Updated on: Aug 09, 2024 | 4:44 PM
ಒಂದಿಲ್ಲೊಂದು ರೀತಿಯಲ್ಲಿ ಜನಪರ ಕಾರ್ಯದ ಮೂಲಕ ಗುಣಮಟ್ಟದ ಸೇವೆ ನೀಡುತ್ತಿರುವ ಹುಬ್ಬಳ್ಳಿಯ ವಿಮಾನ ನಿಲ್ದಾಣ ಈಗ ಸಾಕಷ್ಟು ಸುದ್ಧಿಯಲ್ಲಿದೆ. ಈಗ ಮತ್ತೊಂದು ಮಾನವೀಯ ಕಾರ್ಯಕ್ಕೆ ಸಹಭಾಗಿತ್ವ ನೀಡಿರುವ ಹುಬ್ಬಳ್ಳಿಯ ವಿಮಾನ ನಿಲ್ದಾಣ ಜನಮನ್ನಣೆ ಪಡೆದಿದೆ.
ಇಷ್ಟು ದಿನ ಪ್ರಯಾಣಿಕರನ್ನು ಮಾತ್ರವೇ ಹುಬ್ಬಳ್ಳಿಯಿಂದ ವಿವಿಧ ಭಾಗಗಳಿಗೆ ವಿಮಾನದ ಮೂಲಕ ಪ್ರಯಾಣಿಸುತ್ತಿದ್ದರು. ಆದರೆ, ಈಗ ಜೀವ ಉಳಿಸುವ ಶ್ವಾಸಕೋಶಗಳು, ಮಾನವನ ಅಂಗಾಂಗಗಳನ್ನು ಕೂಡ ಹುಬ್ಬಳ್ಳಿಯಿಂದ ಚೆನ್ನೈಗೆ ಕಳಿಸುವ ಮೂಲಕ ಮಹತ್ವದ ಕಾರ್ಯ ಮಾಡಿದೆ.
ಹೌದು, ಇಂತಹ ಮಾನವೀಯ ಕೆಲಸಗಳಿಂದ ಹುಬ್ಬಳ್ಳಿ ವಿಮಾನ ನಿಲ್ದಾಣ ಜನಪ್ರಿಯತೆಗೆ ಹೆಸರುವಾಸಿಯಾಗಿದ್ದು, ವೈದ್ಯಕೀಯ ವಿಮಾನ VT-TIS ಜೀವ ಉಳಿಸುವ ಶ್ವಾಸಕೋಶಗಳನ್ನು ಹೊತ್ತು ಹುಬ್ಬಳ್ಳಿಯಿಂದ ಚೆನ್ನೈಗೆ ಹಾರಿತು.
ಇಂತಹದೊಂದು ಗಮನಾರ್ಹ ಪ್ರಯಾಣವು ಭರವಸೆ, ಸ್ಥಿತಿಸ್ಥಾಪಕತ್ವ ಮತ್ತು ಸಾಮೂಹಿಕ ಪ್ರಯತ್ನಗಳ ಶಕ್ತಿಯನ್ನು ಸಂಕೇತಿಸುತ್ತದೆ.
ಇನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದ ಸಮರ್ಪಿತ ತಂಡವು ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಸಕಾಲಿಕ ಸಮನ್ವಯ ಮತ್ತು ಸುಗಮ ಸಾರಿಗೆಯನ್ನು ಖಚಿತಪಡಿಸಿದ್ದು, ನಿರ್ಣಾಯಕ ಆರೋಗ್ಯ ಕಾರ್ಯಾಚರಣೆಗಳನ್ನು ಬೆಂಬಲಿಸುವ ಬದ್ಧತೆಯನ್ನು ಈ ಮೂಲಕ ತೋರಿಸಿಕೊಟ್ಟಿದೆ.
ಅಂಗಾಂಗ ಕಸಿಯಲ್ಲಿ ಪ್ರತಿ ಸೆಕೆಂಡ್ ಎಣಿಕೆಯಾಗುತ್ತದೆ ಮತ್ತು ಜೀವಗಳನ್ನು ಉಳಿಸುವಲ್ಲಿ ಪಾತ್ರವನ್ನು ವಹಿಸುವಲ್ಲಿ ಮಹತ್ವದ ಪಾತ್ರ ಹುಬ್ಬಳ್ಳಿ ನಿಲ್ದಾಣ ವಹಿಸಿರುವುದು ವಿಶೇಷವಾಗಿದೆ.