- Kannada News Photo gallery A rare dog show was held in Davangere, domestic and foreign breeds of dogs participated in the competition, here is a glimpse of the show
ದಾವಣಗೆರೆಯಲ್ಲಿ ನಡೆಯಿತು ಅಪರೂಪದ ಡಾಗ್ ಶೋ, ದೇಶ-ವಿದೇಶ ತಳಿಯ ಶ್ವಾನಗಳು ಸ್ಫರ್ಧೆಯಲ್ಲಿ ಭಾಗಿ, ಇಲ್ಲಿದೆ ನೋಡಿ ಶೋ ಝಲಕ್
ದಾವಣಗೆರೆಯಲ್ಲಿ ಶ್ವಾನ ಪ್ರೇಮಿಗಳ ಸಂಘದಿಂದ ಇಂದು(ಫೆ.5)ಡಾಗ್ ಶೋ ಆಯೋಜಿಸಲಾಗಿದ್ದು, ದೇಶ ವಿದೇಶದ ತಳಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
Updated on: Feb 06, 2023 | 10:33 PM

ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಜನ ಸಾಗರವೇ ಸೇರಿತ್ತು. ಶ್ವಾನ ಪ್ರೇಮಿಗಳ ಸಂಘ ಈ ಶೋ ಹಾಗೂ ಸ್ಪರ್ಧೆಗಳನ್ನ ಆಯೋಜಿಸಿತ್ತು. ಎಲ್ಲಿ ನೋಡಿದರಲ್ಲಿ ತಮ್ಮ ಪ್ರೀತಿ ನಾಯಿಗಳನ್ನ ಹಿಡಿದುಕೊಂಡು ಬಾರಿ ಉತ್ಸಾಹದಿಂದಲೇ ರಾಜ್ಯದ ನಾನಾ ಭಾಗಗಳಿಂದ ಜನ ಬಂದಿದ್ದರು.

ಇಂತಹ ಅಪರೂಪ ತಳಿಯ ನಾಯಿಗಳನ್ನ ನೋಡುವುದೇ ಒಂದು ಸಂಭ್ರಮ. ಒಂದು ಪುಟ್ಟ ವಿಚಿತ್ರ ಮುಖದ ಪಗ್ ನಾಯಿಂದ ಹಿಡಿದು ರಾಜ್ಯದ ಪ್ರಸಿದ್ಧ ಬೇಟೆಗಾರಿಕೆಗೆ ಹೆಸರಾದ ಮುದೋಳ್ ನಾಯಿವರೆಗೆ 20ಕ್ಕೂ ಹೆಚ್ಚು ದೇಶಗಳ 30ಕ್ಕೂ ಹೆಚ್ಚು ವಿಭಿನ್ನ ತಳಿಯ 300 ನಾಯಿಗಳು ಇಲ್ಲಿ ಪಾಲ್ಗೊಂಡಿದ್ದವು.

ಸ್ಪರ್ಧೆಯ ಇನ್ನೊಂದು ವಿಶೇಷವೆಂದರೆ ನಾಯಿ ಕೇವಲ ನೋಡಲು ಚೆನ್ನಾಗಿದ್ದರೆ ಸಾಲದು ದೇಹದ ಸ್ಥಿತಿ. ನಡೆಯುವ ಸ್ಟೈಲ್, ನೋಡುವ ರೀತಿ ಜೊತೆಗೆ ಇದರ ಜೊತೆಗಾರ ಹಾಕುವ ಪ್ರತಿಯೊಂದು ಹೆಜ್ಜೆಯು ಸಹ ಸ್ಪರ್ಧೆಯಲ್ಲಿ ಮಹತ್ವದ ಪಾತ್ರ ವಹಿಸಿತ್ತು.

ಹೆಚ್ಚಾಗಿ ಯುವಕರು ಇಂತಹ ಶ್ವಾನಗಳನ್ನ ತಯಾರಿಸಿ ಸ್ಪರ್ಧೆಗೆ ತರುವುದನ್ನ ನೋಡಿದ್ದೇವೆ. ಆದರೆ ಈಗ ಯುವತಿಯರಲ್ಲಿಯೂ ಶ್ವಾನ ಪ್ರೀತಿ ಜಾಸ್ತಿಯಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇಂದು ಸ್ಪರ್ಧೆಯಲ್ಲಿ ನಾಯಿಗಳನ್ನ ತಂದ ಯುವತಿಯರು ಪ್ರಶಸ್ತಿಗಳನ್ನ ಬಾಚಿಕೊಂಡರು.

ರಾಜಸ್ತಾನ, ಮಹಾರಾಷ್ಟ್ರದ ಪುಣೆ ಸೇರಿದಂತೆ ರಾಜ್ಯದ ಬಹುತೇಕ ಕಡೆ ಇಂತಹ ಡಾಗ್ ಶೋ ನಡೆಯುತ್ತಿವೆ. ಆದರೆ ದಾವಣಗೆರೆ ಭಾಗದಲ್ಲಿ ಇಂತಹ ಶೋ ನಡೆಯಲು ಒಂದು ವಿಶೇಷ ಕಾರಣವಿದೆ. ಜಿಲ್ಲೆಯ ಹರಿಹರದಲ್ಲಿರುವ ಪ್ರಸಿದ್ಧ ಕಿರ್ಲೋಸ್ಕರ ಕಂಪನಿ. ಇಲ್ಲಿ ಉದ್ಯೋಗಕ್ಕೆ ದೇಶವಿದೇಶದಿಂದ ಜನ ಬರುತ್ತಿದ್ದು, ಅವರ ಹವ್ಯಾಸಗಳ ಪೈಕಿ ನಾಯಿ ಸಾಕುವುದು ಒಂದು. ಇದಕ್ಕೆ ನಿದರ್ಶನ ಇಲ್ಲಿ ಸೇರಿದ ವಿಭಿನ್ನ ತಳಿಯ ನಾಯಿಗಳೇ ಸಾಕ್ಷಿ.

ಇನ್ನು ಸ್ಪರ್ಧೆಗೆ ಲ್ಯಾಬ್ರಿಡಾರ್, ಜರ್ಮನ್ ಶಫರ್ಡ್, ಡಾಬರ್ ಮನ್, ಮುದೋಳ ಭೇಟೆ ನಾಯಿ, ಸೇಂಟ್ ಬರ್ನಾಡ್, ಗ್ರೇಡನ್, ಬಾಕ್ಸರ್, ಪಗ್, ಇಂಗ್ಲೀಷ್ ಮ್ಯಾಸ್ಟಫ್, ಬ್ರೇಜಿಲ್ ಮ್ಯಾಸ್ಟಾಫ್, ಐರಿಶ್ ಸೆಟರ್, ನೆಪೋಲಿನ್ ಮ್ಯಾಸ್ಟಾಫ್, ರೋಡ್ ವಿಲ್ಲರ್, ಸೈಬರ್ ಮ್ಯಾಸ್ಟಾಫ್, ಫೈಟರ್ ಸೇರಿದಂತೆ 28 ತಳಿಗಳ ನಾಯಿಗಳು ಭಾಗವಹಿಸಿದ್ದವು.

ಇಂತಹ ಅಪರೂಪದ ನಾಯಿಗಳನ್ನ ಮಾಲೀಕರು ಮನೆಯ ಮಕ್ಕಳಂತೆ ಕಣ್ಣಲ್ಲಿ ಕಣ್ಣಿಟ್ಟು ಪಾಲನೆ ಮಾಡಿದ್ದು, ಊಟ ಉಪಚಾರ ಅಷ್ಟೆ ಅಲ್ಲ, ಬಾಡಿ ಫಿಟ್ನೆಸ್ ಬಗ್ಗೆ ಕೂಡಾ ಗಮನ ಹರಿಸಿದ್ದರು. ಹೀಗಾಗಿ ಇಂದೊಂದು ಇಂದು (ಫೆ.5)ನಾಯಿಗಳ ಅದ್ಭುತ ಲೋಕವೇ ತೆರೆದುಕೊಂಡಿತ್ತು.




