ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಕನ್ನಡಿಗರು ಹಾಗೂ ಇತರ ಗಣ್ಯರು: ಚಿತ್ರಗಳಲ್ಲಿ ನೋಡಿ

Updated on: Sep 22, 2026 | 6:58 PM

ಇಂದು (ಸೆಪ್ಟೆಂಬರ್ 22) ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಗುಜರಾತ್​​ನ ಏಕತಾ ನಗರದಲ್ಲಿ ನಡೆಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು, ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕನ್ನಡದ ಹಿರಿಯ ನಟ ಅನಂತ್ ನಾಗ್ ಸೇರಿದಂತೆ ಹಲವು ಗಣ್ಯರು ಈ ಸಮಾರಂಭದಲ್ಲಿ ಭಾಗಿಯಾಗಿ ಪ್ರಶಸ್ತಿಗಳನ್ನು ಸ್ವೀಕಾರ ಮಾಡಿದರು. 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪಡೆದ ಕೆಲ ಗಣ್ಯರ ಚಿತ್ರಗಳು ಇಲ್ಲಿವೆ...

1 / 8
Anant Nag Award

Anant Nag Award

2 / 8

ಅತ್ಯುತ್ತಮ ಕನ್ನಡ ಸಿನಿಮಾ ಆಗಿ ‘ಮಿಥ್ಯ’ ಸಿನಿಮಾಕ್ಕಾಗಿ ಬಂದ ಪ್ರಶಸ್ತಿಯನ್ನು ಸಿನಿಮಾದ ನಿರ್ದೇಶಕ ಸುಮಂತ್ ಭಟ್ ಪಡೆದುಕೊಂಡರು. ರಕ್ಷಿತ್ ಶೆಟ್ಟಿ ನಿರ್ಮಿಸಿದ ಸಿನಿಮಾ ಇದಾಗಿದೆ.

3 / 8

ಸಿನಿಮಾ ಕುರಿತ ಅತ್ಯುತ್ತಮ ಪುಸ್ಕತ ವಿಭಾಗದಲ್ಲಿ ಕನ್ನಡ ಪುಸ್ತಕ ‘ನಾನಿರುವುದೇ ನಿಮಗಾಗಿ, ನಾಡಿರುವುದು ನಮಗಾಗಿ’ ಪುಸ್ತಕಕ್ಕೆ ಬಂದ ಪ್ರಶಸ್ತಿಯನ್ನು ಲೇಖಕ ಪ್ರದೀಪ್ ಕೆಂಚನೂರು ಪಡೆದುಕೊಂಡರು.

4 / 8

ಕನ್ನಡದ ಸಿನಿಮಾ ‘ಮಿಥ್ಯಂ’ನ ಅತ್ಯುತ್ತಮ ನಟನೆಗೆ ಅತ್ಯುತ್ತಮ ಬಾಲನಟ ಪ್ರಶಸ್ತಿಯನ್ನು ಅತೀಶ್ ಎಸ್ ಶೆಟ್ಟಿ ಸ್ವೀಕರಿಸಿದರು. ಅದೇ ಸಿನಿಮಾದ ನಟನೆಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ರೂಪಾಶ್ರೀ ವಾರ್ಕಡಿ ಪಡೆದುಕೊಂಡರು.

5 / 8

ಮಲಯಾಳಂ ಸ್ಟಾರ್ ನಟ ಮಮ್ಮುಟಿ ಅವರಿಗೆ ‘ಬ್ರಮಯುಗಂ’ ಸಿನಿಮಾದ ಅತ್ಯದ್ಭುತ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಯ್ತು. ಹಾಗೆಯೇ ನಟ ಕಾರ್ತಿಕ್ ಆರ್ಯನ್​​ಗೆ ‘ಚಂದು ಚಾಂಪಿಯನ್’ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಯ್ತು.

6 / 8

ತಮಿಳು ನಟ ಧನುಶ್ ಅವರಿಗೆ ‘ಕ್ಯಾಪ್ಟನ್ ಮಿಲ್ಲರ್’ ಮತ್ತು ಅವರದ್ದೇ ನಿರ್ದೇಶನದ ‘ರಾಯನ್’ ಸಿನಿಮಾಕ್ಕಾಗಿ ಎರಡು ರಾಷ್ಟ್ರೀಯ ಪ್ರಶಸ್ತಿಗಳು ಲಭ್ಯವಾದವು.

7 / 8

ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾದ ಅತ್ಯುತ್ತಮ ಚಿತ್ರಕತೆಗೆ ಸುಕುಮಾರ ಅವರಿಗೆ ಅತ್ಯುತ್ತಮ ಚಿತ್ರಕತೆ ಪ್ರಶಸ್ತಿ ದೊರಕಿದ್ದು, ಸುಕುಮಾರ್ ಅವರು ಪ್ರಶಸ್ತಿ ಸ್ವೀಕಾರ ಮಾಡಿದರು.

8 / 8

‘ಆರ್ಟಿಕಲ್ 370’ ಸಿನಿಮಾದ ಅತ್ಯುತ್ತಮ ನಟನೆಗೆ ಯಾಮಿ ಗೌತಮ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಯ್ತು. ಅದೇ ಸಿನಿಮಾಕ್ಕಾಗಿ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಅವರ ಪತಿ ಆದಿತ್ಯ ಧರ್ ಸ್ವೀಕರಿಸಿದರು.

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us