ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ಶರಣ್ ಸಿಂಗ್​ಗೆ ಮಧ್ಯಂತರ ಜಾಮೀನು

ಡಬ್ಲ್ಯುಎಫ್‌ಐ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಿಗೆ ದೆಹಲಿ ಕೋರ್ಟ್ ಇಂದು (ಜು.18) ಮಧ್ಯಂತರ ಜಾಮೀನು ನೀಡಿದೆ.

ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ಶರಣ್ ಸಿಂಗ್​ಗೆ ಮಧ್ಯಂತರ ಜಾಮೀನು
ಬ್ರಿಜ್ ಭೂಷಣ್ ಸಿಂಗ್
Follow us
|

Updated on:Jul 18, 2023 | 3:21 PM

ದೆಹಲಿ: ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಬ್ಲ್ಯುಎಫ್‌ಐ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ (brij bhushan sharan singh) ಅವರಿಗೆ ದೆಹಲಿ ಕೋರ್ಟ್ ಇಂದು (ಜು.18) ಮಧ್ಯಂತರ ಜಾಮೀನು ನೀಡಿದೆ. ತಲಾ 25,000 ರೂಪಾಯಿ ಬಾಂಡ್ ಮೇಲೆ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ. ಬ್ರಿಜ್ ಭೂಷಣ್ ಅವರ ವಿರುದ್ಧ ಸಲ್ಲಿಸಲಾಗಿದ್ದ ಚಾರ್ಜ್‌ಶೀಟ್​​ನಲ್ಲಿ ಮೌಖಿಕ ವರದಿ ನೀಡಿದ್ದಾರೆ. ಮತ್ತು ಕುಸ್ತಿಪಟುಗಳು ನ್ಯಾಯಾಲಯದಲ್ಲಿ ಮಾಧ್ಯಮ ವಿಚಾರಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ನ್ಯಾಯಾಲಯವು ಇದಕ್ಕೆ ಸಂಬಂಧಿಸಿದಂತೆ ಸೂಕ್ತ ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ.

ಇನ್ನೂ ಡಬ್ಲ್ಯುಎಫ್‌ಐನ ಅಮಾನತುಗೊಂಡಿರುವ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್‌ಗೂ ಮಧ್ಯಂತರ ಜಾಮೀನು ನೀಡಲಾಗಿದೆ. ಈ ಜಾಮೀನು ಕುರಿತು ನ್ಯಾಯಾಲಯವು ಗುರುವಾರ ವಿಚಾರಣೆ ನಡೆಸಲಿದೆ. ಕೋರ್ಟ್​ನಲ್ಲಿ ಬ್ರಿಜ್ ಭೂಷಣ್ ಸಿಂಗ್ ಪರ ವಾದ ಮಾಡಿದ ವಕೀಲರು, ಸುಮಾರು ಆರು ಮಹಿಳಾ ಕುಸ್ತಿಪಟುಗಳು ಬ್ರಿಜ್ ಭೂಷಣ್ ಸಿಂಗ್ ಅವರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಮತ್ತು ಬೆದರಿಕೆ ಹಾಕುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಜೂನ್ 2 ರಂದು ದೆಹಲಿ ಪೊಲೀಸರು ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಆರೋಪಗಳ ಆಧಾರದ ಮೇಲೆ ಎರಡು ಎಫ್ಐಆರ್ ಮತ್ತು 10 ದೂರುಗಳನ್ನು ದಾಖಲಿಸಿದ್ದಾರೆ. ಈ ದೂರಿನಲ್ಲಿ ಕುಸ್ತಿಪಟುಗಳ ಎದೆಯ ಮೇಲೆ ಕೈ ಹಾಕುವುದು, ಬೆನ್ನು ಸವರುವುದು ಮತ್ತು ಅವರನ್ನು ಹಿಂಬಾಲಿಸುವುದು ಇತ್ಯಾದಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕೊಲೆ ಯತ್ನ, ಡಕಾಯಿತಿ..ಹಲವು ಕ್ರಿಮಿನಲ್ ಕೇಸ್…ಕುಸ್ತಿ ಒಕ್ಕೂಟದ ಮುಖ್ಯಸ್ಥನ ವಿರುದ್ಧವೇ ಬೀದಿಗಿಳಿದ ಕುಸ್ತಿಪಟುಗಳು

ಆರು ಬಾರಿ ಸಂಸದರಾಗಿರುವ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ನಗರ ಪೊಲೀಸರು ಜೂನ್ 15 ರಂದು ಸೆಕ್ಷನ್ 354 (ಹೆಣ್ಣಿನ ನಮ್ರತೆಗೆ ಆಕ್ರೋಶ ವ್ಯಕ್ತಪಡಿಸುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲ), 354 ಎ (ಲೈಂಗಿಕ ಕಿರುಕುಳ), 354 ಡಿ (ಹಿಂಬಾಲಿಸುವುದು) ಮತ್ತು ಆರೋಪಪಟ್ಟಿ ಸಲ್ಲಿಸಿದ್ದರು. IPC ಯ 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ. ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ತಮ್ಮ ಮೇಲಿರುವ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:59 pm, Tue, 18 July 23

ತಾಜಾ ಸುದ್ದಿ
ನಿನ್ನೆ ದೆಹಲಿಯಲ್ಲಿದ್ದ ಕೇಂದ್ರ ಸಚಿವ ಸೋಮಣ್ಣರಿಂದ ಇಂದು ಬೆಂಗಳೂರಲ್ಲಿ ಸಭೆ
ನಿನ್ನೆ ದೆಹಲಿಯಲ್ಲಿದ್ದ ಕೇಂದ್ರ ಸಚಿವ ಸೋಮಣ್ಣರಿಂದ ಇಂದು ಬೆಂಗಳೂರಲ್ಲಿ ಸಭೆ
ದೈವ ಕ್ಷೇತ್ರದಲ್ಲಿ ಪವಾಡ; ಆಫ್ ಮಾಡಿದ್ದರೂ ತನ್ನಂತಾನೆ ಚಲಿಸಿದ ಆಟೋ
ದೈವ ಕ್ಷೇತ್ರದಲ್ಲಿ ಪವಾಡ; ಆಫ್ ಮಾಡಿದ್ದರೂ ತನ್ನಂತಾನೆ ಚಲಿಸಿದ ಆಟೋ
ಸಿಎಂ/ಡಿಸಿಎಂ ಅಗಬೇಕೆನ್ನುವವರು ಮತ್ತೊಮ್ಮೆ ಚುನಾವಣೆ ಎದುರಿಸಲಿ:ಡಿಕೆ ಸುರೇಶ್
ಸಿಎಂ/ಡಿಸಿಎಂ ಅಗಬೇಕೆನ್ನುವವರು ಮತ್ತೊಮ್ಮೆ ಚುನಾವಣೆ ಎದುರಿಸಲಿ:ಡಿಕೆ ಸುರೇಶ್
ಶಿವಕುಮಾರ್ ಸಿಎಂ ಆಗಬೇಕು ಎಂದಷ್ಟೇ ಹೇಳಿದ್ದು: ಚಂದ್ರಶೇಖರನಾಥ ಸ್ವಾಮೀಜಿ
ಶಿವಕುಮಾರ್ ಸಿಎಂ ಆಗಬೇಕು ಎಂದಷ್ಟೇ ಹೇಳಿದ್ದು: ಚಂದ್ರಶೇಖರನಾಥ ಸ್ವಾಮೀಜಿ
ಸೋಲಿಗೆ ಮಾಧ್ಯಮಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ ಡಿಕೆ ಸುರೇಶ್
ಸೋಲಿಗೆ ಮಾಧ್ಯಮಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ ಡಿಕೆ ಸುರೇಶ್
ಹಣವನ್ನು ಗಾಳಿಯಲ್ಲಿ ತೂರಿ ಹುಟ್ಟುಹಬ್ಬ ಆಚರಿಸಿಕೊಂಡ ಹುಬ್ಬಳ್ಳಿಯ ಯುವಕ
ಹಣವನ್ನು ಗಾಳಿಯಲ್ಲಿ ತೂರಿ ಹುಟ್ಟುಹಬ್ಬ ಆಚರಿಸಿಕೊಂಡ ಹುಬ್ಬಳ್ಳಿಯ ಯುವಕ
ಯುವಕರ ನೆಚ್ಚಿನ ಸ್ಟೈಲಿಶ್ ಕ್ಯಾಸಿಯೋ G Shock ಸ್ಮಾರ್ಟ್​ವಾಚ್ ಬಿಡುಗಡೆ
ಯುವಕರ ನೆಚ್ಚಿನ ಸ್ಟೈಲಿಶ್ ಕ್ಯಾಸಿಯೋ G Shock ಸ್ಮಾರ್ಟ್​ವಾಚ್ ಬಿಡುಗಡೆ
‘ಎಲ್ಲರಿಗೂ ನೋವಿದೆ’; ದರ್ಶನ್ ಪ್ರಕರಣದಲ್ಲಿ ಸುಮಲತಾ, ರಾಕ್​ಲೈನ್ ಮೌನ ಏಕೆ?
‘ಎಲ್ಲರಿಗೂ ನೋವಿದೆ’; ದರ್ಶನ್ ಪ್ರಕರಣದಲ್ಲಿ ಸುಮಲತಾ, ರಾಕ್​ಲೈನ್ ಮೌನ ಏಕೆ?
ಮನೆಯಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡಬಾರದು, ಈ ಬಗ್ಗೆ ಆಧ್ಯಾತ್ಮದಲ್ಲೇನಿದೆ?
ಮನೆಯಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡಬಾರದು, ಈ ಬಗ್ಗೆ ಆಧ್ಯಾತ್ಮದಲ್ಲೇನಿದೆ?
Horoscope:ಈ ರಾಶಿಯವರಿಗೆ ಪ್ರಸಿದ್ಧ ವ್ಯಕ್ತಿಗಳು ಅನಿರೀಕ್ಷಿತವಾಗಿ ಸಿಗುವರು
Horoscope:ಈ ರಾಶಿಯವರಿಗೆ ಪ್ರಸಿದ್ಧ ವ್ಯಕ್ತಿಗಳು ಅನಿರೀಕ್ಷಿತವಾಗಿ ಸಿಗುವರು