ಉತ್ತರಪ್ರದೇಶದಿಂದ ಕಳವಾಗಿ ಇಂಗ್ಲೆಂಡ್​ ಸೇರಿದ್ದ ಯೋಗಿನಿ ವಿಗ್ರಹ ಸಂಕ್ರಾಂತಿಯಂದೇ ಭಾರತಕ್ಕೆ ವಾಪಸ್​; ಖಾಸಗಿ ನಿವಾಸದ ಬಳಿ ಸಿಕ್ಕಿತ್ತು ಈ ಶಿಲ್ಪ

ಉತ್ತರಪ್ರದೇಶದ ಬಂದಾ ಜಿಲ್ಲೆಯ ಲೋಖಾರಿ ದೇವಸ್ಥಾನದಲ್ಲಿದ್ದ ವಿಗ್ರಹ ಇದು ಎನ್ನಲಾಗಿದೆ. ಮರಳುಗಲ್ಲಿನಲ್ಲಿ ಸುಂದರವಾಗಿ ಕೆತ್ತಲಾದ ಶಿಲ್ಪವನ್ನು ನವದೆಹಲಿಯಲ್ಲಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ರವಾನಿಸಲಾಗುತ್ತದೆ. 

ಉತ್ತರಪ್ರದೇಶದಿಂದ ಕಳವಾಗಿ ಇಂಗ್ಲೆಂಡ್​ ಸೇರಿದ್ದ ಯೋಗಿನಿ ವಿಗ್ರಹ ಸಂಕ್ರಾಂತಿಯಂದೇ ಭಾರತಕ್ಕೆ ವಾಪಸ್​; ಖಾಸಗಿ ನಿವಾಸದ ಬಳಿ ಸಿಕ್ಕಿತ್ತು ಈ ಶಿಲ್ಪ
ಕಳವಾಗಿದ್ದ ಮೇಕೆ ಮುಖದ ಯೋಗಿನಿ
Follow us
TV9 Web
| Updated By: Lakshmi Hegde

Updated on: Jan 15, 2022 | 3:54 PM

ಇಂಗ್ಲೆಂಡ್​​ನ ಖಾಸಗಿ ನಿವಾಸವೊಂದರ ಉದ್ಯಾನವನದಲ್ಲಿ ಇತ್ತೀಚೆಗೆ ಸಿಕ್ಕಿದ್ದ ಪ್ರಾಚೀನ ಭಾರತದ ದೇವಿ ವಿಗ್ರಹವೊಂದನ್ನು ಶುಕ್ರವಾರ ಮಕರ ಸಂಕ್ರಾಂತಿ ದಿನದಂದು ಭಾರತಕ್ಕೆ ಮರಳಿಸಲಾಗಿದೆ. ಮೇಖೆ ಮುಖವುಳ್ಳ ಯೋಗಿಣಿಯ ವಿಗ್ರಹ ಇದಾಗಿದ್ದು, ಯುಕೆಯ ಕ್ರಿಸ್​ ಮರಿನೆಲ್ಲೋ ಆಫ್ ಆರ್ಟ್​ ರಿಕವರಿ ಇಂಟರ್​ನ್ಯಾಷನಲ್​ ಎಂಬ ಸಂಸ್ಥೆಯು ಭಾರತಕ್ಕೆ ಹಸ್ತಾಂತರಿಸಲು ಎಲ್ಲ ರೀತಿಯ ಸಹಾಯ ಮಾಡಿದೆ. ಹಾಗೇ, ಲಂಡನ್​​ನಲ್ಲಿರುವ ಭಾರತದ ಹೈಕಮಿಷನ್​ ಕಚೇರಿಯಲ್ಲಿ, ಇಂಗ್ಲೆಂಡ್​​ನ ಭಾರತೀಯ ಹೈಕಮಿಷನರ್​ ಗಾಯತ್ರಿ ಇಸ್ಸಾರ್ ಕುಮಾರ್​ಗೆ ಈ ಶಿಲ್ಪವನ್ನು ಹಸ್ತಾಂತರ ಮಾಡಲಾಗಿದೆ.  

ಉತ್ತರಪ್ರದೇಶದ ಬಂದಾ ಜಿಲ್ಲೆಯ ಲೋಖಾರಿ ದೇವಸ್ಥಾನದಲ್ಲಿದ್ದ ವಿಗ್ರಹ ಇದು ಎನ್ನಲಾಗಿದೆ. ಮರಳುಗಲ್ಲಿನಲ್ಲಿ ಸುಂದರವಾಗಿ ಕೆತ್ತಲಾದ ಶಿಲ್ಪವನ್ನು ನವದೆಹಲಿಯಲ್ಲಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ರವಾನಿಸಲಾಗುತ್ತದೆ.   ವಿಗ್ರಹ ಸ್ವೀಕಾರ ಮಾಡಿದ ಗಾಯತ್ರಿ ಇಸ್ಸಾರ್ ಕುಮಾರ್​ ಮಾತನಾಡಿ, ಮಕರ ಸಂಕ್ರಾಂತಿಯಂದೇ ಈ ಯೋಗಿನಿಯ ವಿಗ್ರಹವನ್ನು ಸ್ವೀಕಾರಮಾಡುತ್ತಿರುವುದು ತುಂಬ ಸಂತೋಷ ತಂದ ವಿಚಾರ ಎಂದು ಹೇಳಿದ್ದಾರೆ. ಈ ವಿಗ್ರಹ ಇರುವುದು 2021ರ ನವೆಂಬರ್​​ನಲ್ಲಿಯೇ ಭಾರತೀಯ ಹೈಕಮಿಷನ್​​ಗೆ ತಿಳಿಯಿತು. ಆಗಿನಿಂದಲೇ ಹಸ್ತಾಂತರ ಪ್ರಕ್ರಿಯೆಯಗಳು ಶುರುವಾಗಿದ್ದವು. ಇದೀಗ ನಾವು ಪುರಾತತ್ವ ಇಲಾಖೆಗೆ ವಿಗ್ರಹ ಕಳಿಸುವುದಷ್ಟೇ ಬಾಕಿ ಇದೆ. ಈ ವಿಗ್ರಹವನ್ನು ನ್ಯಾಷನಲ್​ ಮ್ಯೂಸಿಯಂನಲ್ಲಿ ಇಡುವ ಸಾಧ್ಯತೆ ಇದೆ ಎಂದೂ ಹೇಳಿದ್ದಾರೆ.

ಇದೇ ಗಾಯತ್ರಿ ಕುಮಾರ್​ ಅವರು ಪ್ಯಾರಿಸ್​ನಲ್ಲಿ ರಾಜತಾಂತ್ರಿಕ ಅಧಿಕಾರಿಯಾಗಿದ್ದಾಗ ಕೋಣನ ತಲೆಯ ಯೋಗಿನಿ ಶಿಲ್ಪವೊಂದನ್ನು ಭಾರತಕ್ಕೆ ತರಲಾಗಿತ್ತು. ಆ ಪುರಾತನ ಶಿಲ್ಪ ಕೂಡ ಲೋಖಾರಿಯ ಇದೇ ದೇಗುಲದಿಂದಲೇ ಕಳವಾಗಿತ್ತು. 2013ರಲ್ಲಿ ಅದನ್ನು ವಾಪಸ್ ಭಾರತಕ್ಕೆ ತರಲಾಗಿದ್ದು, ಸದ್ಯ ಇಲ್ಲಿನ ನ್ಯಾಷನಲ್ ಮ್ಯೂಸಿಯಂನಲ್ಲಿ ಇಡಲಾಗಿದೆ. ಅದರಂತೆ ಈಗ ಮೇಕೆ ತಲೆಯ ಯೋಗಿನಿಯನ್ನೂ ಅಲ್ಲೇ ಇಡಬಹುದು ಎಂಬ ನಿರೀಕ್ಷೆ ಇದೆ. ಅಂದಹಾಗೆ, ಈ ಯೋಗಿನಿಯರು ತಾಂತ್ರಿಕ ಪೂಜಾ ವಿಧಾನಕ್ಕೆ ಸಂಬಂಧಪಟ್ಟ ಶಕ್ತಿಶಾಲಿ ಸ್ತ್ರೀ ದೇವತೆಗಳಾಗಿದ್ದಾರೆ. 64 ಯೋಗಿನಿಯರ ಗುಂಪಿದ್ದು, ಅವರ ಶಕ್ತಿ ಅನಂತ, ಅಪರಿಮಿತ ಎಂದೇ ನಂಬಲಾಗಿದೆ.

ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಟಿಬಿ ಜಯಚಂದ್ರ ಹಾಗೂ ಕೆಲ ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ದೃಢ

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ