಶೀಘ್ರದಲ್ಲೇ ರೂ.50 ಸಾವಿರ ಕೋಟಿ ರಫ್ತು ಮಾಡುತ್ತೇವೆ ಎಂದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:44 am, Tue, 27 February 24