ಮದುವೆಯಾಗಿ ವರ್ಷದಲ್ಲೇ ಮಹಿಳೆ ಸಾವು, ಕೋಪದಲ್ಲಿ ಬೀಗರ ಮನೆಗೆ ಬೆಂಕಿ ಇಟ್ಟ ಪೋಷಕರು, ಇಬ್ಬರು ಸಾವು
ಮದುವೆಯಾಗಿ ವರ್ಷದಲ್ಲೇ ಮಹಿಳೆಯೊಬ್ಬಳು ಸಾವನ್ನಪ್ಪಿದ್ದು, ಕೋಪಗೊಂಡ ಆಕೆಯ ಪೋಷಕರು ಬೀಗರ ಮನೆಗೆ ಬೆಂಕಿ ಇಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮದುವೆಯಾಗಿ ವರ್ಷದಲ್ಲೇ ಮಗಳು ಸಾವನ್ನಪ್ಪಿದ್ದು, ಈ ಕೋಪದಲ್ಲಿ ಆಕೆಯ ಪೋಷಕರು ಬೀಗರ ಮನೆಗೆ ಬೆಂಕಿ ಇಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಅಂಶಿಕಾ ಕೇಸರವಾಣಿ ಎಂಬ ಮಹಿಳೆ ಸೋಮವಾರ ರಾತ್ರಿ ತನ್ನ ಅತ್ತೆಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕಳೆದ ವರ್ಷ ಫೆಬ್ರವರಿಯಲ್ಲಿ ಆಕೆ ಮದುವೆಯಾಗಿದ್ದಳು.
ಅಂಶಿಕಾ ಸಾವಿನ ಸುದ್ದಿ ಹೊರಬಿದ್ದ ಕೂಡಲೇ ಆಕೆಯ ಸಂಬಂಧಿಕರು ಆಕೆಯ ಅತ್ತೆಯ ಮನೆಗೆ ಧಾವಿಸಿ ಯುವತಿಯನ್ನು ವರದಕ್ಷಿಣೆಗಾಗಿ ಕಿರುಕುಳ ನೀಡಿ ಆತ್ಮಹತ್ಯೆಗೆ ದೂಡಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸ್ ತಂಡವು ಸ್ಥಳಕ್ಕೆ ತಲುಪಿದಾಗ ಎರಡೂ ಕಡೆಯವರು ಜಗಳವಾಡುತ್ತಿದ್ದರು. ಮಹಿಳೆಯ ತಾಯಿ ಕಡೆಯವರು ಮನೆಗೆ ಬೆಂಕಿ ಹಚ್ಚಿದ್ದರು. ಪೊಲೀಸರು ತಕ್ಷಣವೇ ಐವರನ್ನು ರಕ್ಷಣೆ ಮಾಡಿದ್ದಾರೆ.
ಅಗ್ನಿಶಾಮಕ ದಳದವರು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬೆಂಕಿಯನ್ನು ನಂದಿಸುತ್ತಿದ್ದಂತೆ, ಇಡೀ ಮನೆಯನ್ನು ಹುಡುಕಾಡಿದಾಗ ಎರಡು ಶವಗಳು ಕಾಣಿಸಿತ್ತು. ಅವರನ್ನು ಮಹಿಳೆಯ ಮಾವ ರಾಜೇಂದ್ರ ಕೇಸರವಾಣಿ ಮತ್ತು ಬಾಲಕಿಯ ಅತ್ತೆ ಶೋಭಾ ದೇವಿ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮತ್ತಷ್ಟು ಓದಿ: ತನಗೆ ಇಷ್ಟವಾದ ಅಡುಗೆ ಮಾಡಲಿಲ್ಲ ಎಂದು ಲಿವ್-ಇನ್ ಸಂಗಾತಿಯ ಹತ್ಯೆಗೈದ ವ್ಯಕ್ತಿ
ಅಂಥದ್ದೇ ಮತ್ತೊಂದು ಘಟನೆ
ಇತ್ತೀಚೆಗಷ್ಟೇ ಮದುವೆಯಾಗಿದ್ದ ನವವಿವಾಹಿತೆಯ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತಯಾಗಿತ್ತು. ಉತ್ತರ ಪ್ರದೇಶದ ಅಜಂಗಢ ಜಿಲ್ಲೆಯ ನಿವಾಸಿ ಪರಸ್ ಅವರು ಪ್ರಸ್ತುತ ಪಶ್ಚಿಮ ದೆಹಲಿಯ ಉತ್ತಮ್ ನಗರದಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದ. ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಕಿರಿಯ ಮಗಳು ಮಾಧುರಿ ಭಾರ್ತಿ ಅವರನ್ನು ಫೆಬ್ರವರಿ 17, 2024 ರಂದು ಸತ್ರೋಡ್ ಗ್ರಾಮದ ಬಳಿಯ ಮಸ್ತನಾಥ್ ಕಾಲೋನಿಯಲ್ಲಿ ವಾಸಿಸುವ ಪ್ರದೀಪ್ ಅವರೊಂದಿಗೆ ವಿವಾಹವಾಗಿತ್ತು.
ಮದುವೆಯ ನಂತರ ಮಗಳು ಅತ್ತೆಯ ಮನೆಯಲ್ಲಿ ವಾಸವಾಗಿದ್ದಳು. ಮದುವೆಯಾದ ಕೆಲವೇ ದಿನಗಳಲ್ಲಿ ಪ್ರದೀಪ್ ಮತ್ತು ಆತನ ಅತ್ತೆಯಂದಿರು ಮಗಳು ಮಾಧುರಿಗೆ ಕಿರುಕುಳ ನೀಡಲಾರಂಭಿಸಿದರು. ಈ ಬಗ್ಗೆ ಮಗಳು ಕರೆ ಮಾಡಿ ತಿಳಿಸಿದ್ದಳು. ಏಕಾಏಕಿ ಒಂದು ದಿನ ಅಳಿಯ ಪ್ರದೀಪ್ ಕರೆ ಮಾಡಿ ಮಾನಸಿಕ ಸಮಸ್ಯೆಯಿಂದ ಮಾಧುರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ