GST Compensation: ರಾಜ್ಯಗಳಿಗೆ ಬಾಕಿ ಇರುವ ಜಿಎಸ್​ಟಿ ಪರಿಹಾರ ಶೀಘ್ರ ಬಿಡುಗಡೆ; ನಿರ್ಮಲಾ ಸೀತಾರಾಮನ್

ಅಕೌಂಟೆಂಟ್ ಜನರಲ್​ಗಳು ರಾಜ್ಯಗಳ ಪರಿಹಾರ ಬೇಡಿಕೆಯನ್ನು ದೃಢೀಕರಿಸದಿದ್ದಲ್ಲಿ ಅವರು ಆ ಕೆಲಸವನ್ನು ತ್ವರಿತಗೊಳಿಸಬೇಕು. ಪ್ರಮಾಣಪತ್ರ ದೊರೆತ ಕೂಡಲೇ ಅದನ್ನು ಪರಿಶೀಲಿಸಿ ಅನುಮೋದನೆ ನೀಡಲು ನಾನು ಸಿದ್ಧವಿದ್ದೇನೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

GST Compensation: ರಾಜ್ಯಗಳಿಗೆ ಬಾಕಿ ಇರುವ ಜಿಎಸ್​ಟಿ ಪರಿಹಾರ ಶೀಘ್ರ ಬಿಡುಗಡೆ; ನಿರ್ಮಲಾ ಸೀತಾರಾಮನ್
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (ಸಂಗ್ರಹ ಚಿತ್ರ)
Follow us
TV9 Web
| Updated By: Ganapathi Sharma

Updated on: Dec 13, 2022 | 10:56 AM

ನವದೆಹಲಿ: ರಾಜ್ಯಗಳಿಗೆ ಬಾಕಿ ಇರುವ ಜಿಎಸ್​ಟಿ ಪರಿಹಾರವನ್ನು (GST Compensation) ಅಕೌಂಟೆಂಟ್ ಜನರಲ್ ದೃಢೀಕರಿಸಿದ ಕೂಡಲೇ ಬಿಡುಗಡೆ ಮಾಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ತಿಳಿಸಿದ್ದಾರೆ. ಅಕೌಂಟೆಂಟ್ ಜನರಲ್ ದೃಢೀಕರಿಸಿದ ಪ್ರಮಾಣಪತ್ರವನ್ನು ರಾಜ್ಯಗಳು ಸಲ್ಲಿಸದೇ ಹೋದಲ್ಲಿ ಅಥವಾ ವಿಳಂಬ ಮಾಡಿದಲ್ಲಿ ಪರಿಹಾರ ಬಿಡುಗಡೆ ವಿಳಂಬವಾಗಲಿದೆ ಎಂದು ಅವರು ಹೇಳಿದ್ದಾರೆ. ಲೋಕಸಭೆಯಲ್ಲಿ (Lok Sabha) ಪ್ರಶ್ನೋತ್ತರ ವೇಳೆಯಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ.

ಅಕೌಂಟೆಂಟ್ ಜನರಲ್​ಗಳು ರಾಜ್ಯಗಳ ಪರಿಹಾರ ಬೇಡಿಕೆಯನ್ನು ದೃಢೀಕರಿಸದಿದ್ದಲ್ಲಿ ಅವರು ಆ ಕೆಲಸವನ್ನು ತ್ವರಿತಗೊಳಿಸಬೇಕು. ಪ್ರಮಾಣಪತ್ರ ದೊರೆತ ಕೂಡಲೇ ಅದನ್ನು ಪರಿಶೀಲಿಸಿ ಅನುಮೋದನೆ ನೀಡಲು ನಾನು ಸಿದ್ಧವಿದ್ದೇನೆ. 2022ರ ಜೂನ್​ವರೆಗೆ ರಾಜ್ಯಗಳಿಗೆ ಐದು ವರ್ಷಗಳ ಅವಧಿಯ ಜಿಎಸ್​ಟಿ ಪರಿಹಾರ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ಜೂನ್​ನ ಅರ್ಧದಷ್ಟು ಪರಿಹಾರವನ್ನು ಕಳೆದ ತಿಂಗಳು ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Union Budget 2023-24: ತೆರಿಗೆ ವಿನಾಯಿತಿ ಮಿತಿ 5 ಲಕ್ಷ ರೂ.ಗೆ ಸಾಧ್ಯತೆ; ವರದಿ

ಬಾಕಿ ಮೊತ್ತಕ್ಕಾಗಿ ಕೇಂದ್ರವು ಕಾಯುತ್ತಿದೆ. ಪರಿಹಾರ ಸೆಸ್​ನಿಂದ ಅದನ್ನು ನೀಡಲಾಗುವುದರಿಂದ ಅದರ ಸಂಗ್ರಹಣೆಗಾಗಿ ಕಾಯಲಾಗುತ್ತಿದೆ. ಇದು ಹೊರತುಪಡಿಸಿ ನಮ್ಮ ಕಡೆಯಿಂದ ಯಾವುದೂ ವಿಳಂಬವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರವು ವಿವಿಧ ರಾಜ್ಯಗಳಿಗೆ ನೀಡಬೇಕಿದ್ದ ಜಿಎಸ್​ಟಿ ಬಾಕಿ ಪರಿಹಾರದ ಹಣವನ್ನು ನವೆಂಬರ್ 25ರಂದು ಬಿಡುಗಡೆ ಮಾಡಿತ್ತು. 2022ರ ಏಪ್ರಿಲ್‌ನಿಂದ ಜೂನ್ 24ರ ಅವಧಿಯ 75 ಸಾವಿರ ಕೋಟಿ ಪರಿಹಾರ ಬಿಡುಗಡೆಗೊಳಿಸಲಾಗಿತ್ತು. ಇದರಲ್ಲಿ ಕರ್ನಾಟಕಕ್ಕೆ 1,915 ಕೋಟಿ ರೂಪಾಯಿ ಜಿಎಸ್​ಟಿ ಪರಿಹಾರ ಹಣ ಸಿಕ್ಕಿತ್ತು. ಒಟ್ಟಾರೆಯಾಗಿ 2022-23ರ ಸಾಲಿನಲ್ಲಿ ಕೇಂದ್ರ ಸರ್ಕಾರ 1,15,662 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಇದರಲ್ಲಿ ಈ ಬಾರಿಯ ಜಿಎಸ್​ಟಿ ಸಂಗ್ರಹದಲ್ಲಿ ಅಗ್ರಸ್ಥಾನದಲ್ಲಿರುವ ಮಹಾರಾಷ್ಟ್ರಕ್ಕೆ 2081 ಕೋಟಿ ರೂ, ಸಿಕ್ಕಿದ್ದರೆ, ನಂತರ ಸ್ಥಾನದಲ್ಲಿರುವ ರ್ನಾಟಕಕ್ಕೆ 1,915 ಕೋಟಿ ರೂ. ನೀಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ