ಭಾರತದಲ್ಲಿ ₹12 ಸಾವಿರ ಮೌಲ್ಯದ ಒಳಗಿನ ಚೀನಾ ಮೊಬೈಲ್ ಬ್ಯಾನ್ ಆತಂಕ, ಮಾರುಕಟ್ಟೆಯಿಂದ ದೂರ ಸರಿಯುತ್ತಿರುವ ಚೀನಿ ಮೊಬೈಲ್ ಕಂಪೆನಿ
ಇತ್ತೀಚೆಗೆ ಭಾರತದಲ್ಲಿ 12,000 ರೂಪಾಯಿಗಿಂತ ಕಡಿಮೆ ಬೆಲೆಯ ಮೇಡ್ ಇನ್ ಚೈನಾ ಫೋನ್‌ಗಳನ್ನು ಸರ್ಕಾರ ನಿಷೇಧಿಸಬಹುದು ಎಂಬ ಸುದ್ದಿ ಇತ್ತು. ಆದರೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಈ ಫೋನ್‌ಗಳ ಮೇಲಿನ ನಿಷೇಧವನ್ನು ನಿರಾಕರಿಸಿದ್ದಾರೆ
ಭಾರತದಲ್ಲಿ ಚೀನಿ ಉತ್ಪನ್ನಗಳ (China Product) ವಿರುದ್ಧ ಭಾವನೆ ಹೆಚ್ಚುತ್ತಿದೆ. ಕೊರೊನಾ ಸಂಕಷ್ಟ ಹಾಗೂ ಚೀನಾ ಗಡಿ ತಂಟೆ ಬಳಿಕವಂತೂ ಚೀನಿ ಉತ್ಪನ್ನಗಳ ಮೇಲಿನ ದ್ವೇಷ ಭಾವನೆ ಭಾರತೀಯರಲ್ಲಿ ಹೆಚ್ಚುತ್ತಿದೆ. ಆದರೆ ಚೀನಾ ಉತ್ಪನ್ನಗಳ ಮೇಲೆ ಒಮ್ಮೆಲೆ ವ್ಯಾಮೋಹ ಕಡಿಮೆಯಾಗಿಲ್ಲ. ಚೀನಾ ಮೂಲದ ಮೊಬೈಲ್ ಆಪ್ ಗಳನ್ನು ಬ್ಯಾನ್ ಮಾಡಿದ ರೀತಿಯಲ್ಲಿಯೇ 12 ಸಾವಿರ ರೂ ಒಳಗಿನ ಚೀನಾ ಮೂಲದ ಕಂಪನಿಗಳ ಮೊಬೈಲ್ ಬ್ಯಾನ್ ಮಾಡುವ ಬಗ್ಗೆ ಭಾರತದಲ್ಲಿ ಚರ್ಚೆ ಆರಂಭವಾಗಿದೆ. ಭಾರತದಲ್ಲಿ ಮೊಬೈಲ್ ಬ್ಯಾನ್ ಮಾಡುವ ಇಂತಹದ್ದೊಂದು ಚರ್ಚೆ ಆರಂಭವಾಗಿದ್ದೆ ತಡ ಚೀನಾದ ಮೊಬೈಲ್ ತಯಾರಿಕಾ ಕಂಪೆನಿಗಳಲ್ಲಿ ಕಂಪನ ಶುರುವಾಗಿದೆ. ಭಾರತ ಸರ್ಕಾರದ ಬ್ಯಾನ್ ನೀತಿಗೆ ಹೆದರಿ Xiaomi, Vivo ಮತ್ತು Oppo ನಂತಹ ಚೀನಾದ ಬ್ರ್ಯಾಂಡ್‌ಗಳು ಅಗ್ಗದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಿಂದ ದೂರವಾಗಲು ಪ್ರಾರಂಭಿಸಿವೆ.
ಇತ್ತೀಚೆಗೆ ಭಾರತದಲ್ಲಿ 12,000 ರೂಪಾಯಿಗಿಂತ ಕಡಿಮೆ ಬೆಲೆಯ ಮೇಡ್ ಇನ್ ಚೈನಾ ಫೋನ್‌ಗಳನ್ನು ಸರ್ಕಾರ ನಿಷೇಧಿಸಬಹುದು ಎಂಬ ಸುದ್ದಿ ಇತ್ತು. ಆದರೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಈ ಫೋನ್‌ಗಳ ಮೇಲಿನ ನಿಷೇಧವನ್ನು ನಿರಾಕರಿಸಿದ್ದಾರೆ. ಆದರೂ ಈ ಚೀನಾದ ಕಂಪನಿಗಳು 10,000 ರೂಪಾಯಿಗಿಂತ ಕಡಿಮೆ ಬೆಲೆಯ ಫೋನ್‌ಗಳನ್ನು ಬಿಡುಗಡೆ ಮಾಡುವುದನ್ನು ನಿಲ್ಲಿಸಿವೆ. ಚೀನಾದ ಬ್ರ್ಯಾಂಡ್ ಮತ್ತು ಸರ್ಕಾರದ ನಡುವಿನ ವಿವಾದದ ಪರಿಣಾಮವು ಕಂಪನಿಗಳ ನಿರ್ಧಾರದ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಚೀನಾದ ಕಂಪನಿಗಳ ಜೊತೆಗೆ ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್ ಕಂಪನಿಯು ಈ ವರ್ಷ ಕೇವಲ ಒಂದೆ ಒಂದು ಫೋನ್ ಅನ್ನು 10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಬಿಡುಗಡೆ ಮಾಡಿದೆ. ಅದೇ ರೀತಿ Xiaomi ಕಂಪೆನಿಯ ಕಡಿಮೆ ದರದ ಮೊಬೈಲ್ ಗಳು ಮಾರುಕಟ್ಟೆಯಲ್ಲಿ ಸುಮಾರು ಶೇ 12 % ಇಳಿಕೆ ಕಂಡುಬಂದಿದೆ. ಇಂಟರ್ನ್ಯಾಷನಲ್ ಡಾಟಾ ಕಾರ್ಪೊರೇಷನ್ (IDC) ಯ ಅಂಕಿಅಂಶಗಳ ಪ್ರಕಾರ Xiaomi ಯ ₹ 7,500 ರೂ ಮೊಬೈಲ್ ವಿಭಾಗದ ಷೇರುಗಳು 28% ರಿಂದ 25% ಕ್ಕೆ ಇಳಿದಿವೆ. 10 ಸಾವಿರದೊಳಗಿನ ಫೋನ್‌ಗಳ ಮಾರುಕಟ್ಟೆ ಪಾಲು ಕೂಡ ಕುಸಿದಿದೆ.
Xiaomi ಮೊಬೈಲ್ ಕಂಪನಿಯ ಮಾರುಕಟ್ಟೆ ಪಾಲು 2015 ರಲ್ಲಿ ಶೇ84 ಹೋಲಿಸಿದರೆ ಈಗ ಕೇವಲ ಶೇ 35 ಕ್ಕೆ ಇಳಿದಿದೆ. ಈ ವರ್ಷ ಈ ಕಂಪನಿಗಳು ಕೇವಲ 39 ಸ್ಮಾರ್ಟ್‌ಫೋನ್‌ಗಳನ್ನು 10 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಕಳೆದ ವರ್ಷ ಬಿಡುಗಡೆಯಾದ 60 ಫೋನ್‌ಗಳಿಗಿಂತ ಕಡಿಮೆಯಾಗಿದೆ.
ಅಗ್ಗದ ಚೈನಾ ಮೊಬೈಲ್ ಗಳನ್ನು ನಿಷೇಧಿಸುವ ಕೆಲವೇ ದಿನಗಳ ಹಿಂದೆ ವರದಿ ಬಿತ್ತರವಾಗಿತ್ತು. 12,000 ರೂಪಾಯಿಗಿಂತ ಕಡಿಮೆ ಬೆಲೆಯ ಚೈನೀಸ್ ಫೋನ್‌ಗಳನ್ನು ಭಾರತದಲ್ಲಿ ನಿಷೇಧಿಸಲಾಗುವುದು ಎಂದು ವರದಿ ಹೇಳಿತ್ತು. ಲಾವಾ, ಮೈಕ್ರೋಮ್ಯಾಕ್ಸ್‌ನಂತಹ ದೇಶೀಯ ಕಂಪನಿಗಳನ್ನು ಉತ್ತೇಜಿಸಲು ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳಲಾಗುತ್ತು. ಆದರೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಈ ಫೋನ್‌ಗಳ ಮೇಲಿನ ನಿಷೇಧವನ್ನು ನಿರಾಕರಿಸಿದ್ದರು. ಚೀನಾ ಕಂಪನಿಗಳ ಈ ಫೋನ್‌ಗಳನ್ನು ನಿಷೇಧಿಸುವ ಯಾವುದೇ ಯೋಜನೆಯನ್ನು ಸರ್ಕಾರ ಇನ್ನೂ ಮಾಡಿಲ್ಲ ಎಂದು ಕೇಂದ್ರ ಸಚಿವರು ಹೇಳಿದ್ದರು. ಭಾರತೀಯ ಬ್ರಾಂಡ್ ಅನ್ನು ಉತ್ತೇಜಿಸುವುದು ಸರ್ಕಾರದ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ ಎಂದು ಸಹ ಹೇಳಿದ್ದರು.
ವರದಿ:ಹರೀಶ್