AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fratricide in Indian military: ಭಾರತೀಯ ಸೇನೆಯಲ್ಲಿ ಪರಸ್ಪರ ಹತ್ಯೆಗಳು ಮತ್ತು ಆತ್ಮಹತ್ಯೆಗಳಿಗೆ ಕಾರಣವಾಗುತ್ತಿರುವ ಒತ್ತಡ

ಇಂತಹ ಘಟನೆಗಳ ಹಿಂದಿರುವ ಪ್ರಮುಖ ಕಾರಣಗಳೆಂದರೆ ಆಂತರಿಕ ಹತಾಶೆ, ದ್ವೇಷ, ಹಾಗೂ ತಪ್ಪು ಮಾಡುವಾಗ ಸಿಕ್ಕಿಬೀಳುವ ಒಂದು ಭಯ ಹಾಗೂ ಇತರ ಯೋಧರೊಡನೆ ಹದಗೆಟ್ಟಿರುವ ಸಂಬಂಧ ಎನ್ನುತ್ತಾರೆ ಮೇಜರ್‌ ಜನರಲ್ (ನಿವೃತ್ತ) ಎಪಿ ಸಿಂಗ್

Fratricide in Indian military: ಭಾರತೀಯ ಸೇನೆಯಲ್ಲಿ ಪರಸ್ಪರ ಹತ್ಯೆಗಳು ಮತ್ತು ಆತ್ಮಹತ್ಯೆಗಳಿಗೆ ಕಾರಣವಾಗುತ್ತಿರುವ ಒತ್ತಡ
ಸೇನೆಯಲ್ಲಿ ಪರಸ್ಪರ ಹತ್ಯೆಗಳು ಮತ್ತು ಆತ್ಮಹತ್ಯೆಗಳಿಗೆ ಕಾರಣವೇನು?
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Apr 19, 2023 | 2:53 PM

Share

ಭಾರತೀಯ ಸೇನಾ ನೆಲೆಯೊಂದರಲ್ಲಿ (Indian military) ನಾಲ್ವರು ಯೋಧರ ಹತ್ಯೆಗೆ ಸಂಬಂಧಿಸಿದಂತೆ ಓರ್ವ ಯೋಧನನ್ನು ಬಂಧಿಸಲಾಗಿದೆ. ಈ ಘಟನೆ ಭಾರತೀಯ ಸೇನೆ ಮತ್ತು ಅರೆಸೇನಾಪಡೆಗಳಲ್ಲಿರುವ ಹತ್ಯೆಯ (ಫ್ರಾಟ್ರಿಸೈಡ್ –Fratricide) ಸಮಸ್ಯೆಗಳೆಡೆಗೆ ಮತ್ತೆ ಜನರ ಗಮನ ಸೆಳೆದಿದೆ. ಮಿಲಿಟರಿ ಪರಿಭಾಷೆಯಲ್ಲಿ, ಫ್ರಾಟ್ರಿಸೈಡ್ ಎಂದರೆ ಓರ್ವ ಯೋಧ ಅಥವಾ ಭದ್ರತಾ ವ್ಯಕ್ತಿಗಳು ಅವರದೇ ತಂಡದವರನ್ನು ಹತ್ಯೆ ಮಾಡುವುದು. ಕಳೆದ ಎರಡು ದಶಕಗಳಿಂದ ಭಾರತೀಯ ಸೇನಾಪಡೆಗಳಲ್ಲಿ ಒತ್ತಡ (Pressure) ಮತ್ತು ಖಿನ್ನತೆಗಳ (Stress) ಕಾರಣದಿಂದ ನಡೆಯುವ ಹತ್ಯೆಗಳು ಮತ್ತು ಆತ್ಮಹತ್ಯೆಗಳ (Suicide) ಕುರಿತು ವ್ಯಾಪಕ ಅಧ್ಯಯನ ನಡೆಸಲಾಗಿದೆ.

ಸೋಮವಾರದಂದು ಪಂಜಾಬ್ ರಾಜ್ಯದ ಉತ್ತರದ ಗಡಿ ಪ್ರದೇಶದಲ್ಲಿ ಅಧಿಕಾರಿಗಳು ಭಟಿಂಡಾ ಸೇನಾ ನೆಲೆಯಲ್ಲಿ ಓರ್ವ ಸೈನಿಕನ ಬಂಧನವನ್ನು ಖಚಿತಪಡಿಸಿದರು. ಈ ಸೇನಾ ನೆಲೆಯಲ್ಲಿ ಆತನ ನಾಲ್ವರು ಸಹೋದ್ಯೋಗಿಗಳು ಹತ್ಯೆಗೀಡಾಗಿದ್ದರು. ಬಂಧನಕ್ಕೊಳಗಾದ ಯೋಧ ಅಸಾಲ್ಟ್ ರೈಫಲ್ ಒಂದನ್ನು ಕಸಿದುಕೊಂಡು, ನಾಲ್ವರು ಯೋಧರನ್ನು ಕೊಲೆಗೈಯುವುದರಲ್ಲಿನ ಪಾತ್ರವನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ ಎಂದು ಸೇನೆ ಹೇಳಿಕೆ ನೀಡಿದೆ. ಆರಂಭಿಕ ವಿಚಾರಣೆಗಳ ಪ್ರಕಾರ, ಈ ಕೊಲೆಗಳು ವೈಯಕ್ತಿಕ ಕಾರಣಗಳು ಮತ್ತು ದ್ವೇಷದಿಂದ ನಡೆದಿದೆ ಎನ್ನಲಾಗಿದೆ. ಆದರೆ ಈ ರೀತಿಯ ಫ್ರಾಟಿಸೈಡ್‌ಗಳ ಕುರಿತು ಭಾರತೀಯ ಸೇನೆ ಯಾವುದೇ ವಿಚಾರಣೆ ಕೈಗೆತ್ತಿಕೊಂಡಿರಲಿಲ್ಲ.

ಭಾರತೀಯ ಸೇನೆ, ನೌಕಾಪಡೆ, ಹಾಗೂ ವಾಯುಪಡೆಗಳ 2017ರ ಬಳಿಕ 800ಕ್ಕೂ ಹೆಚ್ಚು ಯೋಧರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಜುಲೈ 2022ರಲ್ಲಿ ರಕ್ಷಣಾ ಸಚಿವಾಲಯ ಹೇಳಿದೆ. ಭಾರತೀಯ ಮಿಲಿಟರಿಯಲ್ಲಿ 1.4 ಮಿಲಿಯನ್ ಸಕ್ರಿಯ ಯೋಧರಿದ್ದಾರೆ.

ಫೆಬ್ರವರಿ 2020ರಲ್ಲಿ ಸಾರ್ವಜನಿಕಗೊಳಿಸಿದ ಅಧಿಕೃತ ಮಾಹಿತಿಗಳ ಪ್ರಕಾರ, ರಕ್ಷಣಾ ರಾಜ್ಯ ಸಚಿವರು 2016 ಮತ್ತು 2020ರ ನಡುವೆ ಭೂಸೇನೆಯ ಏಳು ಯೋಧರು, ವಾಯುಪಡೆಯ ಇಬ್ಬರು, ಹತ್ಯೆಗೀಡಾಗಿದ್ದು, ನೌಕಾಪಡೆಯಲ್ಲಿ ಇಂತಹ ಘಟನೆ ನಡೆದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಇಂತಹ ಪ್ರಕರಣಗಳು ನಡೆಯದಂತೆ ತಡೆಯಲು, ರಕ್ಷಣಾ ಸಚಿವಾಲಯ 2009ರಲ್ಲಿ ಮಾನಸಿಕ ಆರೋಗ್ಯ ಕಾರ್ಯಕ್ರಮವೊಂದನ್ನು ಜಾರಿಗೆ ತಂದಿತು. ಇದು ಒತ್ತಡ ನಿರ್ವಹಣೆಗೆ ಹೆಚ್ಚಿನ ಪ್ರಾಧಾನ್ಯ ನೀಡುತ್ತಿದ್ದು, ಅತಿಹೆಚ್ಚು ಒತ್ತಡದಲ್ಲಿರುವ ಯೋಧರನ್ನು ಗುರುತಿಸಿ, ಅವರೊಡನೆ ಸಮಾಲೋಚನೆ ನಡೆಸಲಾಗುತ್ತದೆ.

ಮೇಜರ್‌ ಜನರಲ್ (ನಿವೃತ್ತ) ಎಪಿ ಸಿಂಗ್ ಅವರ ಪ್ರಕಾರ, ಭಟಿಂಡಾ ಘಟನೆ ಒಂದು ಆಕಸ್ಮಿಕ ನರಹತ್ಯೆ ಆಗಿರಲಿಲ್ಲ.

“ಇಂತಹ ಘಟನೆಗಳ ಹಿಂದಿರುವ ಪ್ರಮುಖ ಕಾರಣಗಳೆಂದರೆ ಆಂತರಿಕ ಹತಾಶೆ, ದ್ವೇಷ, ಹಾಗೂ ತಪ್ಪು ಮಾಡುವಾಗ ಸಿಕ್ಕಿಬೀಳುವ ಒಂದು ಭಯ ಹಾಗೂ ಇತರ ಯೋಧರೊಡನೆ ಹದಗೆಟ್ಟಿರುವ ಸಂಬಂಧ” ಎನ್ನುತ್ತಾರೆ ಎಪಿ ಸಿಂಗ್.

2020ರಲ್ಲಿ ಓರ್ವ ಸೇನಾಧಿಕಾರಿ ನಡೆಸಿದ ಅಧ್ಯಯನವನ್ನು ಯುನೈಟೆಡ್ ಸರ್ವಿಸ್ ಇನ್ಸ್ಟಿಟ್ಯೂಷನ್ ಆಫ್ ಇಂಡಿಯಾ ಪ್ರಕಟಿಸಿದ್ದು, ಕಾರ್ಯಾಚರಣಾ ಮತ್ತು ಇತರ ಒತ್ತಡಗಳು ಸೈನಿಕರಿಗೆ ಅಪಾರ ಪ್ರಮಾಣದ ಒತ್ತಡ ಸೃಷ್ಟಿಸುತ್ತವೆ ಎಂದು ಅದು ಸ್ಪಷ್ಟಪಡಿಸುತ್ತದೆ.

ಪ್ರಸ್ತುತ ಸಂದರ್ಭದಲ್ಲಿ, ಭಾರತೀಯ ಸೇನಾಪಡೆಗಳ ಅರ್ಧಕ್ಕೂ ಹೆಚ್ಚು ಯೋಧರು ಒತ್ತಡದಲ್ಲಿರುವಂತೆ ಕಂಡುಬರುತ್ತಾರೆ ಎನ್ನಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಬಂಡಾಯ ಶಮನ ಕಾರ್ಯಾಚರಣೆ ಮತ್ತು ಉಗ್ರ ನಿಗ್ರಹ ಚಟುವಟಿಕೆಗಳು ಸೈನಿಕರಿಗೆ ಅತಿಹೆಚ್ಚು ಒತ್ತಡ ಸೃಷ್ಟಿಸುತ್ತವೆ ಎನ್ನಲಾಗಿದೆ.

girish linganna

ಲೇಖನ- ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್