ಲಿವ್ ಇನ್ ಸಂಗಾತಿಯ ಭಯಪಡಿಸಲು ರೈಲ್ವೆ ಹಳಿ ಮೇಲೆ ಹಾರಿದ ಮಹಿಳೆ, ರೈಲು ಹರಿದು ಸಾವು
ಮಹಿಳೆಯೊಬ್ಬಳು ಲಿವ್-ಇನ್ ಸಂಗಾತಿ ಜತೆ ಜಗಳವಾಡಿ ಆತನನ್ನು ಭಯ ಪಡಿಸಲು ಹೋಗಿ ಪ್ರಾಣ ಕಳೆದುಕೊಂಡಿರುವ ಘಟನೆ ಆಗ್ರಾದಲ್ಲಿ ನಡೆದಿದೆ.
ಮಹಿಳೆಯೊಬ್ಬರು ಲಿವ್-ಇನ್ ಸಂಗಾತಿ(Live In Partner)ಯನ್ನು ಭಯಪಡಿಸಲು ಹೋಗಿ ಪ್ರಾಣಬಿಟ್ಟಿರುವ ಘಟನೆ ಆಗ್ರಾದಲ್ಲಿ ನಡೆದಿದೆ. ಆಗ್ರಾದ ರಾಜಾ ಕಿ ಮಂಡಿ ನಿಲ್ದಾಣದಲ್ಲಿ ರೈಲಿಗೆ ಸಿಲುಕಿ ರಾಣಿ ಎಂಬ ಮಹಿಳೆ ಪ್ರಾಣ ಕಳೆದುಕೊಂಡಿದ್ದಾರೆ. ಸೋಮವಾರ ರಾತ್ರಿ 11:08 ರ ಸುಮಾರಿಗೆ ಈ ಘಟನೆ ನಡೆದಿದ್ದು, ರಾಣಿ ತನ್ನ ಲೈವ್-ಇನ್ ಸಂಗಾತಿ ಕಿಶೋರ್ ಎಂಬಾತನೊಂದಿಗೆ ತೀವ್ರ ವಾಗ್ವಾದ ನಡೆಸಿದ್ದರು, ನಂತರ ಅವರನ್ನು ಹೆದರಿಸಲು ರೈಲ್ವೆ ಹಳಿಗೆ ಹಾರಿದ್ದಾರೆ ಎಂದು ವರದಿಯಾಗಿದೆ.
ಪೊಲೀಸ್ ವರದಿ ಪ್ರಕಾರ, ರಾಣಿ ಮತ್ತು ಕಿಶೋರ್ ಲೋಹಮಂಡಿ ಪ್ರದೇಶದ ಬರ್ಫ್ ವಾಲಿ ಗಲಿಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಕಿಶೋರ್ ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಕುಡಿದ ಸ್ಥಿತಿಯಲ್ಲಿ ಮನೆಗೆ ಮರಳಿದ್ದರು.
ಮಹಿಳೆ ಅವರ ಕುಡಿಯುವ ಚಟದ ಬಗ್ಗೆ ಜಗಳ ಶುರು ಮಾಡಿದ್ದರು. ರಾಣಿ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಳು. ಠಾಣೆ ತಲುಪಿದ ನಂತರ ಇಬ್ಬರೂ ಪ್ಲಾಟ್ ಫಾರಂ ನಂಬರ್ 2ರಲ್ಲಿ ಕುರ್ಚಿಗಳ ಮೇಲೆ ಕುಳಿತು ಮಾತಿನ ಚಕಮಕಿ ಮುಂದುವರೆಸಿದರು. ಕಿಶೋರ್ನನ್ನು ಹೆದರಿಸುವ ಉದ್ದೇಶದಿಂದ ರಾಣಿ ಟ್ರ್ಯಾಕ್ಗಳ ಮೇಲೆ ಹಾರಿದ್ದಾರೆ, ಆದರೆ ಅದೇ ಸಮಯದಲ್ಲಿ ರೈಲು ಬಂದು ಆಕೆಯ ಮೇಲೆ ಹರಿದಿದೆ. ಕೂಡಲೇ ಸಾವನ್ನಪ್ಪಿದ್ದಾರೆ.
ಮತ್ತಷ್ಟು ಓದಿ:ಪ್ರೀತಿಸಿ ಮದುವೆಯಾಗಿದ್ದ ಹೆಂಡತಿ, ಕುಟುಂಬದಿಂದಲೇ ಕೊಲೆಗೆ ಯತ್ನ; ಪೊಲೀಸರ ಸಮಯ ಪ್ರಜ್ಞೆಯಿಂದ ಉಳಿತು ಜೀವ
ತಕ್ಷಣ ಕೇರಳ ಎಕ್ಸ್ ಪ್ರೆಸ್ ರೈಲು ಬಂದಿದೆ, ಆದರೆ ಆ ಸಮಯದಲ್ಲಿ ಪ್ಲಾಟ್ಫಾರಂಗೆ ಹತ್ತಲು ಸಾಧ್ಯವಾಗಿಲ್ಲ. ಪ್ಲಾಟ್ಫಾರಂ ಹಾಗೂ ರೈಲಿನಡಿ ಸಿಲುಕಿದ್ದರು. ದುರದೃಷ್ಟವಶಾತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ರಾಣಿ ಕಿಶೋರ್ ಜೊತೆ ಒಂದು ವರ್ಷದಿಂದ ಸಂಬಂಧ ಹೊಂದಿದ್ದಳು.
ಅಪಘಾತದ ಬಗ್ಗೆ ರಾಣಿಯ ತಂದೆ ವಿನೋದ್ ಅವರಿಗೆ ಮಾಹಿತಿ ನೀಡಲಾಯಿತು. ರಾಣಿಗೆ ಹಿಂದಿನ ಮದುವೆಯಿಂದ ಮೂವರು ಗಂಡು ಮಕ್ಕಳಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಆಕೆ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದಳು, ಹಿರಿಯ ಮಗ ಪ್ರತ್ಯೇಕವಾಗಿದ್ದ. ರಾಣಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಇನ್ಸ್ ಪೆಕ್ಟರ್ ಬಹದ್ದೂರ್ ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ