ನಮ್ಮ ನಿಯಮದಲ್ಲಿ ಬದಲಾವಣೆಯಿಲ್ಲ; ಬಿಜೆಪಿಗೆ ಬೆಂಬಲ ಘೋಷಿಸಿದ ವೈಎಸ್ಆರ್ ಕಾಂಗ್ರೆಸ್
"ದೇಶ ಮತ್ತು ಆಂಧ್ರಪ್ರದೇಶದ ಹಿತಾಸಕ್ತಿ ಎಲ್ಲೆಲ್ಲಿ ಒಳಗೊಂಡಿದ್ದರೂ, ನಾವು ಮೋದಿ ಸರ್ಕಾರಕ್ಕೆ ಬೆಂಬಲವನ್ನು ನೀಡುತ್ತೇವೆ" ಎಂದು ವೈಎಸ್‌ಆರ್ ಕಾಂಗ್ರೆಸ್ ತಿಳಿಸಿದೆ.
ಹೈದರಾಬಾದ್: ನರೇಂದ್ರ ಮೋದಿ ಸರ್ಕಾರದ ಮಸೂದೆಗಳು ಭಾರತ ಮತ್ತು ಆಂಧ್ರಪ್ರದೇಶದ ಹಿತಾಸಕ್ತಿಯಲ್ಲಿದ್ದರೆ ಬಿಜೆಪಿಗೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದು ವೈಎಸ್‌ಆರ್ ಕಾಂಗ್ರೆಸ್ (YSR Congress) ಘೋಷಿಸಿದೆ. “ನಮ್ಮ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ” ಎಂದು ವೈಎಸ್‌ಆರ್‌ಸಿ ಸ್ಪಷ್ಟಪಡಿಸಿದೆ. ವೈಎಸ್ಆರ್ ಕಾಂಗ್ರೆಸ್ ರಾಜ್ಯಸಭೆಯಲ್ಲಿ 11 ಸಂಸದರನ್ನು ಹೊಂದಿದೆ ಮತ್ತು ಬಿಜೆಪಿ, ಕಾಂಗ್ರೆಸ್ ಮತ್ತು ಟಿಎಂಸಿ ನಂತರ ರಾಜ್ಯಸಭೆಯಲ್ಲಿ ಇದು ನಾಲ್ಕನೇ ದೊಡ್ಡ ಪಕ್ಷವಾಗಿದೆ.
ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಅಧ್ಯಕ್ಷ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಹೈದರಾಬಾದ್‌ನಲ್ಲಿ ಇತ್ತೀಚಿನ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸೋತ ಕಾರಣಕ್ಕಾಗಿ ತಮ್ಮ ಪಕ್ಷವನ್ನು ಮರೆಯಬಾರದು ಎಂದು ಶುಕ್ರವಾರ ಹೇಳಿದ್ದಾರೆ. ನಾವು ಸಂಸತ್ತಿನಲ್ಲಿ ಇನ್ನೂ 15 ಸಂಸದರನ್ನು ಹೊಂದಿದ್ದೇವೆ ಎಂದು ಅವರು ನೆನಪಿಸಿದ್ದಾರೆ.
ಇದನ್ನೂ ಓದಿ: ಧನ್ಯವಾದ ಮೋದಿ!; ತಮ್ಮ ಗೆಲುವನ್ನು ಪ್ರಧಾನಿಗೆ ಅರ್ಪಿಸಿದ ಎನ್ಸಿಪಿ ನಾಯಕ ಶರದ್ ಪವಾರ್
ನಮ್ಮಲ್ಲಿ 11 ರಾಜ್ಯಸಭಾ ಸದಸ್ಯರು ಮತ್ತು ನಾಲ್ಕು ಲೋಕಸಭಾ ಸದಸ್ಯರಿದ್ದಾರೆ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಭಾಗವಾಗಿರುವ ತೆಲುಗು ದೇಶಂ ಪಕ್ಷ (ಟಿಡಿಪಿ) ಲೋಕಸಭೆಯಲ್ಲಿ 16 ಸದಸ್ಯರನ್ನು ಹೊಂದಿದ್ದರೂ, ನಾವು 15 ಸಂಸದರನ್ನು ಹೊಂದಿರುವ ಪ್ರಬಲ ಪಕ್ಷವಾಗಿದ್ದು, ನಾವು ಸಂಸತ್ತಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದೇವೆ ಎಂದು ಜಗನ್ ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆಯಾಗಿದ್ದರೂ ವೈಎಸ್‌ಆರ್‌ಸಿಪಿ ಬಲಿಷ್ಠವಾಗಿದ್ದು, ಯಾವ ಶಕ್ತಿಯಿಂದಲೂ ಅದನ್ನು ಬುಡಮೇಲು ಮಾಡಲು ಸಾಧ್ಯವಿಲ್ಲ ಎಂದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ