‘ವಿದೇಶದಲ್ಲಿ ಭಾರತಕ್ಕೆ ಮಸಿ ಬಳಿಯುವುದರಿಂದ ಅಧಿಕಾರ ಸಿಗುವುದಿಲ್ಲ’; ರಾಹುಲ್ ಗಾಂಧಿಗೆ ಅಮಿತ್ ಶಾ ಲೇವಡಿ
ವಿದೇಶಿ ನೆಲದಲ್ಲಿ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಪ್ರಜಾಪ್ರಭುತ್ವ ಹಾಗೂ ಸಾಂವಿಧಾನಿಕ ಸಂಸ್ಥೆಗಳ ಕುರಿತು ಟೀಕೆ ಮಾಡುವುದರಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. "ರಾಹುಲ್ ಗಾಂಧಿ ವಿದೇಶಗಳಿಗೆ ಭೇಟಿ ನೀಡಿದಾಗಲೆಲ್ಲಾ ಭಾರತದ ಆಂತರಿಕ ರಾಜಕೀಯ ವಿಚಾರಗಳನ್ನು ಪ್ರಸ್ತಾಪಿಸಿ ದೇಶದ ಗೌರವಕ್ಕೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ವಿದೇಶಿ ವೇದಿಕೆಗಳಲ್ಲಿ ಭಾರತಕ್ಕೆ ಮಸಿ ಬಳಿಯುವುದರಿಂದ ರಾಹುಲ್ ಗಾಂಧಿ ಅವರಿಗೆ ಅಧಿಕಾರ ಸಿಗುವುದಿಲ್ಲ; ಅಧಿಕಾರಕ್ಕೆ ಬರಲು ದೇಶದ ಜನರ ವಿಶ್ವಾಸ ಗಳಿಸಬೇಕು" ಎಂದು ಅಮಿತ್ ಶಾ ಹೇಳಿದ್ದಾರೆ.

ಪುಣೆ, ನವೆಂಬರ್ 15: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿದೇಶ ಪ್ರವಾಸಗಳನ್ನು ಟೀಕಿಸಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ದೇಶಕ್ಕೆ ಮಸಿ ಬಳಿಯುವ ಮೂಲಕ ಕಾಂಗ್ರೆಸ್ ಪಕ್ಷವು ಭಾರತದಲ್ಲಿ ಎಂದಿಗೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಮಿತ್ ಶಾ, ಇಡೀ ಜಗತ್ತೇ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಶ್ಲಾಘಿಸುತ್ತಿದ್ದರೆ, ರಾಹುಲ್ ಗಾಂಧಿ ಅವರು ಮೋದಿಯವರನ್ನು ನಿಂದಿಸುತ್ತಲೇ ಇದ್ದಾರೆ. ಆದರೆ ಇದರಿಂದ ಅವರಿಗೆ ಎಂದಿಗೂ ಲಾಭವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿದೇಶ ಪ್ರವಾಸ ನಿಲ್ಲಿಸಿ ಹಳ್ಳಿಗಳಿಗೆ ಭೇಟಿ ನೀಡಿ:
“ನಿಮಗೆ ಅಧಿಕಾರ ಬೇಕಿದ್ದರೆ, ನಿಮ್ಮ ವಿದೇಶ ಪ್ರವಾಸಗಳನ್ನು ನಿಲ್ಲಿಸಿ ಮತ್ತು ಭಾರತದ ಹಳ್ಳಿಗಳಿಗೆ ಭೇಟಿ ನೀಡಲು ಪ್ರಾರಂಭಿಸಿ; ಆಗ ಬಹುಶಃ ಮುಂದೊಂದು ದಿನ ನಿಮ್ಮ ಸರದಿ ಬರಬಹುದು. ನೀವು ಖಂಡಿತವಾಗಿಯೂ ನನ್ನ ಮಾತು ಕೇಳುವುದಿಲ್ಲ. ಆದ್ದರಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ನಾನು ಹೇಳುವುದೇನೆಂದರೆ—ನೀವು ಇದೇ ದಿಕ್ಕಿನಲ್ಲಿ ರಾಹುಲ್ ಗಾಂಧಿಯನ್ನು ಅನುಸರಿಸುತ್ತಾ ಹೋದರೆ, ಮುಂದಿನ 30 ವರ್ಷಗಳವರೆಗೆ ನಿಮ್ಮ ಸರದಿ ಬರುವುದಿಲ್ಲ” ಎಂದು ಅಮಿತ್ ಶಾ ವ್ಯಂಗ್ಯವಾಡಿದ್ದಾರೆ.
भारत की विकास यात्रा को दुनियाभर में बदनाम करने वाले राहुल गांधी के पीछे कांग्रेस के कार्यकर्ता इसी तरह चलते रहे तो अगले 30 साल तक वे भी सत्ता में नहीं आएंगे। https://t.co/cPe9Yao2TB
— Amit Shah (@AmitShah) November 15, 2026
ಇದನ್ನೂ ಓದಿ: ಸುಳ್ಳು ಆರೋಪಗಳ ಬಿಟ್ಟು ಸಂಸತ್ತಿಗೆ ಬನ್ನಿ ಮಾತನಾಡೋಣ: ರಾಹುಲ್ಗೆ ಅಮಿತ್ ಶಾ ತಿರುಗೇಟು
ಹೈದರಾಬಾದ್‌ನಲ್ಲಿ ನಡೆದ ‘ಭಾರತ್ ಶೃಂಗಸಭೆ’ ಕಾರ್ಯಕ್ರಮದಲ್ಲಿ ಇಟಲಿಯ ರಾಜಕಾರಣಿಯೊಬ್ಬರು ‘ಮತ ಕಳ್ಳತನ’ ಆರೋಪದ ಮೇಲೆ ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸಿಕೊಂಡಿದ್ದನ್ನು ಉಲ್ಲೇಖಿಸಿ ಮಾತನಾಡಿದ ಅಮಿತ್ ಶಾ, ಸತತ ಮೂರು ಲೋಕಸಭಾ ಚುನಾವಣೆಗಳಲ್ಲಿ ಸೋತಿರುವ ಹತಾಶೆಯನ್ನು ಕಾಂಗ್ರೆಸ್ ಈ ಮೂಲಕ ಹೊರಹಾಕುತ್ತಿದೆ ಎಂದು ಆರೋಪಿಸಿದರು. ಈ ಕಾರ್ಯಕ್ರಮಕ್ಕೆ ಭಾರತ ಮತ್ತು ವಿದೇಶಗಳಿಂದ ಎಡಪಂಥೀಯ ಸಿದ್ಧಾಂತವನ್ನು ಪ್ರಚಾರ ಮಾಡುವವರನ್ನು ಕಾಂಗ್ರೆಸ್ ಆಹ್ವಾನಿಸಿದೆ ಎಂದು ಅವರು ದೂರಿದರು. ಕಾರ್ಯಕ್ರಮಕ್ಕೆ ‘ಭಾರತ್ ಶೃಂಗಸಭೆ’ ಎಂದು ಹೆಸರಿಡಲಾಗಿದ್ದರೂ, ರಾಹುಲ್ ಗಾಂಧಿ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾರತ ವಿರೋಧಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮೂಲಕ ದೇಶಕ್ಕೆ ಮಸಿ ಬಳಿಯುತ್ತಿದ್ದಾರೆ ಎಂದು ಟೀಕಿಸಿದರು.
#WATCH | Pune, Maharashtra: Union Home and Cooperation Minister Amit Shah says, “I want to give a piece of advice to Rahul Gandhi ji: you will not get power by defaming India on international platforms like this. If you want power, stop your foreign trips and start visiting the villages of India; then perhaps your turn might come someday. Right now, what you are doing is trying to defame Narendra Modi ji, whose leadership the entire world is praising and India’s development journey before the world. You certainly won’t listen, so I want to tell the Congress workers that if you keep following him in this direction, your turn will not come for 30 years.”
— ANI (@ANI) November 15, 2026
“ನಿಮಗೆ 10 ವರ್ಷಗಳ ಕಾಲ ಅವಕಾಶ ನೀಡಲಾಗಿತ್ತು, ಆದರೆ ನೀವು 12 ಲಕ್ಷ ಕೋಟಿ ರೂ. ಹಗರಣ ಮತ್ತು ಭ್ರಷ್ಟಾಚಾರ ನಡೆಸಿದಿರಿ. ದೇಶದ ಜನರು ನಿಮ್ಮನ್ನು ದೆಹಲಿಯ ಸರ್ಕಾರದಿಂದ ಹೊರಹಾಕಿ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಿದರು. ಕಳೆದ 12 ವರ್ಷಗಳಲ್ಲಿ ನರೇಂದ್ರ ಮೋದಿ ಅವರ ವಿರುದ್ಧ ನಾಲ್ಕಾಣೆಯಷ್ಟೂ ಭ್ರಷ್ಟಾಚಾರದ ಒಂದೇ ಒಂದು ಆರೋಪವೂ ಕೇಳಿಬಂದಿಲ್ಲ” ಎಂದು ಅಮಿತ್ ಶಾ ಹೇಳಿದ್ದಾರೆ.
#WATCH | Pune, Maharashtra: Union Home and Cooperation Minister Amit Shah says, “The Congress party is venting the frustration of losing for three consecutive terms in various ways. Just over the past two days, the Congress party organised the ‘Bharat Summit 2026’ in Hyderabad. They invited propagators of leftist ideology from across the country and abroad to India, and the prince of the Congress also went there. They named it ‘Bharat Summit’, yet Rahul Gandhi ji worked to defame India across the entire world by expressing anti-India views at an international conference. Today, from this platform, I have come to tell the people of Maharashtra, and I also want to tell people across the entire country: wherever you meet Congressmen, ask them that fighting elections, losing, and winning depend on the performance of a party’s leaders. You were given a chance for 10 years, and you committed scams and corruption worth ₹12 lakh crore. The people of the country held you by the hand and threw you out of the government in Delhi, making Narendra Modi ji the Prime Minister. In 12 years, not even a single allegation of corruption worth even four annas has been levelled against Narendra Modi ji…”
— ANI (@ANI) November 15, 2026
ಇದನ್ನೂ ಓದಿ: ‘ನೀವೆಂದೂ ಪ್ರಧಾನಿಯಾಗಲ್ಲ’; ಹೈದರಾಬಾದ್‌ನಲ್ಲಿ ರಾಹುಲ್ ಗಾಂಧಿಗೆ ಅಮಿತ್ ಶಾ ತಿರುಗೇಟು
ಕಾಂಗ್ರೆಸ್ ಪಕ್ಷವು ಸತತ ಚುನಾವಣೆಗಳಲ್ಲಿ ಸೋಲು ಅನುಭವಿಸಿದಾಗಲೆಲ್ಲಾ ಚುನಾವಣಾ ಆಯೋಗ, ನ್ಯಾಯಾಂಗ ಮತ್ತು ಸಂವಿಧಾನದ ಮೇಲೆ ಸುಳ್ಳು ಆರೋಪಗಳನ್ನು ಹೊರಿಸುತ್ತದೆ ಎಂದು ಅಮಿತ್ ಶಾ ಟೀಕಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಆರ್ಥಿಕ ಮತ್ತು ರಾಜತಾಂತ್ರಿಕವಾಗಿ ಬಲಿಷ್ಠವಾಗುತ್ತಿರುವುದನ್ನು ವಿರೋಧ ಪಕ್ಷಗಳಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
