ದೆಹಲಿಯಲ್ಲಿ ಕೊವಿಡ್ 19 ಮತ್ತು ಒಮಿಕ್ರಾನ್ ವೈರಾಣುಗಳ ಸೋಂಕಿತರ ಸಂಖ್ಯೆ ಏರುತ್ತಿರುವ ಬೆನ್ನಲ್ಲೇ, ನಗರದಲ್ಲಿ ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆ(Graded Response Action Plan)ಯಲ್ಲಿ ಹಳದಿ ಅಲರ್ಟ್ ಘೋಷಣೆ ಮಾಡಲಾಗಿದೆ. ಬುಧವಾರದಿಂದ ಈ ಹಳದಿ ಅಲರ್ಟ್ ಘೋಷಣೆಯಾಗಲಿದ್ದು, ಶಾಲೆ, ಕಾಲೇಜುಗಳು, ಜಿಲ್, ಸ್ಪಾಗಳು ಬಂದ್ ಆಗಲಿವೆ. ಹಾಗೇ, ಮೆಟ್ರೋ, ಬಸ್ಗಳೆಲ್ಲ ಶೇ.50ರಷ್ಟು ಸಾಮರ್ಥ್ಯದಲ್ಲಿ ಸಂಚರಿಸಲಿವೆ. ದೆಹಲಿಯಲ್ಲಿ 24 ಗಂಟೆಯಲ್ಲಿ 331 ಹೊಸ ಕೊರೊನಾ ಕೇಸ್ಗಳು ದಾಖಲಾಗಿವೆ. ಹೀಗಾಗಿ ದೆಹಲಿ ಸರ್ಕಾರ ಎಚ್ಚೆತ್ತುಕೊಂಡಿದೆ.
ನಾಳೆಯಿಂದ ದೆಹಲಿಯಲ್ಲಿ ಯಾವುದೆಲ್ಲ ಕ್ಲೋಸ್?
1. ಸಿನಿಮಾ ಹಾಲ್, ಮಲ್ಟಿಪ್ಲೆಕ್ಸ್ಗಳು, ಅಡಿಟೋರಿಯಂಗಳು ಬಂದ್
2. ಸ್ಪಾಗಳು, ಜಿಮ್, ಯೋಗಾ ಸಂಸ್ಥೆಗಳು, ಮನರಂಜನಾ ಪಾರ್ಕ್ಗಳೂ ಕ್ಲೋಸ್.
3. ಶಾಲೆ-ಕಾಲೇಜುಗಳು, ತರಬೇತಿ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳೂ ಕಾರ್ಯನಿರ್ವಹಿಸುವುದಿಲ್ಲ
4. ಸಾಮಾಜಿಕ, ರಾಜಕೀಯ, ಧಾರ್ಮಿಕ ಕಾರ್ಯಕ್ರಮಗಳು, ಮನರಂಜನಾ ಕಾರ್ಯಕ್ರಮಗಳು, ಸಾರ್ವಜನಿಕ ಹಬ್ಬ ಆಚರಣೆಗಳು ನಿಷಿದ್ಧ.
ಯಾವುದೆಲ್ಲ ಕಾರ್ಯ ನಿರ್ವಹಿಸುತ್ತವೆ?
1.ಹೋಟೆಲ್ಗಳು ಕಾರ್ಯನಿರ್ವಹಿಸುತ್ತವೆ. ಆದರೆ ಹೋಟೆಲ್ ಒಳಗೆ ಔತಣಕೂಟದ ಹಾಲ್, ಕಾನ್ಫರೆನ್ಸ್ ಹಾಲ್ಗಳು ಕ್ಲೋಸ್ ಇರುತ್ತವೆ.
2. ರೆಸ್ಟೋರೆಂಟ್ಗಳು ಬೆಳಗ್ಗೆ 8ಗಂಟೆಯಿಂದ ರಾತ್ರಿ 10ರವರೆಗೆ ಕಾರ್ಯನಿರ್ವಹಿಸುತ್ತವೆ. ಆದರೆ ಶೇ.50ರಷ್ಟು ಸಾಮರ್ಥ್ಯಕ್ಕೆ ಅವಕಾಶ. ಹಾಗೇ, ಬಾರ್ಗೂ ಇದೇ ಅನ್ವಯ ಆಗುತ್ತವೆ. ಆದರೆ ಬಾರ್ಗಳು ಮಧ್ಯಾಹ್ನ 12ರಿಂದ ರಾತ್ರಿ 10ರವರೆಗೆ ಮಾತ್ರ ತೆರೆದಿರುತ್ತವೆ.
3. ದೆಹಲಿ ಮೆಟ್ರೋ ಕೂಡ ಶೇ.50ರಷ್ಟು ಸೀಟ್ಗಳ ಸಾಮರ್ಥ್ಯದಲ್ಲಿ ಸಂಚಾರ ಮಾಡುತ್ತದೆ. ಇನ್ನು ದೆಹಲಿಯಿಂದ ಬೇರೆ ರಾಜ್ಯಗಳಿಗೆ ಸಂಚರಿಸುವ ಬಸ್ಗಳಿಗೂ ಇದೇ ನಿಯಮ ಅನ್ವಯ ಆಗುತ್ತದೆ.
4. ಆಟೋ, ಇ ರಿಕ್ಷಾ, ಟ್ಯಾಕ್ಸಿ, ಸೈಕಲ್ ರಿಕ್ಷಾಗಳಲ್ಲಿ ಇಬ್ಬರು ಮಾತ್ರ ಪ್ರಯಾಣ ಮಾಡಬಹುದು.
5. ಕ್ರೀಡಾ ಸಂಕೀರ್ಣಗಳು, ಕ್ರೀಡಾಂಗಣಗಳು, ಈಜುಕೊಳಗಳು ಬಂದ್ ಇರುತ್ತವೆ. ಆದರೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳನ್ನು ಆಯೋಜಿಸಬಹುದು.
6. ಖಾಸಗಿ ಕಚೇರಿಗಳು ಬೆಳಗ್ಗೆ 9 ರಿಂದ ಸಂಜೆ 5ವರೆಗೆ ಕೆಲಸ ಮಾಡಬಹುದು. ಆದರೆ ಅರ್ಧದಷ್ಟು ಮಾತ್ರ ಉದ್ಯೋಗಿಗಳು ಆಫೀಸ್ಗೆ ಬರಬೇಕು.
ಇನ್ನುಳಿದಂತೆ ನಿರ್ಮಾಣ ಕಾಮಗಾರಿ ನಡೆಯುತ್ತದೆ. ಪಬ್ಲಿಕ್ ಪಾರ್ಕ್ಗಳು, ಹೊರವಲಯದಲ್ಲಿ ನಡೆಯುವ ಯೋಗ, ಸಲೂನ್ ಮತ್ತು ಬ್ಯೂಟಿಪಾರ್ಲರ್ಗಳು ಒಪನ್ ಇರುತ್ತವೆ. ದೆಹಲಿಯಲ್ಲಿ ಇತ್ತೀಚೆಗಷ್ಟೇ ನೈಟ್ ಕರ್ಫ್ಯೂ ಹೇರಲಾಗಿದೆ. ಹಿಂದೊಮ್ಮೆ ಕರೊನಾ ಭೀಕರತೆ ಕಂಡಿದ್ದ ದೆಹಲಿ ಈಗಾಗಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ನಮ್ಮಲ್ಲಿ ಆಕ್ಸಿಜನ್, ಬೆಡ್ ವ್ಯವಸ್ಥೆ ಮಾಡಿಡಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಇದನ್ನೂ ಓದಿ: Konkani : ಅಚ್ಚಿಗೂ ಮೊದಲು ; ಮಹಾಬಳೇಶ್ವರ ಸೈಲ್ ಅವರ ‘ಅದೃಷ್ಟ’ ಕಾದಂಬರಿ ಇಂದಿನಿಂದ ಲಭ್ಯ