
ಕೆಲವು ಸಮಯಗಳ ಹಿಂದೆ ಬಾಲಿವುಡ್ನ ತಾರಾ ದಂಪತಿ ಅಮೀರ್ ಖಾನ್ ಹಾಗೂ ಕಿರಣ್ ರಾವ್ ಪ್ರತ್ಯೇಕವಾಗಿದ್ದನ್ನು ಘೋಷಿಸಿದರು. ಈ ಜೋಡಿ ಪುತ್ರ ಆಜಾದ್ ಜನ್ಮದಿನವನ್ನು ಒಟ್ಟಾಗಿ ಆಚರಿಸಿದ್ದಾರೆ.

ಇತ್ತೀಚೆಗೆ ಪುತ್ರ ಆಜಾದ್ ಹುಟ್ಟುಹಬ್ಬವನ್ನು ಅಮೀರ್ ಹಾಗೂ ಕಿರಣ್ ದಂಪತಿ ಒಟ್ಟಿಗೇ ಆಚರಿಸಿದ್ದರು. ಆ ಸಂದರ್ಭದ ಚಿತ್ರಗಳು ವೈರಲ್ ಆಗಿವೆ.

ಅಮೀರ್ ಕುಟುಂಬದೊಂದಿಗೆ ಕಾಲಕಳೆಯುತ್ತಿರುವ ಚಿತ್ರಗಳು ಅವರ ಅಭಿಮಾನಿಗಳ ಮನಗೆದ್ದಿದೆ.

ಆಜಾದ್ ಹುಟ್ಟುಹಬ್ಬದ ಸಂದರ್ಭದಲ್ಲಿ ಅಮೀರ್ ಹಿರಿಯ ಪುತ್ರ ಜುನೈದ್ ಕೂಡ ಉಪಸ್ಥಿತರಿದ್ದರು. ಈರ್ವರೂ ಮಾತನಾಡುತ್ತಿರುವ ಚಿತ್ರಗಳು ಎಲ್ಲರ ಗಮನ ಸೆಳೆದಿವೆ.

ಅಮೀರ್ ಸದ್ಯ ‘ಲಾಲ್ ಸಿಂಗ್ ಛಡ್ಡಾ’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
Published On - 4:36 pm, Thu, 2 December 21