Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳಾ ಮೀಸಲಾತಿ ಮಸೂದೆ ಒಬಿಸಿ ಕೋಟಾದಿಂದ ದಿಕ್ಕು ತಪ್ಪಿಸುವ ತಂತ್ರ: ರಾಹುಲ್ ಗಾಂಧಿ

Women's reservation bill: ಸತ್ಯವೆಂದರೆ ಇಂದು ಸಂಸತ್​​​ನಲ್ಲಿ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33 ಪ್ರತಿಶತ ಮೀಸಲಾತಿ ನೀಡಬಹುದು, ಇದು ಸಂಕೀರ್ಣವಾದ ವಿಷಯವಲ್ಲ. ಸರ್ಕಾರ ಇದನ್ನು ದೇಶದ ಮುಂದೆ ಮಂಡಿಸಿದೆ. ಆದರೆ 10 ವರ್ಷಗಳ ನಂತರ ಇದನ್ನು ಜಾರಿಗೆ ತರುತ್ತದೆ. ಇದು ಜಾರಿಗೆ ಬರುತ್ತದೆಯೋ ಎಂಬುದು ಯಾರಿಗೂ ತಿಳಿದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆ ಒಬಿಸಿ ಕೋಟಾದಿಂದ ದಿಕ್ಕು ತಪ್ಪಿಸುವ ತಂತ್ರ: ರಾಹುಲ್ ಗಾಂಧಿ
ರಾಹುಲ್ ಗಾಂಧಿ
Follow us
ರಶ್ಮಿ ಕಲ್ಲಕಟ್ಟ
|

Updated on:Sep 22, 2023 | 1:49 PM

ದೆಹಲಿ ಸೆಪ್ಟೆಂಬರ್ 22: ಮಹಿಳಾ ಮೀಸಲಾತಿ (Women’s reservation bill) ಮಸೂದೆ ಚೆನ್ನಾಗಿದೆ. ಆದರೆ ಅದನ್ನು ಜಾರಿಗೆ ತರುವ ಮುನ್ನ ಜಾತಿ ಗಣತಿ ಮತ್ತು ಡಿಲಿಮಿಟೇಶನ್ ಮಾಡುವ ಅಗತ್ಯವಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಶುಕ್ರವಾರ ಹೇಳಿದ್ದಾರೆ. ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. ಇದು ಒಬಿಸಿ ಕೋಟಾದಿಂದ ಗಮನವನ್ನು ಬೇರೆಡೆಗೆ ತಿರುಗಿಸುವ ತಂತ್ರವಾಗಿದೆ. ಇದನ್ನು ಜಾರಿಗೆ ತರಲಾಗುತ್ತದೆಯೇ ಎಂದು ಯಾರಿಗೂ ತಿಳಿದಿಲ್ಲ ಎಂದು ಹೇಳಿದರು.

ಸತ್ಯವೆಂದರೆ ಇಂದು ಸಂಸತ್​​​ನಲ್ಲಿ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33 ಪ್ರತಿಶತ ಮೀಸಲಾತಿ ನೀಡಬಹುದು, ಇದು ಸಂಕೀರ್ಣವಾದ ವಿಷಯವಲ್ಲ. ಸರ್ಕಾರ ಇದನ್ನು ದೇಶದ ಮುಂದೆ ಮಂಡಿಸಿದೆ. ಆದರೆ 10 ವರ್ಷಗಳ ನಂತರ ಇದನ್ನು ಜಾರಿಗೆ ತರುತ್ತದೆ. ಇದು ಜಾರಿಗೆ ಬರುತ್ತದೆಯೋ ಎಂಬುದು ಯಾರಿಗೂ ತಿಳಿದಿಲ್ಲ ಎಂದು ಅವರು ಹೇಳಿದರು.

ನಾನು ಸಂಸತ್ತಿನಲ್ಲಿ ಒಂದು ಸಂಸ್ಥೆಯ ಬಗ್ಗೆ ಮಾತನಾಡಿದ್ದೇನೆ, ಅದು ಭಾರತ ಸರ್ಕಾರದ ಕ್ಯಾಬಿನೆಟ್ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳನ್ನು ನಿಯಂತ್ರಿಸುತ್ತದೆ. ನಾನು ಕೇಳಿದೆ 90 ಜನರಲ್ಲಿ ಕೇವಲ ಮೂವರು ಮಾತ್ರ ಒಬಿಸಿ ಸಮುದಾಯಕ್ಕೆ ಸೇರಿದವರು ಏಕೆ? ನನಗೆ ಅರ್ಥವಾಗುತ್ತಿಲ್ಲ ಪ್ರಧಾನಿ ಮೋದಿ ಪ್ರತಿದಿನ ಒಬಿಸಿಗಳ ಬಗ್ಗೆ ಮಾತನಾಡುತ್ತಾರೆ ಆದರೆ ಅವರಿಗಾಗಿ ಏನು ಮಾಡಿದರು? ಎಂದು ರಾಹುಲ್ ಪ್ರಶ್ನಿಸಿದ್ದಾರೆ.

ಮಹಿಳಾ ಕೋಟಾವನ್ನು ಮುಂದೂಡಲು ಡಿಲಿಮಿಟೇಶನ್ ಮತ್ತು ಜನಗಣತಿ ಒಂದು ನೆಪ. ಅದನ್ನು ಕಾರ್ಯಗತಗೊಳಿಸದೆ ಚುನಾವಣಾ ಸಮಸ್ಯೆಯನ್ನು ಸೃಷ್ಟಿಸಲು ಸಂಪೂರ್ಣ ಕಸರತ್ತು ನಡೆಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಏತನ್ಮಧ್ಯೆ, ವಿರೋಧ ಪಕ್ಷವು ಈ ಮಸೂದೆಯನ್ನು “ಗೇಲಿ ಮಾಡುವ ಭ್ರಮೆ” ಎಂದು ಬಣ್ಣಿಸಿದೆ.

ಇದನ್ನೂ ಓದಿ:  ಮಹಿಳಾ ಮೀಸಲಾತಿ ಬಿಲ್ ಅಂಗೀಕಾರ: ದೇಶ ನಿರ್ಮಿಸಿದ ಅಸಂಖ್ಯಾತ ಮಹಿಳೆಯರಿಗೆ ಅರ್ಪಣೆ ಎಂದ ಮೋದಿ

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವ ಮಸೂದೆಗೆ ರಾಜ್ಯಸಭೆಯು ಅವಿರೋಧವಾಗಿ ಮತ ಚಲಾಯಿಸಿದ್ದರಿಂದ ಗುರುವಾರ ಸಂಸತ್ತಿನ ಒಪ್ಪಿಗೆ ಸಿಕ್ಕಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:47 pm, Fri, 22 September 23