ಫೋನ್​ನಲ್ಲಿ ಮಾತನಾಡುತ್ತಾ ಕಾರು ಚಾಲನೆ: ದಂಡ ಕಟ್ಟು ಅಂದ್ರೆ, ಪೊಲೀಸರನ್ನೇ ಕಾರಿನ ಬಾನೆಟ್​ ಮೇಲೆ ಎಳೆದೊಯ್ದ ವಿದ್ಯಾರ್ಥಿ

ಮೊಬೈಲ್​ನಲ್ಲಿ ಮಾತನಾಡುತ್ತಾ ಕಾರು ಚಲಾಯಿಸುತ್ತಿದ್ದ ವ್ಯಕ್ತಿಗೆ ಕಾರು ನಿಲ್ಲಿಸಿ ದಂಡ ಕಟ್ಟುವಂತೆ ಹೇಳಿದ್ದಕ್ಕೆ ಪೊಲೀಸ್​ರನ್ನೇ ಕಾರಿನ ಬಾನೆಟ್​ ಮೇಲೆ ಎಳೆದೊಯ್ದ ಘಟನೆ ರಾಜಸ್ಥಾನದ ಜೋಧ್​ಪುರದಲ್ಲಿ ನಡೆದಿದೆ.

ಫೋನ್​ನಲ್ಲಿ ಮಾತನಾಡುತ್ತಾ ಕಾರು ಚಾಲನೆ: ದಂಡ ಕಟ್ಟು ಅಂದ್ರೆ, ಪೊಲೀಸರನ್ನೇ ಕಾರಿನ ಬಾನೆಟ್​ ಮೇಲೆ ಎಳೆದೊಯ್ದ ವಿದ್ಯಾರ್ಥಿ
ಕಾರುImage Credit source: India Today
Follow us
ನಯನಾ ರಾಜೀವ್
|

Updated on: May 09, 2023 | 11:38 AM

ಮೊಬೈಲ್​ನಲ್ಲಿ ಮಾತನಾಡುತ್ತಾ ಕಾರು ಚಲಾಯಿಸುತ್ತಿದ್ದ ವಿದ್ಯಾರ್ಥಿಯೊಬ್ಬ ಕಾರು ನಿಲ್ಲಿಸಿ ದಂಡ ಕಟ್ಟುವಂತೆ ಹೇಳಿದ್ದಕ್ಕೆ ಪೊಲೀಸ್​ರನ್ನೇ ಕಾರಿನ ಬಾನೆಟ್​ ಮೇಲೆ ಎಳೆದೊಯ್ದ ಘಟನೆ ರಾಜಸ್ಥಾನದ ಜೋಧ್​ಪುರದಲ್ಲಿ ನಡೆದಿದೆ. ಪೊಲೀಸರನ್ನು ಕಾರಿನ ಬಾನೆಟ್​ ಮೇಲೆ ಸುಮಾರು 500 ಮೀಟರ್​ ಎಳೆದೊಯ್ದಿದ್ದಾರೆ, ಮೊಬೈಲ್​ನಲ್ಲಿ ಮಾತನಾಡುತ್ತಾ ಕಾರು ಚಲಾಯಿಸುತ್ತಿರುವಾಗ ಪೊಲೀಸರು ಕಾರನ್ನು ಅಡ್ಡಗಟ್ಟಿದ್ದರು, ಆಗ ಪೊಲೀಸರನ್ನೇ ಕಾರಿನ ಬಾನೆಟ್​ ಮೇಲೆ ಎಳೆದೊಯ್ದಿದ್ದು, ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಆರೋಪಿ ಚಾಲಕ, ಓಮರಾಮ್ ದೇವಸಿಯನ್ನು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಬಂಧಿಸಲಾಗಿದೆ, ಆ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಕೃತ್ಯ ಸೆರೆಯಾಗಿದೆ. ಜೋಧ್‌ಪುರದ ಮೆಡಿಕಲ್ ಇಂಟರ್‌ಸೆಕ್ಷನ್‌ನಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ಠಾಣಾಧಿಕಾರಿಯೊಬ್ಬರು ಕಾರ್ ಡ್ರೈವರ್‌ಗೆ ನಿಲ್ಲಿಸಲು ಸೂಚಿಸಿದ್ದರು, ಆದರೆ ದಂಡ ಕಟ್ಟುವುದರಿಂದ ತಪ್ಪಿಸಿಕೊಳ್ಳಲು ಹೋಗಿ ಪೊಲೀಸರಿಗೆ ಡಿಕ್ಕಿ ಹೊಡೆದಿದ್ದ..

ಮತ್ತಷ್ಟು ಓದಿ: ದೆಹಲಿ: ವ್ಯಕ್ತಿಯನ್ನು 3 ಕಿ.ಮೀ ಬಾನೆಟ್​ ಮೇಲೆ ಎಳೆದೊಯ್ದ ಸಂಸದರ ಕಾರು

ನಂತರ ಸ್ಥಳಕ್ಕಾಗಮಿಸಿದ ಶಾಸ್ತ್ರಿನಗರ ಠಾಣೆಯ ಪೊಲೀಸ್ ಅಧಿಕಾರಿಗಳು ಕಾರು ಚಾಲಕ ಓಮರಾಮ್ ದೇವಸಿಯನ್ನು ವಶಕ್ಕೆ ಪಡೆದು ಆತನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ.

ಈ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸ್ ಗೋವಿಂದ್ ವ್ಯಾಸ್ ಅವರ ಕೈಗಳಿಗೆ ಗಾಯಗಳಾಗಿದ್ದು, ಅವರ ಮೊಬೈಲ್ ಫೋನ್‌ಗೆ ಹಾನಿಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ