AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಪಿ: ಪತ್ನಿ ‘ಕೊಲೆ’ ಅರೋಪದಲ್ಲಿ ಪತಿಗೆ ಸೆರೆವಾಸದ ಶಿಕ್ಷೆ ಆದರೆ ಆಕೆ ಎರಡನೇ ಗಂಡನೊಂದಿಗೆ ರಾಜಸ್ತಾನದಲ್ಲಿ ಪತ್ತೆಯಾದಳು!

ಏತನ್ಮಧ್ಯೆ, ಉತ್ತರ ಪ್ರದೇಶದ ಪೊಲೀಸರಿಗೆ ಮಥುರಾದ ಮಗುರಾ ಕಾಲುವೆ ಬಳಿ ಮಹಿಳೆಯ ಶವವೊಂದು ಸಿಕ್ಕಿತ್ತು. ಶವದ ಮರಣೋತ್ತರ ಪರೀಕ್ಷೆ ನಡೆಯದ ಕಾರಣ ಪೊಲೀಸರೇ ದೇಹದ ಅಂತಿಮ ಸಂಸ್ಕಾರ ನೆರವೇರಿಸಿದ್ದರು.

ಯುಪಿ: ಪತ್ನಿ ‘ಕೊಲೆ’ ಅರೋಪದಲ್ಲಿ ಪತಿಗೆ ಸೆರೆವಾಸದ ಶಿಕ್ಷೆ ಆದರೆ ಆಕೆ ಎರಡನೇ ಗಂಡನೊಂದಿಗೆ ರಾಜಸ್ತಾನದಲ್ಲಿ ಪತ್ತೆಯಾದಳು!
ಪೊಲೀಸ್ ಸ್ಟೇಶನ್​ನಲ್ಲಿ ಆರತಿImage Credit source: Jagran English
TV9 Web
| Edited By: |

Updated on: Dec 14, 2022 | 2:21 PM

Share

ಉತ್ತರ ಪ್ರದೇಶ:  ಸತ್ತಿರುವಳೆಂದು ಭಾವಿಸಲಾಗಿದ್ದ ವಿವಾಹಿತ ಮಹಿಳೆಯೊಬ್ಬಳು ತನ್ನ ಎರಡನೇ ಗಂಡನೊಂದಿಗೆ ರಾಜಸ್ತಾನದಲ್ಲಿ ವಾಸವಾಗಿರುವ ವಿಸ್ಮಯಕಾರಿ ಘಟನೆ ಬೆಳಕಿಗೆ ಬಂದಿದೆ. ಆರತಿ (Arati) ಹೆಸರಿನ ಈ ಮಹಿಳೆಯ ನಾಪತ್ತೆ ಮತ್ತು ‘ಕೊಲೆ’ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಮೊದಲ ಗಂಡ 32-ವರ್ಷ-ವಯಸ್ಸಿನ ಸೋನು ಸೈನಿ (Sonu Saini) 18-ತಿಂಗಳು ಸೆರೆವಾಸದ ಶಿಕ್ಷೆ ಮತ್ತು ಅವನ ಸ್ನೇಹಿತ 30-ವರ್ಷ-ವಯಸ್ಸಿನ ಗೋಪಾಲ ಸೈನಿಗೆ (Gopal Saini) 9-ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿತ್ತು. ಅವರಿಬ್ಬರೂ ಈಗ ಜಾಮೀನು ಪಡೆದು ಹೊರಗಿದ್ದಾರೆ ಎಂದು ಐಎಎನ್ ಎಸ್ ವರದಿ ಮಾಡಿದೆ.

ಪೊಲೀಸ್ ದಾಖಲೆಗಳ ಪ್ರಕಾರ ಆರತಿ, ಉತ್ತರ ಪ್ರದೇಶ ವೃಂದಾವನಲ್ಲಿನ ಬಾಡಿಗೆ ಮನೆಯೊಂದರಿಂದ 2015 ರಲ್ಲಿ ನಾಪತ್ತೆಯಾಗಿದ್ದಳು.

ಇದನ್ನೂ ಓದಿ: GST Compensation: ರಾಜ್ಯಗಳಿಗೆ ಬಾಕಿ ಇರುವ ಜಿಎಸ್​ಟಿ ಪರಿಹಾರ ಶೀಘ್ರ ಬಿಡುಗಡೆ; ನಿರ್ಮಲಾ ಸೀತಾರಾಮನ್

‘ಸೋನು ಪೊಲೀಸರಿಗೆ ನೀಡಿದ್ದ ಹೇಳಿಕೆಯನ್ವಯ ಸೋನು 2015ರಲ್ಲಿ ಆರತಿ ಯನ್ನು ನ್ಯಾಯಾಲಯವೊಂದರಲ್ಲಿ ಮದುವೆಯಾದ, ಮದುವೆಯಾದ ಬಳಿಕ ಆರತಿ ಸೋನುನ ಜಮೀನನ್ನು ತನ್ನ ಹೆಸರಿಗೆ ನೋಂದಣಿ ಮಾಡಿಸುವಂತೆ ವರಾತ ತೆಗೆದು ಹಣಕ್ಕಾಗಿಯೂ ಪೀಡಿಸತೊಡಗಿದಳು. ಅದು ಸದ್ಯಕ್ಕೆ ಸಾಧ್ಯವಾಗಲಾರದು ಅಂತ ಸೋನಿ ಹೇಳಿದಾಗ ಮದುವೆಯಾದ ಕೇವಲ 8 ದಿನಗಳ ನಂತರ ಆರತಿ ಮನೆಬಿಟ್ಟು ಹೋಗಿದ್ದಳು. ಸೋನು ಅವಳಿಗಾಗಿ ಬಹಳಷ್ಟು ಹುಡುಕಾಡಿದ ಆದರೆ ಎಲ್ಲೂ ಅವಳು ಪತ್ತೆಯಾಗಲಿಲ್ಲ,’ ಅಂತ ಮೆಹದಿಪುರ್ ಪೊಲೀಸ್ ಸ್ಟೇಶನ್ ಅಧಿಕಾರ ಬಾಲಾಜಿ ಅಜಿತ್ ಸಿಂಗ್ ಬಡ್ಸೇರ ಹೇಳಿರುವುದನ್ನು ಎ ಎನ್ ಐ ವರದಿ ಮಾಡಿದೆ.

ಏತನ್ಮಧ್ಯೆ, ಉತ್ತರ ಪ್ರದೇಶದ ಪೊಲೀಸರಿಗೆ ಮಥುರಾದ ಮಗುರಾ ಕಾಲುವೆ ಬಳಿ ಮಹಿಳೆಯ ಶವವೊಂದು ಸಿಕ್ಕಿತ್ತು. ಶವದ ಮರಣೋತ್ತರ ಪರೀಕ್ಷೆ ನಡೆಯದ ಕಾರಣ ಪೊಲೀಸರೇ ದೇಹದ ಅಂತಿಮ ಸಂಸ್ಕಾರ ನೆರವೇರಿಸಿದ್ದರು.

ಇದನ್ನೂ ಓದಿ: ‘ಸಂವಿಧಾನ ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಹತ್ಯೆ ಮಾಡಿ’; ಕೈ ನಾಯಕ ಪಟೇರಿಯಾ ವಿವಾದಾತ್ಮಕ ಹೇಳಿಕೆ

ಆರತಿಯ ತಂದೆ ವೃಂದಾವನ ಪೊಲೀಸ್ ಸ್ಟೇಶನ್ ನಲ್ಲಿ ದೂರು ಸಲ್ಲಿಸಿದ ನಂತರ ಅವಳ ಪತಿ ಸೋನು ಮತ್ತು ಅವನ ಗೆಳೆಯ ಗೋಪಾಲ ವಿರುದ್ಧ 2016ರಲ್ಲಿ ಕೊಲೆ ಆರೋಪ ದಾಖಲಿಸಲಾಗಿತ್ತು. ಅವರಿಬ್ಬರು ಸಹ ನಾಪತ್ತೆಯಾಗಿದ್ದ ಕಾರಣ ಸುಳಿವು ನೀಡಿದವರಿಗೆ ರೂ 15,000 ಬಹುಮಾನವನ್ನು ಉತ್ತರ ಪ್ರದೇಶ ಪೊಲೀಸ್ ಘೋಷಿಸಿತ್ತು.

ಈಗ 6 ವರ್ಷಗಳ ಬಳಿಕ ಸೋನು ಮತ್ತು ಗೋಪಾಲ ಆರತಿಯನ್ನು ಪತ್ತೆ ಮಾಡಿ ವಿಷಯವನ್ನು ಮಥುರಾ ಪೊಲೀಸರ ಗಮನಕ್ಕೆ ತಂದಿದ್ದಾರೆ. ರವಿವಾರದಂದು ಪೊಲೀಸರು ಆರತಿಯನ್ನು ವಶಕ್ಕೆ ಪಡೆದಿದ್ದಾರೆ. ಅವಳ ಬಳಿ ಎರಡು ಆಧಾರ್ ಕಾರ್ಡ್ ಗಳು ಪತ್ತೆಯಾಗಿದ್ದು ಅವುಗಳಲ್ಲಿ ನಮೂದಾಗಿರುವ ಜನ್ಮದಿನಾಂಕಗಳು ಬೇರೆ ಬೇರೆಯಾಗಿವೆ ಅಂತ ಪೊಲೀಸರು ಹೇಳಿರುವುದನ್ನು ಐಎಎನ್ ಎಸ್ ವರದಿ ಮಾಡಿದೆ.

ಆರತಿ ‘ಕೊಲೆ’ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನು ಮೇಲೆ ಹೊರಗಿರುವ ಸೋನು ಮತ್ತು ಗೋಪಾಲ ತಮಗೆ ನ್ಯಾಯ ಸಿಗುವ ನಿರೀಕ್ಷೆಯಲ್ಲಿದ್ದಾರೆ.

ಮತ್ತಷ್ಟು ದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ