Sign In

By signing in or creating an account, you agree with Associated Broadcasting Company's Terms & Conditions and Privacy Policy.

UGC NET ಪರೀಕ್ಷೆ ರದ್ದು: ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದ ಶಿಕ್ಷಣ ಸಚಿವಾಲಯ

ಬುಧವಾರ, ಶಿಕ್ಷಣ ಸಚಿವಾಲಯವು ಅಧಿಸೂಚನೆಯಲ್ಲಿ ಯುಜಿಸಿ-ನೆಟ್ ಪರೀಕ್ಷೆಯನ್ನು ರದ್ದುಗೊಳಿಸಲು ನಿರ್ಧರಿಸಿದೆ ಎಂದು ಘೋಷಿಸಿತ್ತು. ದೇಶಾದ್ಯಂತ 11.21 ಲಕ್ಷ ಅಭ್ಯರ್ಥಿಗಳ ಪೈಕಿ ಶೇ.81ರಷ್ಟು ಮಂದಿ ಪರೀಕ್ಷೆ ಬರೆದಿದ್ದಾರೆ ಎಂದು ಯುಜಿಸಿ ಅಧ್ಯಕ್ಷ ಎಂ.ಜಗದೇಶ್ ಕುಮಾರ್ ಹೇಳಿದ್ದಾರೆ

UGC NET ಪರೀಕ್ಷೆ ರದ್ದು: ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದ ಶಿಕ್ಷಣ ಸಚಿವಾಲಯ
ಗೋವಿಂದ ಜೈಸ್ವಾಲ್
Follow us
ರಶ್ಮಿ ಕಲ್ಲಕಟ್ಟ
|

Updated on:Jun 20, 2024 | 4:57 PM

ದೆಹಲಿ ಜೂನ್ 20: ಯುಜಿಸಿ-ನೆಟ್ (UGC NET) ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಸಾಧ್ಯತೆ ಇರುವುದರಿಂದ ಅದನ್ನು ರದ್ದುಗೊಳಿಸಲಾಗಿದೆ ಎಂದು ಶಿಕ್ಷಣ ಸಚಿವಾಲಯ (Ministry of Education) ಗುರುವಾರ ತಿಳಿಸಿದೆ. ಎನ್‌ಟಿಎ(NTA) ಜೂನ್ 18 ರಂದು ನಡೆಸಿದ ಯುಜಿಸಿ-ನೆಟ್ ಪರೀಕ್ಷೆಯಲ್ಲಿ 9 ಲಕ್ಷ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪರೀಕ್ಷೆಯ ಪಾರದರ್ಶಕತೆಗೆ ಧಕ್ಕೆಯುಂಟಾಗಿರಬಹುದೆಂಬ ಮಾಹಿತಿ ಲಭಿಸಿರುವ ಕಾರಣ ಪರೀಕ್ಷೆಯನ್ನು ರದ್ದುಗೊಳಿಸಲು ಸಚಿವಾಲಯ ನಿರ್ಧರಿಸಿದೆ. ಮುಂದಿನ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವುದು. ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ ಎಂದು ಶಿಕ್ಷಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಗೋವಿಂದ್ ಜೈಸ್ವಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪರೀಕ್ಷೆಯ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ. ಆದರೆ ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡಲು ಅವರ ಬಳಿ ಲಭ್ಯವಿರುವ ಇನ್‌ಪುಟ್‌ಗಳ ಆಧಾರದ ಮೇಲೆ ಸ್ವಯಂ ಪ್ರೇರಿತ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ. ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದ್ದು ಪ್ರಸ್ತುತ ತನಿಖೆ ನಡೆಯುತ್ತಿರುವುದರಿಂದ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲಾಗುವುದಿಲ್ಲ ಎಂದು ಜೈಸ್ವಾಲ್ ಹೇಳಿದ್ದಾರೆ. ಪರೀಕ್ಷೆಗೆ ಹೊಸ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಬುಧವಾರ, ಶಿಕ್ಷಣ ಸಚಿವಾಲಯವು ಅಧಿಸೂಚನೆಯಲ್ಲಿ ಯುಜಿಸಿ-ನೆಟ್ ಪರೀಕ್ಷೆಯನ್ನು ರದ್ದುಗೊಳಿಸಲು ನಿರ್ಧರಿಸಿದೆ ಎಂದು ಘೋಷಿಸಿತ್ತು. ದೇಶಾದ್ಯಂತ 11.21 ಲಕ್ಷ ಅಭ್ಯರ್ಥಿಗಳ ಪೈಕಿ ಶೇ.81ರಷ್ಟು ಮಂದಿ ಪರೀಕ್ಷೆ ಬರೆದಿದ್ದಾರೆ ಎಂದು ಯುಜಿಸಿ ಅಧ್ಯಕ್ಷ ಎಂ.ಜಗದೇಶ್ ಕುಮಾರ್ ಹೇಳಿದ್ದಾರೆ. ಭಾರತೀಯ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಲ್ಲಿ ‘ಅಸಿಸ್ಟೆಂಟ್ ಪ್ರೊಫೆಸರ್’ ಮತ್ತು ‘ಜೂನಿಯರ್ ರಿಸರ್ಚ್ ಫೆಲೋಶಿಪ್ ಮತ್ತು ಅಸಿಸ್ಟೆಂಟ್ ಪ್ರೊಫೆಸರ್’ ಗೆ ಭಾರತೀಯ ಪ್ರಜೆಗಳ ಅರ್ಹತೆಯನ್ನು ನಿರ್ಧರಿಸಲು ಪರೀಕ್ಷೆಯನ್ನು ನಡೆಸಲಾಗುತ್ತದೆ.

ಯುಜಿಸಿ-ನೆಟ್ ಅನ್ನು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ) ಮೋಡ್‌ನಲ್ಲಿ ನಡೆಸುತ್ತದೆ. ಪರೀಕ್ಷೆಯನ್ನು ರದ್ದುಗೊಳಿಸಿದ ನಂತರ, ವಿರೋಧ ಪಕ್ಷಗಳು ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ‘ಪೇಪರ್ ಲೀಕ್ ಸರ್ಕಾರ’; ಯುಜಿಸಿ-ನೆಟ್ ಪರೀಕ್ಷೆಗಳ ರದ್ದತಿಗೆ ಕಾಂಗ್ರೆಸ್ ಪ್ರತಿಕ್ರಿಯೆ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎಕ್ಸ್ ಪೋಸ್ಟ್‌ನಲ್ಲಿ, “ಮೋದಿ ಸರ್ಕಾರವು ದೇಶದ ಶಿಕ್ಷಣ ಮತ್ತು ನೇಮಕಾತಿ ವ್ಯವಸ್ಥೆಯನ್ನು ಹೇಗೆ ಹಾಳುಮಾಡಿದೆ — NEET, UGC-NET, CUET (ಕಾಮನ್ ಯೂನಿವರ್ಸಿಟಿ ಪ್ರವೇಶ ಪರೀಕ್ಷೆ) ನಲ್ಲಿ ಪೇಪರ್ ಸೋರಿಕೆ, ವಂಚನೆ ಮತ್ತು ಒಟ್ಟು ಅಕ್ರಮಗಳು ಈಗ ಸಂಭವಿಸಿವೆ. ಹೆಚ್ಚು ಪ್ರಚಾರಗೊಂಡ NRA – ರಾಷ್ಟ್ರೀಯ ನೇಮಕಾತಿ ಸಂಸ್ಥೆ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:19 pm, Thu, 20 June 24

ಪಾಕಿಸ್ತಾನಕ್ಕೆ ಹೋದ ಅನುಭವವನ್ನು ಬಿಚ್ಚಿಟ್ಟ ಗ್ಲೋಬಲ್ ಕನ್ನಡಿಗ
ಪಾಕಿಸ್ತಾನಕ್ಕೆ ಹೋದ ಅನುಭವವನ್ನು ಬಿಚ್ಚಿಟ್ಟ ಗ್ಲೋಬಲ್ ಕನ್ನಡಿಗ
ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್​ಗೆ ಪಂಜಾಬ್ ಬೌಲರ್ಸ್​ ಸುಸ್ತು
ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್​ಗೆ ಪಂಜಾಬ್ ಬೌಲರ್ಸ್​ ಸುಸ್ತು
ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?
ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?
ಪೊನ್ನಣ್ಣ ಮತ್ತು ಮಂತರ್​​ಗೌಡನನ್ನು ಬಂಧಿಸಲೇಬೇಕೆಂದು ಬಿಜೆಪಿ ನಾಯಕರ ಪಟ್ಟು
ಪೊನ್ನಣ್ಣ ಮತ್ತು ಮಂತರ್​​ಗೌಡನನ್ನು ಬಂಧಿಸಲೇಬೇಕೆಂದು ಬಿಜೆಪಿ ನಾಯಕರ ಪಟ್ಟು
ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು
ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ