UP Assembly Election: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಸಿದ್ಧತೆ; ಯೋಗಿ ಆದಿತ್ಯನಾಥ್​​ ಈ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರಂತೆ..

| Updated By: Lakshmi Hegde

Updated on: Jul 24, 2021 | 6:19 PM

Yogi Adityanath: ಇತ್ತೀಚೆಗೆ ಪ್ರಧಾನಿ ಮೋದಿಯವರು ವಾರಾಣಸಿಗೆ ಭೇಟಿ ಕೊಟ್ಟಿದ್ದರು. ಆ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಕೊವಿಡ್​ 19 ವಿರುದ್ಧ ಹೋರಾಟಕ್ಕೆ ತೆಗೆದುಕೊಂಡ ಕ್ರಮಗಳನ್ನು ತುಂಬ ಹೊಗಳಿದ್ದರು.

UP Assembly Election: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಸಿದ್ಧತೆ; ಯೋಗಿ ಆದಿತ್ಯನಾಥ್​​ ಈ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರಂತೆ..
ಯೋಗಿ ಆದಿತ್ಯನಾಥ್
Follow us on

ಸದ್ಯಕ್ಕಂತೂ ಭಾರತೀಯ ಜನತಾ ಪಾರ್ಟಿ (BJP) ರಾಷ್ಟ್ರಮಟ್ಟದ ನಾಯಕರ ಗಮನ ಉತ್ತರ ಪ್ರದೇಶ ಚುನಾವಣೆ(Uttar Pradesh Assembly Polls)ಯ ಮೇಲೇ ಇದೆ. ಕಳೆದ ಬಾರಿ 403 ಕ್ಷೇತ್ರಗಳಲ್ಲಿ, 312 ಸೀಟುಗಳನ್ನು ಗೆದ್ದು ಜಯಗಳಿದ್ದ ಬಿಜೆಪಿ ಈ ಬಾರಿಯೂ ಉತ್ತರ ಪ್ರದೇಶದಲ್ಲಿ ಸರ್ಕಾರ ರಚಿಸಲು ತುದಿಗಾಲಿನಲ್ಲಿ ನಿಂತಿದೆ. ಹಾಗಾಗಿ ಪ್ರಮುಖ ನಾಯಕರನ್ನು ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್(BJP High Command)​ ನಿರ್ಧರಿಸಿದೆ. ಸಿಎಂ ಯೋಗಿ ಆದಿತ್ಯನಾಥ್​, ಉಪಮುಖ್ಯಮಂತ್ರಿಗಳಾದ ಕೇಶವ್​ ಪ್ರಸಾದ್​ ಮೌರ್ಯ, ದಿನೇಶ್​ ಶರ್ಮಾ, ಬಿಜೆಪಿ ಪ್ರಮುಖ ನಾಯಕರಾದ ಸ್ವತಂತ್ರ ದೇವ್​ ಸಿಂಗ್​, ಮಹೇಂದ್ರ ಸಿಂಗ್​ ಅವರೆಲ್ಲ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದು ಪಕ್ಕಾ ಆಗಿದೆ.

ಸದ್ಯ ವಿಧಾನ ಪರಿಷತ್ತಿಗೆ ನಾಮನಿರ್ದೇಶನಗೊಂಡಿರುವ ಯೋಗಿ ಆದಿತ್ಯನಾಥ್​ ಮುಂದಿನ ಚುನಾವಣೆಯಲ್ಲಿ ಗೋರಖ್​ಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಇದು ಅವರ ಹೋಂ ಟೌನ್​ ಕೂಡ ಹೌದು. ಹಾಗೇ, ಕೇಶವ್​ ಪ್ರಸಾದ್​ ಮೌರ್ಯ ಕೌಶಂಭಿಯ ಸಿರಾಥು ಕ್ಷೇತ್ರದಿಂದ, ದಿನೇಶ್​ ಶರ್ಮಾ ಲಖನೌದಿಂದ ಮತ್ತು ಡಾ. ಮಹೇಂದ್ರ ಸಿಂಗ್​ ಅವರು ಕುಂದ್ರಾದಿಂದ ಸ್ಪರ್ಧಿಸಲಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.

ಇತ್ತೀಚೆಗೆ ಪ್ರಧಾನಿ ಮೋದಿಯವರು ವಾರಾಣಸಿಗೆ ಭೇಟಿ ಕೊಟ್ಟಿದ್ದರು. ಆ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಕೊವಿಡ್​ 19 ವಿರುದ್ಧ ಹೋರಾಟಕ್ಕೆ ತೆಗೆದುಕೊಂಡ ಕ್ರಮಗಳನ್ನು ತುಂಬ ಹೊಗಳಿದ್ದರು. ಉತ್ತರ ಪ್ರದೇಶದಲ್ಲಿ ಯೋಗಿ ಕೊವಿಡ್ 19ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ. ಮುಂದಿನ ಚುನಾವಣೆಯೊಳಗೆ ನಾಯಕತ್ವ ಬದಲಾವಣೆ ಆಗಬಹುದು ಎಂಬಿತ್ಯಾದಿ ಸುದ್ದಿಗಳು ದೊಡ್ಡಮಟ್ಟದಲ್ಲಿ ಹರಿದಾಡುತ್ತಿದ್ದ ಸಮಯದಲ್ಲಿ ನರೇಂದ್ರ ಮೋದಿಯವರು ಮೂರ್ನಾಲ್ಕು ಬಾರಿ ಯೋಗಿಯವರು ಹೊಗಳಿದ್ದಾರೆ. ಈ ಮೂಲಕ ಸಿಎಂ ಯೋಗಿ ನೇತೃತ್ವದಲ್ಲೇ ಚುನಾವಣೆ ನಡೆಯಲಿದೆ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:  2024ರೊಳಗೆ ಭಾರತೀಯ ಬ್ರಾಡ್​ಗೇಜ್ ರೈಲ್ವೆ ಮಾರ್ಗವೆಲ್ಲವೂ ವಿದ್ಯುದೀಕರಣ; ಹೊಸ ಯೋಜನೆಗೆ 21,000 ಕೋಟಿ ರೂ. ವೆಚ್ಚ

Published On - 6:19 pm, Sat, 24 July 21