ಹಲವು ವರ್ಷಗಳ ಕಾಲ ಪ್ರೀತಿಸುತ್ತಿದ್ದ ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಮದುವೆ ಆಗಿದ್ದಾರೆ. ಇಂದು (ಜೂನ್ 5) ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ಅಭಿಷೇಕ್ ಅವರು ಅವಿವಾಗೆ ಮಾಂಗಲ್ಯಧಾರಣೆ ಮಾಡಿದರು.
ಸೆಲೆಬ್ರಿಟಿಗಳು, ಕುಟುಂಬದವರ ಸಮ್ಮುಖದಲ್ಲಿ ಈ ವಿವಾಹಕಾರ್ಯ ನೆರವೇರಿದೆ. ಎಲ್ಲರೂ ನವ ದಂಪತಿಗೆ ಶುಭಾಶಯ ಕೋರುತ್ತಿದ್ದಾರೆ. ಅವರ ದಾಂಪತ್ಯ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತಿದ್ದಾರೆ.
ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದಲ್ಲಿ ಈ ಅದ್ದೂರಿ ಮದುವೆ ನಡೆದಿದೆ. ಮುಂಜಾನೆಯೇ ಸುಮಲತಾ ಕುಟುಂಬದವರು ಚಾಮರ ವಜ್ರಕ್ಕೆ ಆಗಮಿಸಿದರು. ಅಭಿಷೇಕ್ ಅಂಬರೀಷ್ ಅವರು ಐಷಾರಾಮಿ ಕಾರಿನಲ್ಲಿ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟರು.
ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಮದುವೆಗೆ ಸೆಲೆಬ್ರಿಟಿಗಳ ದಂಡು ನೆರೆದಿತ್ತು. ಹಲವರು ಇವರಿಗೆ ವಿಶ್ ಮಾಡಿ ಶುಭ ಕೋರಿದ್ದಾರೆ.
ಅಭಿಷೇಕ್ ಮದುವೆ-ಅವಿವಾ ಕಲರ್ಫುಲ್ ಫೋಟೋ ವೈರಲ್ ಆಗಿದೆ. ನವ ದಂಪತಿಗೆ ಎಲ್ಲರೂ ಶುಭಕೋರಿದ್ದಾರೆ.
Published On - 2:35 pm, Mon, 5 June 23