ಭಾವಿ ಅಳಿಯನ ಜತೆ ಓಡಿ ಹೇಗಿದ್ದೇಕೆ? ಕಾರಣ ಕೊಟ್ಟ ಮಹಿಳೆ

ಉತ್ತರ ಪ್ರದೇಶದ ಅಲಿಗಢದಲ್ಲಿ ತನ್ನ ಮಗಳ ಭಾವಿ ಅಳಿಯನೊಂದಿಗೆ ಓಡಿಹೋಗಿದ್ದ ಮಹಿಳೆಯನ್ನು ನೇಪಾಳ ಗಡಿಯ ಬಳಿ ತನ್ನ ಪ್ರಿಯಕರನೊಂದಿಗೆ ಬಂಧಿಸಲಾಗಿದೆ. ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ನಡೆಸಿದಾಗ, ಸಪ್ನಾ ಮನೆಯಿಂದ ಪರಾರಿಯಾಗಲು ನಿಜವಾದ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಸಪ್ನಾ ನೀಡಿದ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದೆ.

ಭಾವಿ ಅಳಿಯನ ಜತೆ ಓಡಿ ಹೇಗಿದ್ದೇಕೆ? ಕಾರಣ ಕೊಟ್ಟ ಮಹಿಳೆ
ಮಹಿಳೆ

Updated on: Apr 18, 2025 | 10:27 AM

ಅಲಿಗಢ, ಏಪ್ರಿಲ್ 18: ಮಗಳು ಮದುವೆ(Marriage)ಯಾಗಬೇಕಿದ್ದ ಯುವಕನ ಜತೆಗೆ ಪರಾರಿಯಾಗಿದ್ದ ಮಹಿಳೆಯನ್ನು ಪ್ರಿಯಕರನೊಂದಿಗೆ ನೇಪಾಳ ಗಡಿ ಬಳಿ  ಬಂಧಿಸಲಾಗಿದೆ. ಪೊಲೀಸರ ವಿಚಾರಣೆ ಸಮಯದಲ್ಲಿ ತಾನು ಓಡಿ ಹೋಗಿದ್ದೇಕೆ ಎನ್ನುವ ವಿಚಾರವನ್ನು ಬಹಿರಂಗಗೊಳಿಸಿದ್ದಾರೆ. ವರ್ಷಗಳಿಂದ ನಾನು ಸಹಿಸಿಕೊಂಡು ಬಂದಿರುವ ಕೌಟುಂಬಿಕ ದೌರ್ಜನ್ಯ, ನಿರ್ಲಕ್ಷ್ಯವು ನಾನು ಈ ಹೆಜ್ಜೆ ಇಡುವಂತೆ ಮಾಡಿತ್ತು. ಪೊಲೀಸ್ ಠಾಣೆಯ ಒಳಗೆ ಆಕೆಯ ಹೇಳಿಕೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಮಹಿಳೆಯ ಪತಿ ಮದ್ಯವ್ಯಸನಿಯಾಗಿದ್ದು, ಆಗಾಗ ತನ್ನ ಮೇಲೆ ಹಲ್ಲೆ ನಡೆಸುತ್ತಿದ್ದ, ಅವನಿಗೆ ಕೆಲಸವಿರಲಿಲ್ಲ, ಒಮ್ಮೆ ನಾನು ಮನೆಯಿಂದ 1,500 ರೂ. ತೆಗೆದುಕೊಂಡು ಹೋಗಿದ್ದೆ, ಬೆಳಗ್ಗೆಯಿಂದ ರಾತ್ರಿವರೆಗೆ ನನ್ನನ್ನು ಥಳಿಸಿದ್ದ ಎಂದು ಅಳಲು ತೋಡಿಕೊಂಡಿದ್ದಾರೆ.

ಮಗಳ ಮದುವೆ 10 ದಿನ ಬಾಕಿ ಇರುವಾಗಲೇ ಅವರು ಭಾವಿ ಅಳಿಯನ ಜತೆ ಓಡಿ ಹೋಗಿದ್ದರು. ರಾಹುಲ್​ನನ್ನು ನಾನು ಪ್ರೀತಿ ಮಾಡುತ್ತಿದ್ದೇನೆ. ತನ್ನ ಗಂಡನ ಬಳಿಗೆ ಮರಳುವ ಉದ್ದೇಶವಿಲ್ಲ ಮತ್ತು ರಾಹುಲ್ ಜೊತೆ ವಾಸಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ
ಮಗಳ ಮದುವೆಗೂ ಮುನ್ನ ಭಾವಿ ಅಳಿಯನ ಜತೆ ಪರಾರಿಯಾದ ಅತ್ತೆ
ವರ್ಷದ ಈ ತಿಂಗಳಿನಲ್ಲಿ ಮದುವೆ ಮಾಡಿಕೊಳ್ಳಲ್ಲ… ಏಕೆ ಗೊತ್ತಾ?
ತಮ್ಮ 25ನೇ ವಿವಾಹ ವಾರ್ಷಿಕೋತ್ಸವದಲ್ಲಿ ನೃತ್ಯ ಮಾಡುತ್ತಿರುವಾಗ ಹೃದಯಾಘಾತ
ಅನ್ಯಕೋಮಿನವನೊಂದಿಗೆ ಹಿಂದೂ ಯುವತಿ ಮದುವೆ: ವಿವಾಹ ಮಾಡಿಸಿದ್ದವನಿಗೆ ಬೆದರಿಕೆ

ಗಂಡ ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ, ನಾನು ಯಾವುದೇ ಚಿನ್ನ ಅಥವಾ ನಗದನ್ನು ತೆಗೆದುಕೊಂಡು ಬಂದಿಲ್ಲ. ನೋವಿನಿಂದ ತುಂಬಿದ ಜೀವನವನ್ನು ಬಿಟ್ಟು ಹೋಗಲು ನಾನು ಬಯಸಿದ್ದೆ. ನಾನು ರಾಹುಲ್ ಜೊತೆ ಇರಲು ಬಯಸುತ್ತೇನೆ. ನನ್ನನ್ನು ಎಂದಿಗೂ ಕಾಳಜಿ ವಹಿಸದ ವ್ಯಕ್ತಿಯ ಬಳಿಗೆ ನಾನು ಹಿಂತಿರುಗಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮತ್ತಷ್ಟು ಓದಿ: ಅತ್ತೆ ಜತೆ ಭಾವಿ ಅಳಿಯ ಪರಾರಿ: ಆಸ್ತಿಯಲ್ಲಿ ಬಿಡಿಗಾಸೂ ನಿನಗಿಲ್ಲ ಎಂದ ರಾಹುಲ್ ತಂದೆ

ಆ ಮಹಿಳೆಯೇ ಮಗಳಿಗೆ ಆತನೊಂದಿಗೆ ನಿಶ್ಚಿತಾರ್ಥ ನೆರವೇರಿಸಿದ್ದಳು, ಹುಡುಗನನ್ನು ಆಕೆಯೇ ಹುಡುಕಿದ್ದಳು. ಮದುವೆಯ ಸಿದ್ಧತೆಗಳ ನೆಪದಲ್ಲಿ ವರನು ಆಗಾಗ ಅವರ ಮನೆಗೆ ಭೇಟಿ ನೀಡುತ್ತಿದ್ದ. ಕುಟುಂಬಕ್ಕೆ ತಿಳಿಯದಂತೆ, ಅಳಿಯ ಮತ್ತು ಅತ್ತೆಯ ನಡುವೆ ಸಂಬಂಧ ಬೆಳೆಯುತ್ತಿತ್ತು. ವರ ತನ್ನ ಭಾವಿ ಅತ್ತೆಗೆ ಮೊಬೈಲ್ ಫೋನ್ ಅನ್ನು ಉಡುಗೊರೆಯಾಗಿ ನೀಡಿದ್ದ, ಅದನ್ನುಯಾರೂ ಅಷ್ಟು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ.

ತಾನು ಪ್ರವಾಸಕ್ಕೆ ಹೋಗುತ್ತಿರುವುದರಿಂದ ಯಾರೂ ತನ್ನನ್ನು ಸಂಪರ್ಕಿಸಲು ಪ್ರಯತ್ನಿಸಬೇಡಿ ಎಂದು ರಾಹುಲ್ ತನ್ನ ತಂದೆಗೆ ಹೇಳಿ ಮನೆಯಿಂದ ಹೊರಟಿದ್ದ. ಅವರ ತಂದೆ ವಧುವಿನ ಕುಟುಂಬವನ್ನು ಸಂಪರ್ಕಿಸಿದ್ದರು ಆದರೆ ರಾಹುಲ್ ಅಲ್ಲಿ ಇಲ್ಲ ಮತ್ತು ವಧುವಿನ ತಾಯಿಯೂ ಇಲ್ಲ ಎಂಬುದು ಅರ್ಥಮಾಡಿಕೊಂಡಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:26 am, Fri, 18 April 25

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us