ಈ ಮನೆಯಲ್ಲೇ ಬೆಳೆದು ನಿಂತಿದೆ 7 ಅಡಿ ಹುತ್ತ; ನಾಗಪಂಚಮಿಯಂದು ಹರಿದು ಬರುತ್ತೇ ಜನಸಾಗರ

|

Updated on: Aug 09, 2024 | 6:08 PM

ಸಾಮಾನ್ಯವಾಗಿ ಹುತ್ತಗಳು ಹೊಲ-ಗದ್ದೆ, ಕಾಡಲ್ಲಿ ಹುಟ್ಟುವುದು ನೀವೆಲ್ಲ ಗಮನಿಸಿರಬಹುದು. ಆದರೆ, ಬೀದರ್​ನಲ್ಲೊಂದು ಅಚ್ಚರಿ ಸೃಷ್ಟಿಯಾಗಿದ್ದು, ಹಾವಿನ ಹುತ್ತ ಮನೆಯಲ್ಲಿ ಬೆಳೆಯುತ್ತಿದೆ. ಸುಮಾರು ಐದು ದಶಕದಿಂದ ಹುತ್ತ ಮನೆಯಲ್ಲಿ ಬೆಳೆಯುತ್ತಿದ್ದು, ಅನೇಕ ಫವಾಡಗಳನ್ನ ಸೃಷ್ಠಿಸುತ್ತಿದೆ. ಈ ಹಿನ್ನಲೆ ನಾಗ ಭಕ್ತರ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ.

1 / 8
ಐದು ದಶಕದಿಂದ ಮನೆಯಲ್ಲಿಯೇ ಬೆಳೆಯುತ್ತಿರುವ ಹುತ್ತಕ್ಕೆ ಇಲ್ಲಿ ನಿತ್ಯವೂ ಪೂಜೆ, ಪುನಸ್ಕಾರಗಳು ನಡೆಯುತ್ತಿವೆ. ಒಂದು ಅಡಿಯಿಂದ ಆರಂಭವಾದ ಹುತ್ತವೂ 50 ವರ್ಷಗಳಲ್ಲಿ 7 ಅಡಿಗೂ ಎತ್ತರ ಬೆಳೆದಿದೆ. ಅರಣ್ಯ ಜಮೀನುಗಳಲ್ಲಿ ಹುತ್ತ ಬೆಳೆಯುವುದು ಸಾಮಾನ್ಯ. ಆದರೆ, ಬೀದರ್ ನಗರದ ಹೃದಯ ಭಾಗದಲ್ಲಿರುವ ಸಾವಿ ನಗರ ಬಡಾವಣೆಯ ಬಸವರಾಜ್ ಶೀಲವಂತ್ ಹಾಗೂ ಶೋಭಾ ಶಿಲವಂತ ಅವರ ಮನೆಯಲ್ಲಿ ಹುತ್ತ ಬೆಳೇದಿದ್ದು ಜನತೆ ಭಕ್ತಿ ಭಾವದಿಂದ ನಾಗೇಶ್ವರ ದೇವರಿಗೆ ವಿಶೇಷ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ.

2 / 8
ಬಸವರಾಜ್ ಅವರ ತಾಯಿ ಆರಂಭದಲ್ಲಿ ಹುತ್ತಕ್ಕೆ ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದರು. ಅವರ ತರುವಾಯ ಬಸವರಾಜ್ ಹಾಗೂ ಅವರ ಪತ್ನಿ ಶೋಭಾ ಅವರು ನಾಗೇಶ್ವರ ದೇವರ ಹುತ್ತಕ್ಕೆ ನಿತ್ಯವೂ ಪೂಜೆ ಮಾಡುತ್ತಿದ್ದಾರೆ. ಪ್ರತಿ ವರ್ಷ ನಾಗರ ಪಂಚಮಿಗೆ ಮೂರು ದಿನ ಇರುವಾಗಲೇ ಇಲ್ಲಿ ಹಾವು ಕಾಣಿಸುವುದು ವಾಡಿಕೆ.

3 / 8
ಅಂತೆಯೇ ಈ ಭಾರಿಯೂ 19 ರಂದು ಮನೆಯಲ್ಲಿ ಹಾವು ಕಾಣಿಸಿದ್ದು, ಇದನ್ನ ಬಡಾವಣೆಯು ಜನರು ನೋಡಿದ್ದಾರೆ. ನಿತ್ಯವೂ ಕೂಡ ಇಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಲೇ ಇವೆ. ವಿಶೇಷವಾಗಿ ನಾಗರ ಪಂಚಮಿಯಂದು ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತದೆಂದು ಪೂಜಾರಿ ಹೇಳುತ್ತಿದ್ದಾರೆ.

4 / 8
ಇನ್ನು ಮನೆಯಲ್ಲಿರುವ ಈ ಹುತ್ತದಿಂದ ವಾರಕ್ಕೆ ಎರಡು ಬಾರಿ ಹುತ್ತದೊಳಗಿನ ನಾಗರಾಜ ಕಾಣಿಸಿಕೊಳ್ಳುತ್ತಿದ್ದು, ಮನೆಯವರಿಗೂ ಈ ನಾಗಪ್ಪ ಏನೂ ಮಾಡಿಲ್ಲ. ಮನೆಯವರಿಗಲ್ಲದೆ ಗ್ರಾಮಸ್ಥರಿಗೂ ನಾಗಪ್ಪ ಕಾಣಿಸಿಕೊಳ್ಳುತ್ತಾನೆ. ಗ್ರಾಮಸ್ಥರು ಸಹ ಇಲ್ಲಿಗೆ ಬಂದು ಹಾವಿಗೆ ಹಾಲೆರೆದು ಪೂಜೆ ಮಾಡುತ್ತಾರೆ. ಅವರ ಇಷ್ಟಾರ್ಥ ಕೂಡ ನೇರವೇರಿದೆ.

5 / 8
ಇನ್ನು ನಾಗರ ಪಂಚಮಿಯ ದಿನದಂದೂ ಮಹಿಳೆಯರು, ಮಕ್ಕಳು, ವಯೋವೃದ್ಧರು ಈ ಮನೆಯತ್ತ ಹೆಜ್ಜೆ ಹಾಕುತ್ತಾರೆ. ಜಿಲ್ಲೆಯ ವಿವಿಧ ಕಡೆಗಳಿಂದ ಜನಸಾಗರವೇ ಇಲ್ಲಿಗೆ ಹರಿದು ಬರುತ್ತದೆ. ಹೆಮ್ಮರವಾಗಿ ಬೆಳೆದು ನಿಂತಿರುವ ಹುತ್ತಕ್ಕೆ ನಾಗರ ಪಂಚಮಿಯಂದು ವಿಶೆಷವಾಗಿ ಪೂಜೆ ಸಲ್ಲಿಸಲಾಗುತ್ತದೆ. ಇಲ್ಲಿನ ಸುತ್ತಮುತ್ತಲಿನ ಬಡವಣೆಯ ಮಹಿಳೆಯರು ಇಲ್ಲಿಗೆ ಬಂದು ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥಗಳನ್ನ ನೇರವೇರಿಸುವಂತೆ ಬೇಡಿಕೊಳ್ಳುತ್ತಾರೆ.

6 / 8
ಅಷ್ಟೇ ಅಲ್ಲದ ಪ್ರತಿ ಶುಕ್ರವಾರದಂದು ಇಲ್ಲಿಗೆ ಬಂದು ಜನರು ಪೂಜೆ ಸಲ್ಲಿಸಿ ನಾಗ ದೇವನಿಗೆ ತಮ್ಮ ಇಷ್ಟಾರ್ಥಗಳನ್ನ ಪೂರೈಸುವಂತೆ ಬೇಡಿಕೊಳ್ಳುತ್ತಾರೆ. ಅದೇಷ್ಟೋ ಜನರಿಗೆ ಹುತ್ತದಲ್ಲಿದ್ದ ನಾಗಪ್ಪ ಪ್ರತ್ಯಕ್ಷವಾಗಿದ್ದಾನೆಂದು ಇಲ್ಲಿನ ಮಹಿಳೆಯರು ಹೇಳುತ್ತಾರೆ. ಎಲ್ಲರೂ ನಾಗರಪಂಚಮಿಯಂದು ನಾಗಪ್ಪನಿಗೆ ಹಾಲೆರದರೆ, ಇಲ್ಲಿ ಮಾತ್ರ ನಾಗರ ಹುತ್ತಕ್ಕೆ ನಿತ್ಯ ನಾರಿಯರು ಪೂಜೆ ಸಲ್ಲಿಸಿ ಭಕ್ತಿ ಮೆರೆಯುತ್ತಾರೆ.

7 / 8
ಪ್ರತಿ ವರ್ಷ ಇಲ್ಲಿಗೆ ಬಂದು ನಾವು ನಾಗಪ್ಪನಿಗೆ ಹಾಲೆರೆದು ಭಕ್ತಿಯಿಂದ ಪೂಜೆ ಮಾಡುತ್ತೇವೆ. ಇದರಿಂದ ನಮಗೆ ಒಳ್ಳೆಯದಾಗಿದ್ದು, ಹೀಗಾಗಿ ನಾವು ಇಲ್ಲಿಗೆ ಪ್ರತಿವರ್ಷ ಬರುತ್ತೆವೆಂದು ಇಲ್ಲಿಗೆ ಬಂದ ಮಹಿಳೆಯರು ಹೇಳುತ್ತಾರೆ. ಈ ಹಿಂದೆ ಈ ಹುತ್ತವಿರುವ ಜಾಗದಲ್ಲಿ ಶೇಡ್​ನ ಮನೆಯಿತ್ತು. ಈಗ ಒಬ್ಬರು ಭಕ್ತರು ಈ ಹುತ್ತಕ್ಕೆ ಕಟ್ಟಡವನ್ನ ಕಟ್ಟಿಕೊಟ್ಟಿದ್ದಾರೆ.

8 / 8
ಒಟ್ಟಾರೆ ಬೀದರ್ ಜಿಲ್ಲೆಯಲ್ಲಿ ನಾಗರ ಪಂಚಮಿ ಹಬ್ಬವನ್ನ ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಹುತ್ತಕ್ಕೆ ಹಾಲೆರೆದು ನಾಗದೇವನಿಗೆ ಪೂಜೆ ಸಲ್ಲಿಸಿದರು. ಶೀಲವಂತರ ಮನೆಯಲ್ಲಿರುವ ಹುತ್ತಕ್ಕೆ ಹಾಲೆರೆಯಲು ಜನಸಾಗರವೇ ಹರಿದು ಬರುತ್ತಿರುವುದು ವಿಶೇಷವಾಗಿತ್ತು.

Published On - 6:08 pm, Fri, 9 August 24