ಆತ ಐಎಎಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ, ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡ, ಆತ ಸಾಕಿದ್ದ ನಾಯಿ ನೆರಳಿನಂತೆ ಆತನನ್ನು ಸಾವಿನಲ್ಲೂ ಹಿಂಬಾಲಿಸಿತು!
ಇತ್ತ ತಂದೆ ಆನಂದ್ ಅವರು ತಮ್ಮ ಮಗ ಸಂಭವ್‌ಗೆ ಫೋನ್ ಮಾಡಿದರೆ ಆತನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಅಕ್ಕಪಕ್ಕದವರಿಗೆ ಕರೆ ಮಾಡಿ ಮಗನ ಬಗ್ಗೆ ವಿಚಾರಿಸಿ ಎಂದಿದ್ದಾರೆ. ಸಂಭವ್ ಅವರ ಮನೆಗೆ ನೆರೆಹೊರೆಯವರು ಬಂದಾಗ ನಾಯಿ ಅವರ ಮೇಲೆ ದಾಳಿ ಮಾಡಿದೆ.
ಸಾಕುನಾಯಿಗಳು ತಮ್ಮ ಮಾಲೀಕರ ಮೇಲೆ ತೋರುವ ನಂಬಿಕೆ ಅಷ್ಟಿಷ್ಟಲ್ಲ. ನಾಯಿ ನಿಯತ್ತು (dog) ಅಂದರೇನೇ ಹಾಗೆ. ಅದು ನೆರಳಿನಂತೆ ತನ್ನ ಮಾಲೀಕನನ್ನು ಹಿಂಬಾಲಿಸುತ್ತದೆ. ಒಮ್ಮೆ ತನ್ನ ಮಾಲೀಕನನ್ನು ಗುರುತಿಸಿ ಆತನನ್ನೇ ಆಶ್ರಯಿಸಿದಾಗ ಸಾಯುವವರೆಗೂ ಆ ಮಾಲೀಕನನ್ನು ಅನುಸರಿಸುತ್ತವೆ. ಆ ನಾಯಿಯ ನಿಯತ್ತು ಕೆಲ ಬಾರಿ ಸಾವಿನಲ್ಲೂ ಪರ್ಯವಸನಗೊಳ್ಳುವುದುಂಟು. ತಾಜಾ ಉದಾಹರಣೆಯಲ್ಲಿ ಇತ್ತೀಚೆಗೆ ನಾಯಿಯೊಂದು ತನ್ನ ಮಾಲೀಕನ (Youth) ಮೇಲೆ ಇಟ್ಟಿರುವ ಪ್ರೀತಿ ನೊಡಿದಾಗ ಕಣ್ಣಲ್ಲಿ ನೀರು ತರಿಸುತ್ತದೆ.
ಸಂಭವ್ ಅಗ್ನಿಹೋತ್ರಿ ಎಂಬ 23 ವರ್ಷದ ಯುವಕ ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯಲ್ಲಿ (Jhansi district in Uttar pradesh) ವಾಸಿಸುತ್ತಿದ್ದಾರೆ. ಅವರು ಕೆಲವು ದಿನಗಳಿಂದ ಸಿವಿಲ್ ಸರ್ವಿಸಸ್ ಪರೀಕ್ಷೆಗಾಗಿ (IAS) ತಯಾರಿ ನಡೆಸುತ್ತಿದ್ದರು. ಅವರ ತಂದೆ ಆನಂದ್ ಅಗ್ನಿಹೋತ್ರಿ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆಕೆಯನ್ನು ಚಿಕಿತ್ಸೆಗಾಗಿ ಭೋಪಾಲ್‌ನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಇತ್ತ ಯುವಕ ಸಂಭವ್ ತಮ್ಮ ಸಾಕು ನಾಯಿಯೊಂದಿಗೆ ಅವರ ಮನೆಯಲ್ಲಿಯೇ ಉಳಿದಿರುತ್ತಾರೆ. ಆದರೆ ಸಂಭವ್ ಜೀವನದಲ್ಲಿ ಜುಗುಪ್ಸೆಗೊಂಡು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದು ಅವರ ಮುದ್ದಿನ ನಾಯಿಯ ಗಮನಕ್ಕೆ ಬಂದಿತ್ತು.
ಇತ್ತ ತಂದೆ ಆನಂದ್ ಅವರು ತಮ್ಮ ಮಗ ಸಂಭವ್‌ಗೆ ಫೋನ್ ಮಾಡಿದರೆ ಆತನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಅಕ್ಕಪಕ್ಕದವರಿಗೆ ಕರೆ ಮಾಡಿ ಮಗನ ಬಗ್ಗೆ ವಿಚಾರಿಸಿ ಎಂದಿದ್ದಾರೆ. ಸಂಭವ್ ಅವರ ಮನೆಗೆ ನೆರೆಹೊರೆಯವರು ಬಂದಾಗ ನಾಯಿ ಅವರ ಮೇಲೆ ದಾಳಿ ಮಾಡಿದೆ. ಅಷ್ಟೊತ್ತಿಗಾಗಲೇ ಸಂಭವ್ ಆ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದರು. ಪೊಲೀಸರಿಗೂ ಸ್ಥಳಕ್ಕೆ ಬರಲು ನಾಯಿ ಬಿಟ್ಟಿಲ್ಲ. ಕೊನೆಗೆ ನಾಯಿಗೆ ಮತ್ತುಬರಿಸುವ ಮದ್ದು ನೀಡಿ ಪ್ರಜ್ಞೆ ತಪ್ಪಿಸಿ, ಕಟ್ಟಿ ಹಾಕಿದ್ದಾರೆ. ಬಳಿಕ, ಸಂಭವ್ ಅವರ ದೇಹವನ್ನು ಹೊರತೆಗೆಯಲಾಗಿದೆ. ಆದರೆ ಈ ಮಧ್ಯೆ, ಆ ನಾಯಿಯೂ ಸಾವನ್ನಪ್ಪಿದೆ. ಅತಿಯಾದ ಔಷಧ ಸೇವನೆಯಿಂದ ನಾಯಿ ಸಾವನ್ನಪ್ಪಿದೆ ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಅದು ತನ್ನ ಮಾಲೀಕನನ್ನು ಸಾವಿನಲ್ಲು ಹಿಂಬಾಲಿಸಿದೆ. ಎಂದಿದ್ದಾರೆ. ಆದರೆ ಇಷ್ಟಕ್ಕೂ ಸಂಭವ್ ನೇಣು ಹಾಕಿಕೊಂಡಿದ್ದು ಯಾಕೆ ಎಂಬುದು ತಿಳಿದುಬಂದಿಲ್ಲ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:28 pm, Tue, 9 May 23