AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ರೋನ್​ ದಾಳಿಯ ಅಪಾಯ ತಪ್ಪಿಸಿಕೊಳ್ಳಲು ಮುಂದಾದ ಟಿಟಿಡಿ; ತಿರುಮಲ ದೇಗುಲದಲ್ಲಿ ಆ್ಯಂಟಿ​ ಡ್ರೋನ್​ ಟೆಕ್ನಾಲಜಿ ಅಳವಡಿಸಲು ಯೋಜನೆ

Andhra Pradesh: ಇತ್ತೀಚೆಗೆ ಜಮ್ಮುವಿನ ವಾಯುನೆಲೆ ಮೇಲೆ ಡ್ರೋನ್​ ದಾಳಿಯಾಗಿತ್ತು. ಅದಾದ ಬಳಿಕ ಜು.6ರಂದು ಡಿಆರ್​ಡಿಒ ಕರ್ನಾಟಕದ ಕೋಲಾರದಲ್ಲಿ, ಮೂರು ಸೇವೆಗಳಲ್ಲಿ (ವಾಯು, ಭೂಮಿ ಮತ್ತು ಜಲ) ಆ್ಯಂಟಿ-ಡ್ರೋನ್​ ವ್ಯವಸ್ಥೆ ಅಳವಡಿಸಿಕೊಳ್ಳುವ ಬಗ್ಗೆ ಪ್ರದರ್ಶನ ನೀಡಿತ್ತು.

ಡ್ರೋನ್​ ದಾಳಿಯ ಅಪಾಯ ತಪ್ಪಿಸಿಕೊಳ್ಳಲು ಮುಂದಾದ ಟಿಟಿಡಿ; ತಿರುಮಲ ದೇಗುಲದಲ್ಲಿ ಆ್ಯಂಟಿ​ ಡ್ರೋನ್​ ಟೆಕ್ನಾಲಜಿ ಅಳವಡಿಸಲು ಯೋಜನೆ
ತಿರುಮಲ ದೇವಸ್ಥಾನ
TV9 Web
| Updated By: Lakshmi Hegde

Updated on: Jul 24, 2021 | 5:10 PM

Share

ಡ್ರೋನ್​ ದಾಳಿಯನ್ನು ತಪ್ಪಿಸಲು ಒಂದು ಹೊಸ ತಂತ್ರಜ್ಞಾನ ಅಳವಡಿಸಲು ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ ಮುಂದಾಗಿದೆ. ಹಾಗೊಮ್ಮೆ ಆ್ಯಂಟಿ-ಡ್ರೋನ್​​ ಟೆಕ್ನಾಲಜಿಯನ್ನು ಅದು ಯಶಸ್ವಿಯಾಗಿ ಅಳವಡಿಸಿದ್ದೇ ಆದರೆ, ಇಂಥದ್ದೊಂದು ತಂತ್ರಜ್ಞಾನ ಒಳಗೊಂಡ ದೇಶದ ಮೊದಲ ದೇವಸ್ಥಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯ ಆ್ಯಂಟಿ-ಡ್ರೋನ್​ ಟೆಕ್ನಾಲಜಿಯನ್ನು ತಿರುಮಲ ದೇವಸ್ಥಾನಕ್ಕೂ ತರಲು, ದೇಗುಲ ನಿರ್ವಹಣೆ ಮಂಡಳಿ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಯೋಜನೆ ರೂಪಿಸುತ್ತಿದೆ.

ಇತ್ತೀಚೆಗೆ ಜಮ್ಮುವಿನ ವಾಯುನೆಲೆ ಮೇಲೆ ಡ್ರೋನ್​ ದಾಳಿಯಾಗಿತ್ತು. ಅದಾದ ಬಳಿಕ ಜು.6ರಂದು ಡಿಆರ್​ಡಿಒ ಕರ್ನಾಟಕದ ಕೋಲಾರದಲ್ಲಿ, ಮೂರು ಸೇವೆಗಳಲ್ಲಿ (ವಾಯು, ಭೂಮಿ ಮತ್ತು ಜಲ) ಆ್ಯಂಟಿ-ಡ್ರೋನ್​ ವ್ಯವಸ್ಥೆ ಅಳವಡಿಸಿಕೊಳ್ಳುವ ಬಗ್ಗೆ ಪ್ರದರ್ಶನ ನೀಡಿತ್ತು. ಈ ಆ್ಯಂಟಿ-ಡ್ರೋನ್​ ಟೆಕ್ನಾಲಜಿ ಪ್ರದರ್ಶನದಲ್ಲಿ ಟಿಟಿಡಿ ಪಹರೆ ಮತ್ತು ಭದ್ರತಾ ವಿಭಾಗದ ಮುಖ್ಯಸ್ಥ ಗೋಪಿನಾಥ್ ಜಟ್ಟಿ ಪಾಲ್ಗೊಂಡಿದ್ದರು. ಡಿಆರ್​ಡಿಒ ಪರಿಚಯಿಸಿದ ಈ ಸಿಸ್ಟಂ ಸುಮಾರು ನಾಲ್ಕು ಕಿಮೀ ದೂರದವರೆಗೆ ಪತ್ತೆ ಸಾಮರ್ಥ್ಯ ಹೊಂದಿದೆ. ಹಾಗೇ, ರೇಡಿಯೋ ಫ್ರಿಕ್ವೆನ್ಸಿ ಜ್ಯಾಮಿಂಗ್​​ ಮೂಲಕ ಸಾಫ್ಟ್ ಕಿಲ್ ಆಯ್ಕೆಯೊಂದಿಗೆ ಸಂವಹನವನ್ನು ನಿಷ್ಕ್ರಿಯಗೊಳಿಸಬಲ್ಲದಾಗಿದೆ. ಇದಕ್ಕೆ ಬರೋಬ್ಬರಿ 25 ಕೋಟಿ ರೂ.ವೆಚ್ಚ ಮಾಡಬೇಕಾಗುತ್ತದೆ.

ತಿರುಮಲ ದೇವಸ್ಥಾನವು ದೇಶದ ಅತ್ಯಂತ ಶ್ರೀಮಂತ ಹಿಂದು ದೇವಾಲಯಗಳಲ್ಲಿ ಒಂದಾಗಿದೆ. ವಾರ್ಷಿಕ ವರಮಾನ 3000 ಕೋಟಿ ರೂಪಾಯಿಯಷ್ಟಿದ್ದು, 14 ಸಾವಿರಕ್ಕೂ ಹೆಚ್ಚು ಜನರು ಇಲ್ಲಿ ಕೆಲಸ ಮಾಡುತ್ತಾರೆ. ಹಾಗಾಗಿ, ಭವಿಷ್ಯದಲ್ಲಿ ಆಗಬಹುದಾದ ಯಾವುದೇ ತೊಂದರೆಗಳನ್ನು ತಪ್ಪಿಸಲು ಇಂಥದ್ದೊಂದು ಕ್ರಮಕ್ಕೆ ಟಿಟಿಡಿ ಮುಂದಾಗಿದೆ.

ಇದನ್ನೂ ಓದಿ: Elon Musk: ಭಾರತದಲ್ಲಿ ಟೆಸ್ಲಾ ಕಾರು ಯಾವಾಗ ಬಿಡುಗಡೆ ಎಂದಿದ್ದಕ್ಕೆ ಎಲಾನ್ ಮಸ್ಕ್​ ನೀಡಿದ ಉತ್ತರ ಏನು ಗೊತ್ತಾ?

Karnataka Tourism: ನೀವು ಭೇಟಿ ನೀಡಲೇ ಬೇಕಾದ ಕರ್ನಾಟಕದ 15 ಪ್ರವಾಸಿ ತಾಣಗಳು ಇಲ್ಲಿವೆ!

TTD plans to deploy the Defence Research and Development Organisation’s anti-drone technology

ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!