Winter Health Tips: ಈ ಚಳಿಗಾಲದಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಕೆಳಗಿನ ಐದು ಆಹಾರ ಕ್ರಮವನ್ನು ರೂಢಿಸಿಕೊಳ್ಳಿ
ಚಳಿಗಾಲ ಬಂತೆಂದರೆ ಸಾಕು, ಶೀತ, ಜ್ವರಗಳಂತಹ ಕಾಯಿಲೆಗಳು ಜೊತೆಗೆ ಬಂದು ಬಿಡುತ್ತವೆ. ಆದ್ದರಿಂದ ಆರೋಗ್ಯಕರ, ಸಮತೋಲಿತ ಆಹಾರವನ್ನು ರೂಢಿಸಿಕೊಳ್ಳುವುದು ಅಗತ್ಯವಾಗಿದೆ.
Updated on:Nov 04, 2022 | 12:43 PM

ಈ ಚಳಿಗಾಲದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಆರೋಗ್ಯಕರ, ಸಮತೋಲಿತ ಆಹಾರವು ಅತ್ಯಗತ್ಯ. ಆದ್ದರಿಂದ ಈ ಕೆಳಗಿನ ಪದಾರ್ಥಗಳನ್ನು ದಿನ ನಿತ್ಯದ ಆಹಾರ ಕ್ರಮದಲ್ಲಿ ರೂಢಿಸಿಕೊಳ್ಳಿ. ಇದು ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಅರಿಶಿನವು ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದು, ಚಳಿಗಾಲದಲ್ಲಿ ನೋಯುತ್ತಿರುವ ಗಂಟಲು, ಕೆಮ್ಮು ಮುಂತಾದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಪ್ರತಿ ದಿನ ಬಿಸಿ ಹಾಲಿಗೆ ಒಂದು ಚಿಟಿಕೆ ಅರಶಿನ ಹುಡಿಯನ್ನು ಬೆರೆಸಿ ಕುಡಿಯಿರಿ.

ತುಳಸಿ ಎಲೆಯಲ್ಲಿ ಅಪಾರ ಔಷಧಿಯ ಅಂಶಗಳನ್ನು ಹೊಂದಿದ್ದು, ಪ್ರತಿ ದಿನ ಬೆಳಗ್ಗೆ ತುಳಸಿ ಎಲೆಯನ್ನು ಸೇವಿಸಿ. ಜೊತೆಗೆ ಚಳಿಗಾಲದಲ್ಲಿ ನೀವು ಕುಡಿಯುವ ಬಿಸಿ ನೀರಿಗೆ ಒಂದೆರಡು ತುಳಸಿ ಎಲೆಗಳನ್ನು ಹಾಕಿ.

ಬಾದಾಮಿಯಲ್ಲಿ ಮೆಗ್ನೀಸಿಯಮ್, ಪ್ರೋಟೀನ್ ಮತ್ತು ಸತು ಸೇರಿದಂತೆ ಹಲವಾರು ಖನಿಜ ಅಂಶಗಳು ಬಾದಾಮಿಗಳಲ್ಲಿ ಸೇರಿವೆ. ಜೊತೆಗೆ ವಿಟಮಿನ್ ಇ ಹೊಂದಿದೆ. ವಿಟಮಿನ್ ಇ ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾಗಳಿಂದ ಬರುವ ರೋಗಗಳಿಂದ ರಕ್ಷಿಸಲು ಸಹಾಯಮಾಡುತ್ತದೆ.

ಶುಂಠಿಯಲ್ಲಿ ಉರಿಯೂತ ನಿವಾರಕ ಅಂಶವನ್ನು ಒಳಗೊಂಡಿದ್ದು, ಅದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ನಿಮ್ಮ ದೇಹ ಸೂಕ್ಷ್ಮಜೀವಿಗಳು ಮತ್ತು ವೈರಸ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಬೆಳ್ಳುಳ್ಳಿಯಲ್ಲಿ ಪೋಷಕಾಂಶಗಳು ಹೇರಳವಾಗಿದ್ದು, ಇದು ಫೋಲೇಟ್, ಸತು, ಮತ್ತು ವಿಟಮಿನ್ ಸಿ ಮತ್ತು ಬಿ ಯನ್ನು ಒಳಗೊಂಡಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ, ಶೀತ ಮತ್ತು ಕೆಮ್ಮಿನ ಆಗಾಗ್ಗೆ ಚಳಿಗಾಲದ ಕಾಯಿಲೆಗಳ ವಿರುದ್ಧ ರಕ್ಷಣೆ ನೀಡುತ್ತದೆ.
Published On - 12:42 pm, Fri, 4 November 22




