ದೆಹಲಿ: ದೆಹಲಿಯ (Delhi) ದ್ವಾರಾಕಾದಲ್ಲಿ ಮಂಗಳವಾರ ಬೆಳಗ್ಗೆ ಬೈಕ್ ನಲ್ಲಿ ಬಂದ ಇಬ್ಬರು ಯುವಕರು 17ರ ಹರೆಯದ ಶಾಲಾ ವಿದ್ಯಾರ್ಥಿನಿಗೆ ಆ್ಯಸಿಡ್ (Acid Attack) ಎರಚಿರುವ ಘಟನೆ ವರದಿಯಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಆ್ಯಸಿಡ್ ದಾಳಿಗೊಳಗಾಗಿರುವ 12ನೇ ತರಗತಿ ವಿದ್ಯಾರ್ಥಿನಿ ಸಫ್ದಾರ್‌ಜಂಗ್ ಆಸ್ಪತ್ರೆಯಲ್ಲಿ (Safdarjung hospital) ಚಿಕಿತ್ಸೆ ಪಡೆಯುತ್ತಿದ್ದು ಆಕೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಪ್ರಸ್ತುತ ಪ್ರಕರಣದಲ್ಲಿ ಬಾಲಕಿಯ ಕುಟುಂಬ ನೀಡಿದ ದೂರಿನನ್ವಯ ಪೊಲೀಸರು ಒಬ್ಬನನ್ನು ಬಂಧಿಸಿದ್ದು, ಇನ್ನೊಬ್ಬನಿಗಾಗಿ ಹುಡುಕಾಟ ನಡೆದಿದೆ. ಬೆಳಗ್ಗೆ 9 ಗಂಟೆಗೆ ಮೋಹನ್ ಗಾರ್ಡನ್ ಪ್ರದೇಶದಲ್ಲಿ ನಡೆದಿರುವ ಆ್ಯಸಿಡ್ ದಾಳಿಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಬಂದಿತ್ತು. ಬೆಳಗ್ಗೆ ಸರಿ ಸುಮಾರು 7.30ಕ್ಕೆ ಬೈಕ್ನಲ್ಲಿ ಬಂದ ವ್ಯಕ್ತಿಗಳು 17ರ ಹರೆಯದ ಬಾಲಕಿ ಮೇಲೆ ಆ್ಯಸಿಡ್ ನಂತಿರುವ ವಸ್ತು ಎರಚಿದ್ದಾರೆ ಎಂದು ಕರೆ ಮಾಡಿದ ವ್ಯಕ್ತಿ ಹೇಳಿದ್ದರು ಎಂದು ಉಪ ಪೊಲೀಸ್ ಆಯುಕ್ತ (ದ್ವಾರಕಾ) ಎಂ. ಹರ್ಷವರ್ಧನ್ ಹೇಳಿದ್ದಾರೆ. ಘಟನೆ ನಡೆದಾಗ ಬಾಲಕಿ ಜತೆ ಆಕೆಯ ತಂಗಿ ಕೂಡಾ ಇದ್ದಳು. ತಮಗೆ ಪರಿಚಿತರಾಗಿರುವ ವ್ಯಕ್ತಿಗಳೇ ಈ ಕೃತ್ಯವೆಸಗಿದ್ದಾರೆ ಎಂದು ಆಕೆ ಸಂದೇಹ ವ್ಯಕ್ತ ಪಡಿಸಿದ್ದಾಳೆ. ಇದೀಗ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದು, ಈ ಪ್ರಕರಣ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ಹೇಳಿದ್ದಾರೆ. ಆರೋಪಿಗಳು ಅಪ್ರಾಪ್ತರೇ ಅಥವಾ ಅಲ್ಲವೇ ಎಂಬುದು ತಕ್ಷಣಕ್ಕೆ ಗೊತ್ತಾಗಿಲ್ಲ. ಬಲ್ಲಮೂಲಗಳ ಪ್ರಕಾರ ಆರೋಪಿಗಳು ಸಂತ್ರಸ್ತೆಯ ನೆರೆಹೊರೆಯವರೇ ಆಗಿದ್ದಾರೆ.
दिल्ली के द्वारका मोड़ इलाके में एक स्कूली छात्रा पर बाइक सवार दो लड़कों ने तेजाब फेंक दिया. pic.twitter.com/X5ZIXGEsVS
— Asheesh Kumar Mishra (@Asheesh17604450) December 14, 2022
ದಾಳಿಗೆ ಕಾರಣ ಏನೆಂಬುದನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದು, ಸಂತ್ರಸ್ತೆ ಮತ್ತು ಆಕೆಯ ಪೋಷಕರ ಹೇಳಿಕೆಯನ್ನು ದಾಖಲಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
द्वारका मोड़ के पास एक स्कूली छात्रा पर तेज़ाब फेंका। हमारी टीम पीड़िता की मदद के लिए अस्पताल पहुँच रही है। बेटी को इंसाफ़ दिलाएँगे। दिल्ली महिला आयोग सालों से देश में तेज़ाब बैन करने की लड़ाई लड़ रहा है। कब जगेंगी सरकारें?
— Swati Maliwal (@SwatiJaiHind) December 14, 2022
ಮಾಹಿತಿ ಪಡೆದ ಮಹಿಳಾ ಆಯೋಗ
ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ಆಸಿಡ್ ದಾಳಿಯ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು ಘಟನೆಯ ಬಗ್ಗೆ ವಿಚಾರಣೆಗೆ ತಂಡವನ್ನು ಸಫ್ದಾರ್‌ಜಂಗ್ ಆಸ್ಪತ್ರೆಗೆ ಕಳುಹಿಸಿದೆ. ಮಹಿಳಾ ಆಯೋಗವು ವರದಿಯಾದ ಅಪರಾಧ ಬಗ್ಗೆ ಮಾಹಿತಿ ತೆಗೆದುಕೊಳ್ಳುತ್ತದೆ. ಆಯೋಗದ ತಂಡವು ಈ ವಿಷಯವನ್ನು ವಿಚಾರಣೆ ಮಾಡಲು ಮತ್ತು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲು ಆಸ್ಪತ್ರೆಗೆ ತಲುಪಲಿದೆ ಎಂದು ಆಯೋಗದ ಹೇಳಿಕೆಯಲ್ಲಿ ತಿಳಿಸಿದೆ. ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಘಟನೆಯ ಬಗ್ಗೆ ಟ್ವೀಟ್ ಮಾಡಿದ್ದು, ಆಯೋಗವು ಸಂತ್ರಸ್ತೆಗೆ ನ್ಯಾಯ ದೊರಕಿಸಲು ಒತ್ತಾಯಿಸಿದೆ.
ಇದನ್ನೂ ಓದಿ: ದೆಹಲಿ ಹತ್ಯೆ ಮಾದರಿಯಲ್ಲಿ ತಂದೆಯನ್ನೇ ಕೊಂದು ದೇಹವನ್ನು 30 ತುಂಡು ಮಾಡಿ ಬೋರ್ವೆಲ್ಗೆ ಹಾಕಿದ ಮಗ!
ಎರಡೂ ಕಣ್ಣಿಗೂ ಹೊಕ್ಕಿದ ಆ್ಯಸಿಡ್
ಮಗಳ ಎರಡೂ ಕಣ್ಣಿಗೂ ಆ್ಯಸಿಡ್ ಹೊಕ್ಕಿದೆ ಎಂದು ಸಂತ್ರಸ್ತೆಯ ಅಪ್ಪ ಹೇಳಿದ್ದಾರೆ. ಆರೋಪಿಗಳು ಮುಖ ಮುಚ್ಚಿದ್ದರಿಂದ ಅವರನ್ನು ಇನ್ನೂ ಪತ್ತೆ ಹಚ್ಚಬೇಕಿದೆ. ನಮ್ಮ ಸಣ್ಣ ಮಗಳು ಮನೆಗೆ ಓಡುತ್ತಾ ಬಂದು ಅಕ್ಕನಿಗೆ ಆ್ಯಸಿಡ್ ಎರಚಲಾಗಿದೆ ಎಂದು ಹೇಳಿದ್ದಳು. ಆ್ಯಸಿಡ್ ಎರಚಿದ ಹುಡುಗರು ಮುಖ ಮುಚ್ಚಿದ್ದರು, ಅವರನ್ನು ಪತ್ತೆ ಹಚ್ಚಬೇಕಿದೆ ಎಂದು ಅವರು ಹೇಳಿದ್ದಾರೆ.
Published On - 1:38 pm, Wed, 14 December 22