ಪಪ್ಪು ಯಾರು? ಸಂಸತ್ನಲ್ಲಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ ಟಿಎಂಸಿ ಸಂಸದೆ; ಮಹುವಾ ಮೊಯಿತ್ರಾ ಭಾಷಣಕ್ಕೆ ವಿಪಕ್ಷಗಳ ಚಪ್ಪಾಳೆ
Mahua Moitra ಮಂಗಳವಾರ ಸಂಜೆ ತಮ್ಮ ಭಾಷಣವನ್ನು ಟ್ವೀಟ್ ಮಾಡಿದ ಮೊಯಿತ್ರಾ, ಸದನದಲ್ಲಿ ಆಕೆ ಮಾತಾಡುತ್ತಿರುವ ಫೋಟೊವನ್ನು ಟಿನ್ಟಿನ್ ಕಾಮಿಕ್ ಬುಕ್ ಸೀರಿಸ್ ಕವರ್ ಪೇಜ್ನಂತೆ ಬದಲಿಸಿದ್ದಾರೆ. ತಮ್ಮ ಭಾಷಣದ ವಿಡಿಯೊಗೆ The adventures of Tintin: The discovery of the real pappu ಎಂಬ ಶೀರ್ಷಿಕೆಯನ್ನೂ ಅವರು ನೀಡಿದ್ದಾರೆ.
ಮಂಗಳವಾರ ಲೋಕಸಭೆಯಲ್ಲಿ (Lok Sabha) ಮಾತನಾಡಿದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ (Mahua Moitra) ಅಂಕಿ ಅಂಶಗಳನ್ನು ಉಲ್ಲೇಖಿಸಿ ಬಿಜೆಪಿ (BJP) ನೇತೃತ್ವದ ಕೇಂದ್ರ ಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆಗೈದು, ಈಗ ಪಪ್ಪು ಯಾರು ಎಂದು ಕೇಳಿದ್ದರು. ಮೊಯಿತ್ರಾ ಅವರ ಭಾಷಣ ಸಾಮಾಜಿಕ ಮಾಧ್ಯಮಗಳಲ್ಲೂ ಸಂಚಲನ ಸೃಷ್ಟಿಸಿದ್ದು ವಿಪಕ್ಷ ನಾಯಕರು ವಿಡಿಯೊವನ್ನು ಶೇರ್ ಮಾಡಿ ಶ್ಲಾಘಿಸಿದ್ದಾರೆ. ಅನುದಾನದ ಪೂರಕ ಬೇಡಿಕೆ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆ ವೇಳೆ ಮೊಯಿತ್ರಾ ಅವರು ಕೈಗಾರಿಕೆ, ನಿರ್ಮಾಣ ವಲಯ ಮತ್ತು ಭಾರತ ಬಿಟ್ಟು ವಲಸೆ ಹೋಗುತ್ತಿರುವ ಜನರ ಅಂಕಿ ಅಂಶಗಳನ್ನು ಉಲ್ಲೇಖಿಸಿ ಪ್ರಶ್ನಿಸಿದ್ದಾರೆ. ಅವಹೇಳನ, ತೀವ್ರ ಅಸಮರ್ಥತೆಯನ್ನು ಸೂಚಿಸುವ ಪಪ್ಪು ಎಂಬ ಪದವನ್ನು ಆಡಳಿತರೂಢ ಬಿಜೆಪಿ ಹುಟ್ಟು ಹಾಕಿದ್ದು, ಸಾಮಾನ್ಯವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇಲೆ ದಾಳಿ ಮಾಡಲು ಬಳಸಲಾಗುತ್ತದೆ. ಹೀಗೆ ಹೇಳುವಾಗ ವಿಪಕ್ಷ ನಾಯಕರು ಮೇಜು ಕುಟ್ಟಿ ಪ್ರಶಂಸಿಸಿದ್ದಾರೆ. ತಮ್ಮ ಭಾಷಣವನ್ನು ಮುಂದುವರಿಸಿದ ಟಿಎಂಸಿ ಸಂಸದೆ, ಸವಾಲ್ ಯೇ ನಹೀ ಹೈ ಬಸ್ತಿಯಾಂ ಕಿಸ್ನೇ ಜಲಾಯಿ, ಸವಾಲ್ ಯೇ ಹೈ ಕೀ ಪಾಗಲ್ ಕೇ ಹಾಥ್ ಮೇ ಮಾಚಿಸ್ ಕಿಸ್ನೇ ದೀ (ಯಾರು ಬೆಂಕಿ ಹೊತ್ತಿಸಿದರು ಎಂಬುದು ಪ್ರಶ್ನೆಯಲ್ಲ, ಹುಚ್ಚನ ಕೈಯಲ್ಲಿ ಬೆಂಕಿಪೊಟ್ಟಣ ಕೊಟ್ಟವರು ಎಂಬುದು ಪ್ರಶ್ನೆ) ಎಂದಿದ್ದಾರೆ.
— Mahua Moitra (@MahuaMoitra) December 13, 2022
ಮಂಗಳವಾರ ಸಂಜೆ ತಮ್ಮ ಭಾಷಣವನ್ನು ಟ್ವೀಟ್ ಮಾಡಿದ ಮೊಯಿತ್ರಾ, ಸದನದಲ್ಲಿ ಆಕೆ ಮಾತಾಡುತ್ತಿರುವ ಫೋಟೊವನ್ನು ಟಿನ್ಟಿನ್ ಕಾಮಿಕ್ ಬುಕ್ ಸೀರಿಸ್ ಕವರ್ ಪೇಜ್ನಂತೆ ಬದಲಿಸಿದ್ದಾರೆ. ತಮ್ಮ ಭಾಷಣದ ವಿಡಿಯೊಗೆ The adventures of Tintin: The discovery of the real pappu ಎಂಬ ಶೀರ್ಷಿಕೆಯನ್ನೂ ಅವರು ನೀಡಿದ್ದಾರೆ.
ತಮ್ಮ ಸಹೋದ್ಯೋಗಿಯ ಭಾಷಣ ಶೇರ್ ಮಾಡಿದ ಟಿಎಂಸಿ ಸಂಸದ ಡೆರಿಕ್ ಒಬ್ರೇನ್, ಎರಡು ತಿಂದಶ ಹಿಂದಿದೆ ಟಿಎಂಸಿ ಪ್ರದಾನ ಕಾರ್ಯದರ್ಶಿ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ #IndiasBiggestPappuAmitShah ಎಂಬ ಪದ ಹುಟ್ಟುಹಾಕಿದ್ದರು. ಆ ನಂತರ ಈ ಟೀಶರ್ಟ್ ಬಂದಿದ್ದು ಇದು ಭಾರತದಲ್ಲಿ ವೈರಲ್ ಆಗಿದೆ. ಇಂದು ಮಹುವಾ ಮೊಯಿತ್ರಾ ಅವರು ಲೋಕಸಭೆಯಲ್ಲಿ IndiasBiggestPappuAmitShah ಯಾರು ಎಂಬುದನ್ನು ಹೇಳಿದ್ದಾರೆ. ಡೆರಿಕ್ ಅವರು ರಿಯಲ್ ಪಪ್ಪು ಟಿ ಶರ್ಟ್ ಧರಿಸಿರುವ ಫೋಟೊವನ್ನು ಕೂಡಾ ಟ್ವೀಟ್ ಮಾಡಿದ್ದಾರೆ.
Two months ago @AITCofficial National General Secretary @abhishekaitc coined the new phrase #IndiasBiggestPappuAmitShah
Then came T-shirts & more which went viral across #India
Today @MahuaMoitra introduced #IndiasBiggestPappuAmitShah to Lok Sabha #Parliament
Her speech ? https://t.co/SaDByZhDgB pic.twitter.com/jHGWlo321T
— Derek O’Brien | ডেরেক ও’ব্রায়েন (@derekobrienmp) December 13, 2022
2019ರಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿದ್ದ ನಟ ಪ್ರಕಾಶ್ ರಾಜ್ ಕೂಡಾ ಮೊಯಿತ್ರಾ ಅವರ ಭಾಷಣ ಶೇರ್ ಮಾಡಿ, ಡಿಯರ್ ಸುಪ್ರೀಂ ಪಪ್ಪು, ಎನೀ ಕಾಮೆಂಟ್ಸ್ ಎಂದು ಬರೆದಿದ್ದಾರೆ.
ಇದೇ ಭಾಷಣ ಶೇರ್ ಮಾಡಿದ ಡಿಎಂಕೆ ಶಾಸಕ ಟಿಆರ್ ಬಿ ರಾಜ, ಖಜಾನೆ ಕಿತ್ತುಕೊಳ್ಳುತ್ತಿರುವ ಮಹುವಾ ಎಂದು ಬರೆದಿದ್ದಾರೆ. ಮಹುವಾ ರೀತಿ ಹೆಚ್ಚಿನ ಸಂಸದರು ಬೇಕು ಎಂದು ಮಹಾರಾಷ್ಟ್ರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ದೆಹಾಡೆ ಹೇಳಿದ್ದಾರೆ.
ಇದನ್ನೂ ಓದಿ: ಸಂಸತ್ನಲ್ಲಿ ವಿಪಕ್ಷಗಳ ಗದ್ದಲ; ಪ್ರತಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿ ನೆಹರೂ ನಿರ್ಧಾರವನ್ನು ನೆನಪಿಸಿದ ಅಮಿತ್ ಶಾ
ಮೊಯಿತ್ರಾ ಅವರು ತಮ್ಮ ಭಾಷಣದಲ್ಲಿ ಹೆಚ್ಚುವರಿ 4.36 ಲಕ್ಷ ಕೋಟಿ ರೂ.ಗಳ ಬಗ್ಗೆ ಮಾತನಾಡಿದ್ದಾರೆ. ಇದು ಬಜೆಟ್‌ನಲ್ಲಿನ ನಿಬಂಧನೆಗಿಂತ ವಿತ್ತೀಯ ಕೊರತೆಯನ್ನು ಹೆಚ್ಚಿಸಲಿದೆ. ಇದು ವಿತ್ತೀಯ ಕೊರತೆಯನ್ನು ನಿಯಂತ್ರಿಸುವ ಸರ್ಕಾರದ ಸ್ವಂತ ಗುರಿಗೆ ವಿರುದ್ಧವಾಗಿದೆ. ಮೋದಿ ಸರ್ಕಾರದ ಕಳೆದ ಒಂಬತ್ತು ವರ್ಷಗಳಲ್ಲಿ ಪೌರತ್ವವನ್ನು ತ್ಯಜಿಸಿದವರ ಸಂಖ್ಯೆ ಸುಮಾರು 12.5 ಲಕ್ಷದ ಬಗ್ಗೆಯೂ ಅವರು ಮಾತನಾಡಿದರು. “ಇದು ಆರೋಗ್ಯಕರ ಆರ್ಥಿಕ ಮತ್ತು ತೆರಿಗೆ ಪರಿಸರದ ಸಂಕೇತವೇ? ಈಗ ಪಪ್ಪು ಯಾರು ಎಂದು ಮೊಯಿತ್ರಾ ಕೇಳಿದ್ದಾರೆ.
Published On - 5:28 pm, Wed, 14 December 22