ತೆಲಂಗಾಣ: ಸಿಸಿಟಿವಿಯಲ್ಲಿ ಸೆರೆಯಾದ ಅಪಹರಣ ದೃಶ್ಯ; ಪೊಲೀಸರು ಹುಡುಕಾಟ ಶುರು ಮಾಡಿದಾಗ ಕಿಡ್ನಾಪ್ ಮಾಡಿದವನ ಜತೆಗೆ ಮದುವೆಯಾಗಿ ಬಂದ ಯುವತಿ

ಈ ಘಟನೆ ನಡೆದು 12ಗಂಟೆಯೊಳಗೆ ಆ ಯುವತಿ ಅಪಹರಣ ನಡೆಸಿದವರ ತಂಡದಲ್ಲಿದ್ದ ಒಬ್ಬನನ್ನು ಮದುವೆಯಾಗಿದ್ದಾಳೆ. ಆತ ಈಕೆಯ ಬಾಯ್ ಫ್ರೆಂಡ್ ಆಗಿದ್ದು, ಈ ಹಿಂದೆ ಆತನ ಜತೆ ಓಡಿಹೋಗಲು ಪ್ರಯತ್ನಿಸಿದ್ದಳು ಎಂದು ಹೇಳಲಾಗಿದೆ.

ತೆಲಂಗಾಣ: ಸಿಸಿಟಿವಿಯಲ್ಲಿ ಸೆರೆಯಾದ ಅಪಹರಣ ದೃಶ್ಯ; ಪೊಲೀಸರು ಹುಡುಕಾಟ ಶುರು ಮಾಡಿದಾಗ ಕಿಡ್ನಾಪ್ ಮಾಡಿದವನ ಜತೆಗೆ ಮದುವೆಯಾಗಿ ಬಂದ ಯುವತಿ
ತೆಲಂಗಾಣದಲ್ಲಿ ವಿವಾಹವಾದ ದಂಪತಿ
Follow us
| Updated By: ರಶ್ಮಿ ಕಲ್ಲಕಟ್ಟ

Updated on: Dec 20, 2022 | 8:31 PM

ಹೈದರಾಬಾದ್: ತೆಲಂಗಾಣದ (Telangana)ಗ್ರಾಮವೊಂದರಲ್ಲಿ 18 ವರ್ಷದ ಯುವತಿಯನ್ನು ಯುವಕರು ಅಪಹರಿಸುತ್ತಿರುವ ದೃಶ್ಯವೊಂದು ಸಿಸಿಟಿವಿಯಲ್ಲಿ (CCTV) ಸೆರೆಯಾಗಿತ್ತು. ಆ ದೃಶ್ಯದಲ್ಲಿ ಮದುಮಗಳ ವೇಷಭೂಷಣದಲ್ಲಿರುವ ಯುವತಿಯನ್ನು ಅಹರಿಸುತ್ತಿರುವುದು ಕಾಣಬಹುದು. ಈ ಘಟನೆ ನಡೆದು 12ಗಂಟೆಯೊಳಗೆ ಆ ಯುವತಿ ಅಪಹರಣ ನಡೆಸಿದವರ ತಂಡದಲ್ಲಿದ್ದ ಒಬ್ಬನನ್ನು ಮದುವೆಯಾಗಿದ್ದಾಳೆ. ಆತ ಈಕೆಯ ಬಾಯ್ ಫ್ರೆಂಡ್ ಆಗಿದ್ದು, ಈ ಹಿಂದೆ ಆತನ ಜತೆ ಓಡಿಹೋಗಲು ಪ್ರಯತ್ನಿಸಿದ್ದಳು ಎಂದು ಹೇಳಲಾಗಿದೆ. ಅನ್ಯ ಜಾತಿಯ ಯುವಕನೊಂದಿಗಿನ ಸಂಬಂಧಕ್ಕೆ ಅಪ್ಪ ವಿರೋಧ ವ್ಯಕ್ತ ಪಡಿಸಿದ್ದರು. ಇದರಿಂದಾಗಿ ನನಗೆ ಮತ್ತು ನನ್ನ ಗಂಡನಿಗೆ ಪ್ರಾಣಪಾಯವಾಗುತ್ತದೆ ಎಂಬ ಭಯವಿತ್ತು ಎಂದು ಯುವತಿ ಹೇಳಿದ್ದಾಳೆ.10 ತಿಂಗಳ ಹಿಂದೆ ಇವರಿಬ್ಬರೂ ಮದುವೆಯಾಗಿದ್ದರು. ಆಗ ಯುವತಿ ಅಪ್ರಾಪ್ತೆಯಾಗಿದ್ದ ಕಾರಣ 24ರಹರೆಯದ ಆಕೆಯ ಗಂಡನ ವಿರುದ್ಧ ಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹ ಆರೋಪದಡಿ ಪ್ರಕರಣ ದಾಖಲಾಗಿತ್ತು. ಇದೀಗ ಆಕೆಗೆ ಮದುವೆಯ ವಯಸ್ಸಾಗಿದೆ. ಬೆಳಗ್ಗೆ ನಡೆದ ಅಪಹರಣ ದೃಶ್ಯ ನಾಟಕವಾಗಿತ್ತು ಎಂದು ಆಕೆ ಹೇಳಿದ್ದಾಳೆ. ಆಕೆಯನ್ನು ಕಾರಿನೊಳಗೆ ದೂಡಿದಾಗ ನಾಲ್ವರು ಯುವಕರು ಮುಖ ಮುಚ್ಚಿಕೊಂಡಿದ್ದರಿಂದ, ಆಕೆ ತನ್ನನ್ನು ಅಪಹರಿಸಲಾಗುತ್ತಿದೆ ಎಂದು ಭಾವಿಸಿದ್ದಾಳೆ .ಆದರೆ ಅವಳು “ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ” ವ್ಯಕ್ತಿಯನ್ನು ನೋಡಿದಾಗ, ದೇವಸ್ಥಾನದಲ್ಲಿ ಮದುವೆಯಾಗಲು ನಿರ್ಧರಿಸಿದೆವು ಎಂದು ಯುವತಿ ಹೇಳಿದ್ದಾಳೆ.

ಆದಾಗ್ಯೂ, ವಧುವಿನ ಉಡುಗೆಯಲ್ಲಿ  ಆಕೆ ನಿಂತಿದ್ದರಿಂದ ಇದೊಂದು ಪೂರ್ವ ಯೋಜಿತ ಕೆಲಸ ಎಂಬುದು ಸ್ಪಷ್ಟವಾಗಿದೆ..

ಗಲ್ಫ್‌ನಲ್ಲಿ ಕೆಲಸ ಮಾಡಿದ ವ್ಯಕ್ತಿ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದರೆ, ಮಹಿಳೆಯ ಜಾತಿಯನ್ನು ಇತರ ಹಿಂದುಳಿದ ವರ್ಗಗಳ (ಒಬಿಸಿ) ಸಮುದಾಯದವಳು. ಆಕೆ ಕಾಲೇಜು ವಿದ್ಯಾರ್ಥಿನಿಯಾಗಿದ್ದು ಆಕೆಯ ತಂದೆ ಡ್ರೈವರ್ ಆಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Fact Check: ಸುಳ್ಳು ಸುದ್ದಿ ಹರಡುತ್ತಿದ್ದ ಮೂರು ಯೂಟ್ಯೂಬ್ ಚಾನೆಲ್‌ಗಳನ್ನು ಬಹಿರಂಗಪಡಿಸಿದ ಪಿಐಬಿ ಫ್ಯಾಕ್ಟ್ ಚೆಕ್ ಘಟಕ

ಬೆಳಿಗ್ಗೆ 5:30 ರ ಸುಮಾರಿಗೆ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯಿಂದ ಮಹಿಳೆಯನ್ನು ಕರೆದೊಯ್ದ ನಂತರ ಪೊಲೀಸರು ಮಹಿಳೆಯನ್ನು ಪತ್ತೆಹಚ್ಚಲು ಆರು ತಂಡಗಳನ್ನು ರಚಿಸಿದ್ದರು. ಮೂವರು ಪುರುಷರು ಕಾರಿನಿಂದ ಇಳಿದು, ತಂದೆಯನ್ನು ತಳ್ಳಿ ಮಹಿಳೆಯನ್ನು ಹಿಡಿದುಕೊಂಡು ಹೋಗುತ್ತಿರುವುದನ್ನು ಸಿಸಿಟಿವಿ ದೃಶ್ಯದಲ್ಲಿದೆ. “ಅಪಹರಣಕಾರರಲ್ಲಿ ಒಬ್ಬರು ಮಹಿಳೆಯ ಗ್ರಾಮದವರು. ಅವರು ಈ ಹಿಂದೆ ಆಕೆಯೊಂದಿಗೆ ಸ್ನೇಹದಲ್ಲಿದ್ದವರು ಎಂದು ಶಂಕಿಸಲಾಗಿದೆ” ಎಂದು ಇನ್ಸ್‌ಪೆಕ್ಟರ್ ಕಿರಣ್ ಕುಮಾರ್ ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ