ಮತ್ತೊಂದು ದುಂಡಾವರ್ತನೆ ಬೆಳಕಿಗೆ: ಕುಸ್ತಿ ಪಟು, ಹತ್ಯೆ ಆರೋಪಿ ಸುಶೀಲ್​ ಕುಮಾರ್​ಗೆ ಹೆಚ್ಚಾಯ್ತು ಸಂಕಷ್ಟ

| Updated By: Skanda

Updated on: May 31, 2021 | 9:52 AM

Wrestler Sushil Kumar: ಈಗ ಬೆಳಕಿಗೆ ಬಂದಿರುವ ಹಲ್ಲೆ ಪ್ರಕರಣ ನೊಡಿದಾಗ.. ಹತ್ಯೆ ಆರೋಪಿ ಸುಶೀಲ್​ ಕುಮಾರ್ ನಲ್ಲಿ ಮನೆ ಮಾಡಿದ್ದ ಉದ್ದಟತನ, ಹಿಂಸಾಪ್ರವೃತ್ತಿ ಅದರಿಂದ ದೃಢಪಡುತ್ತದೆ ಎನ್ನುತ್ತಾರೆ ದೆಹಲಿಯ ಹಿರಿಯ ಪೊಲೀಸ್​ ಅಧಿಕಾರಿಗಳು. ತನ್ನ ಮೇಲೆ ನಡೆದ ಹಲ್ಲೆಯಿಂದ ಆ ಅಂಗಡಿ ಮಾಲೀಕ ಎಷ್ಟು ಭೀತಿಗೊಳಗಾಗಿದ್ದರು ಅಂದ್ರೆ ಆತ ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡುವುದಕ್ಕೆ ಹಿಂಜರಿದಿದ್ದರು.

ಮತ್ತೊಂದು ದುಂಡಾವರ್ತನೆ ಬೆಳಕಿಗೆ: ಕುಸ್ತಿ ಪಟು, ಹತ್ಯೆ ಆರೋಪಿ ಸುಶೀಲ್​ ಕುಮಾರ್​ಗೆ ಹೆಚ್ಚಾಯ್ತು ಸಂಕಷ್ಟ
ಮತ್ತೊಂದು ದುಂಡಾವರ್ತನೆ ಬೆಳಕಿಗೆ: ಕುಸ್ತಿ ಪಟು, ಹತ್ಯೆ ಆರೋಪಿ ಸುಶೀಲ್​ ಕುಮಾರ್​ಗೆ ಹೆಚ್ಚಿದ ಸಂಕಷ್ಟ
Follow us on

ದೆಹಲಿ: ಕುಸ್ತಿ ಕಣದಲ್ಲಿ ಇಡೀ ಭಾರತವೇ ಹೆಮ್ಮೆ ಪಡುವಂತೆ ಒಲಿಂಪಿಕ್ ಕ್ರೀಡಾಕೂಟದಲ್ಲಿ ಎರಡು ಪದಕಗಳನ್ನು ಗಿಟ್ಟಿಸಿಕೊಂಡಿದ್ದ ಸುಶೀಲ್ ಕುಮಾರ್​ ಎಂಬ ದೈತ್ಯ ಪ್ರತಿಭೆ ತನ್ನ ದೇಹದಾರ್ಢ್ಯ ತಾಕತ್ತನ್ನು ಕುಸ್ತಿ ಕಣದಲ್ಲಿ ತೋರಿಸುವುದಕ್ಕಷ್ಟೇ ಸೀಮಿತಗೊಳಿಸದೆ ಅದರಾಚೆಗೂ ಶಕ್ತಿ ಪ್ರದರ್ಶನ ಮಾಡಿ, ಒಬ್ಬ ಸಹ ಆಟಗಾರನನ್ನೇ ಬಲಿ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಪ್ರಕರಣದಲ್ಲಿ ಮೇ 23 ರಂದು ವಿಶ್ವ ಕುಸ್ತಿ ದಿನದಂದೇ ಭಾರತದ ಒಲಿಂಪಿಕ್ ಅಥ್ಲೀಟ್ ಸುಶೀಲ್ ಕುಮಾರ್​ರನ್ನು ಬಂಧಿಸಲಾಗಿದೆ. ಘಟನೆ ನಂತರ ಸುಮಾರು 20 ದಿನಗಳ ಕಾಲ ಪರಾರಿಯಾಗಿದ್ದ ಸುಶೀಲ್ ಕುಮಾರ್ ಕೊನೆಗೂ ದೆಹಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಸದ್ಯಕ್ಕೆ ನಾಲ್ಕು ದಿನಗಳ ಕಾಲ ಪೊಲೀಸ್​ ಕಸ್ಟಡಿಯಲ್ಲಿದ್ದಾರೆ.

ಚಿಕ್ಕ ಕುಸ್ತಿ ಕಣದಲ್ಲಿ ಹಿಮಾಲಯದೆತ್ತರ ಬೆಳೆದು ಅಗಾಧ ಪ್ರತಿಭೆ ತೋರಿದ್ದ ಒಲಿಂಪಿಯನ್​ ಸುಶೀಲ್​ ಕುಮಾರ್ ವರ್ಚಸ್ಸು ಅವರ ವಿರುದ್ಧ ಕೇಳಿ ಬಂದಿರುವ ಹತ್ಯೆ ಆರೋಪದಿಂದ ಈಗ ಮಣ್ಣುಪಾಲಾಗಿದೆ. ಇದು ಭಾರತದ ಕುಸ್ತಿ ಕ್ಷೇತ್ರಕ್ಕೂ ಕಳಂಕಹಚ್ಚಿದೆ. ಈ ಮಧ್ಯೆ ಹತ್ಯೆ ಆರೋಪಿ, ಎರಡು ಬಾರಿ ಒಲಿಂಪಿಯನ್​ ಪದಕ ವಿಜೇತ ಸುಶೀಲ್​ ಕುಮಾರ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ.

ದೆಹಲಿಯಲ್ಲಿ ಆಹಾರ ಸಾಮಾಗ್ರಿ ಪೂರೈಸುತ್ತಿದ್ದ ಅಂಗಡಿಯವನಿಗೆ ಹತ್ಯೆ ಆರೋಪಿ ಸುಶೀಲ್​ ಕುಮಾರ್ 4 ಲಕ್ಷ ರೂಪಾಯಿ ಬಾಕಿ ಉಳಿಸಿಕೊಂಡಿದ್ದರಂತೆ. ಅದನ್ನು ವಾಪಸ್ ಕೇಳಿದ್ದಕ್ಕೆ ​ಒಲಿಂಪಿಯನ್​ ಸುಶೀಲ್​ ಕುಮಾರ್ ತನ್ನ ಮೇಲೆ ಹಲ್ಲೆ ಮಾಡಿದ್ದರು, ಅವರ ಸಹಚರರು ತನ್ನನ್ನು ಥಳಿಸಿದ್ದರು ಎಂದು ವಿಡಿಯೋ ದಾಖಲೆ ಸಮೇತ ಆ ಅಂಗಡಿ ಮಾಲೀಕ ಪೊಲೀಸರಿಗೆ ಈಗ ದೂರು ನೀಡಿದ್ದಾರೆ. ಗಮನಾರ್ಹವೆಂದರೆ ಈ ಘಟನೆ ನಡೆದಿರುವುದು ಹತ್ಯೆ ಪ್ರಕರಣಕ್ಕೆ ಮುನ್ನ. ಅಂದರೆ ಈತನಲ್ಲಿ ಮನೆ ಮಾಡಿದ್ದ ಉದ್ದಟತನ, ಹಿಂಸಾಪ್ರವೃತ್ತಿ ಇದರಿಂದ ದೃಢಪಡುತ್ತದೆ ಎನ್ನುತ್ತಾರೆ ದೆಹಲಿಯ ಹಿರಿಯ ಪೊಲೀಸ್​ ಅಧಿಕಾರಿಗಳು. ತನ್ನ ಮೇಲೆ ನಡೆದ ಹಲ್ಲೆಯಿಂದ ಆ ಅಂಗಡಿ ಮಾಲೀಕ ಎಷ್ಟು ಭೀತಿಗೊಳಗಾಗಿದ್ದರು ಅಂದ್ರೆ ಆತ ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡುವುದಕ್ಕೆ ಹಿಂಜರಿಯುತ್ತಿದ್ದರು ಎನ್ನಲಾಗಿದೆ.

ಹತ್ಯೆ ಹೇಗೆ ನಡೆದಿತ್ತು? ಸುಶೀಲ್​ ಕುಮಾರ್ ದಾರ್ಷ್ಟ್ಯ ಎಷ್ಟು ಅತಿರೇಕದಿಂದ ಕೂಡಿತ್ತು ಅಂದ್ರೆ..
ಈ ಸುಶೀಲ್​ ಕುಮಾರ್ ಎಂಬ ಆರೋಪಿಯ ದಾರ್ಷ್ಟ್ಯ ಯಾವ ಅತಿರೇಕದಿಂದ ಕೂಡಿತ್ತು ಅಂದ್ರೆ ಹತ್ಯೆ ಘಟನೆಯ ದೃಶ್ಯಾವಳಿಗಳನ್ನು ಚಿತ್ರೀಕರಿಸುವಂತೆ ಸ್ವತಃ ಆ ಸುಶೀಲ್​ ಕುಮಾರ್ ಸೂಚಿಸಿದ್ದನಂತೆ. ಇತರೆ ಕುಸ್ತಿಪಟುಗಳಲ್ಲಿ ತನ್ನ ಬಗ್ಗೆ ಭಯ ಮೂಡಬೇಕು, ತಾನು ಏನೆಂದು ಗೊತ್ತಾಗಬೇಕು ಎಂದು ಹೇಳಿದ್ದನಂತೆ. ಅದರಂತೆ ಪ್ರಿನ್ಸ್​ ಎಂಬಾತ ಇದನ್ನು ಚಿತ್ರೀಕರಿಸಿಕೊಂಡಿದ್ದ. ವಿಡಿಯೋದಲ್ಲಿ ಸುಶೀಲ್ ಕುಮಾರ್ ಹಾಗೂ ಆತನ ಸಹಚರರು ನೆಲಕ್ಕೆ ಬಿದ್ದಿದ್ದವರನ್ನು ಮನಸೋ ಇಚ್ಛೆ ಥಳಿಸುತ್ತಿರುವುದು ದಾಖಲಾಗಿತ್ತು.

ಕುಸ್ತಿಪಟು ಸಾಗರ್ ಧಂಖರ್ ಎಂಬಾತನನ್ನು ಸುಶೀಲ್ ಕುಮಾರ್ ಮತ್ತು ಆತನ ಗ್ಯಾಂಗ್ ಸಾಯಿಸಿದೆ ಎಂಬುದು ಪ್ರಕರಣದ ಪ್ರಮುಖ ತಿರುಳು. ಸುಶೀಲ್ ಕುಮಾರ್ ಪಾತ್ರವನ್ನು ಎತ್ತಿ ತೋರಿಸುವ ವಿಡಿಯೋ ಸಹ ಬಹಿರಂಗವಾಗಿದೆ. ಮೇ 4 ರಂದು ಛತ್ರಸಾಲ್ ಕ್ರೀಡಾಂಗಣದಲ್ಲಿ ಕುಸ್ತಿಪಟುಗಳ ನಡುವೆ ನಡೆದ ಜಗಳದ ಪರಿಣಾಮ ಸಾವಿನ ದವಡೆಗೆ ನೂಕಲ್ಪಟ್ಟ ಸಾಗರ್ ಧಂಖರ್ ಮೇಲೆ ಸುಶೀಲ್ ಕುಮಾರ್ ಸೇರಿದಂತೆ ಇನ್ನಿತರರು ಹಲ್ಲೆ ನಡೆಸಿರುವುದು ಖಾತ್ರಿಯಾಗಿದೆ. ಛತ್ರಸಾಲ್ ಕ್ರೀಡಾಂಗಣದ ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳಲ್ಲಿ ಸುಶೀಲ್ ಕುಮಾರ್ ಮತ್ತು ಅವರ 20 ರಿಂದ 25 ಸಹಚರರು ಸಾಗರ್ ಮತ್ತು ಇತರ ಇಬ್ಬರನ್ನು ಹಾಕಿ ಸ್ಟಿಕ್​ಗಳಿಂದ ಥಳಿಸುತ್ತಿರುವುದು ಸೆರೆಯಾಗಿದ್ದು, ಅದು ನಿಜವೆಂದು ಫೋರೆನ್ಸಿಕ್ ಸೈನ್ಸ್ ಲ್ಯಾಬ್ ಹೇಳಿತ್ತು.

(wrestler Sushil Kumar refused to clear pending arrears in grocery shop Shop owner alleges he was beaten by Sushil Kumar and his aides)