ನಾಲ್ಕು ತಲೆಮಾರುಗಳಿಂದ ತಯರಾಗುವ ತೊಟ್ಟಿಲಿಗೆ ದೇಶ, ವಿದೇಶಿಗಳಲ್ಲಿ ಬೇಡಿಕೆ ಇದೆ. ಅನೇಕ ಗಣ್ಯರ ಮಕ್ಕಳ ನಾಮಕರಣಕ್ಕೆ ಇಲ್ಲಿನ ತೊಟ್ಟಿಲು ಸಾಕ್ಷಿಯಾಗಿವೆ. ಅದರಲ್ಲೂ ಸಿನಿಮಾ ರಂಗದವರಿಗೆ ಈ ತೊಟ್ಟಿಲು ಮೇಲೆ ಬಲು ಪ್ರೀತಿ. ಕಳೆದ ವರ್ಷ ಇಲ್ಲಿಂದ ರಾಕಿಂಗ್ ಸ್ಟಾರ್ ಯಶ್ ಮನೆಗೆ ತೊಟ್ಟಿಲು ಹೋಗಿತ್ತು. ಇದೀಗ ಮತ್ತೊಬ್ಬ ಸಿನಿಮಾ ಸ್ಟಾರ್ ಮನೆಗೆ ಹೋಗಲು ತೊಟ್ಟಿಲು ಸಿದ್ಧವಾಗುತ್ತಿದೆ. ಅಷ್ಟಕ್ಕೂ ನಾಲ್ಕು ತಲೆಮಾರಿನ ವಿಶೇಷ ಹೊಂದಿರುವ ತೊಟ್ಟಿಲು ಎಲ್ಲಿ ತಯಾರಾಗಿದೆ ಅಂದರೆ ಕಲಘಟಗಿಯಲ್ಲಿ.
ಧಾರವಾಡ ಜಿಲ್ಲೆಯ ಕಲಘಟಗಿ ತೊಟ್ಟಿಲು ತವರೂರು ಎಂದು ಹೆಸರಾದ ತಾಲೂಕು. ಇದೇ ಕಲಘಟಗಿಯಿಂದ ಇದೀಗ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ ಅಂಬರೀಶ್ ಪುತ್ರನ ನಾಮಕರಣಕ್ಕೆ ಇದೇ ತೊಟ್ಟಿಲು ಹೋಗುತ್ತಿದೆ. ಕಲಘಟಗಿ ನಿವಾಸಿ ಶ್ರೀಧರ್ ಎಂಬುವವರು ತೊಟ್ಟಿಲನ್ನು ಸಿದ್ಧಪಡಿಸಿದ್ದಾರೆ.
ಮಾರ್ಚ್ 14ರಂದು ಅಭಿಷೇಕ ಅಂಬರೀಶ್ ಪುತ್ರನ ನಾಮಕರಣ ಕಾರ್ಯಕ್ರಮ ಇದೆ. ಈ ಹಿನ್ನಲೆ ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ತೊಟ್ಟಿಲು ರೆಡಿಯಾಗುತ್ತಿದೆ. ಕಲಘಟಗಿ ತೊಟ್ಟಿಲು ನಾಲ್ಕು ತಲೆಮಾರುಗಳ ಇತಿಹಾಸವಿದೆ. ಇಲ್ಲಿ ತಯರಾಗುವ ತೊಟ್ಟಿಲಿಗೆ 100 ವರ್ಷ ಆಯಸ್ಸಂತೆ. ಸಾಗವಾಣಿ ಕಟ್ಟಿಗೆಯಲ್ಲಿ ಕಲಾವಿದರು ತೊಟ್ಟಿಲು ತಯಾರು ಮಾಡ್ತಾರೆ. ತೊಟ್ಟಿಲಿನ ಬಣ್ಣವೇ ಇಲ್ಲಿನ ವಿಶೇಷ. ಹಾಗಾಗಿ ಇಲ್ಲಿಂದ ತೊಟ್ಟಿಲು ತಯಾರಿಸಲಾಗುತ್ತಿದೆ.
ಬಣ್ಣ ಸಸ್ಯದ ಗಿಡಮೂಲಿಕೆಗಳಿಂದ ತಯಾರು ಮಾಡಿದ ಬಣ್ಣವಾಗಿರತ್ತೆ. ನೈಸರ್ಗಿಕ ಬಣ್ಣವನ್ನು ಕಲಾವಿದರು ತೊಟ್ಟಿಲಿಗೆ ಹಚ್ಚುತ್ತಾರೆ. ಅದಲ್ಲದೆ ತೊಟ್ಡಿಲು ಮೇಲೆ ಭಾರತದ ಇತಿಹಾಸದ ಚಿತ್ರಗಳನ್ನ ಬಿಡಿಸುತ್ತಾರೆ. ಅದು ರಾಮಾಯಣ, ಹಿಂದೂ ಸಂಪ್ರದಾಯದ ಚಿತ್ರಗಳನ್ನ ಬಿಡಿಸುತ್ತಾರೆ. ಇವರು ಬಣ್ಣ ಹಚ್ಚೋ ಕುಂಚವನ್ನು ಇವರೇ ತಯಾರಿಸುತ್ತಾರೆ. ಇದೀಗ ಅಂಬರೀಶ್ ಮನೆಯ ತೊಟ್ಟಿಲವನ್ನು ಕಲಾವಿದ ಶ್ರೀಧರ್ ಕಳೆದ ಎರಡು ತಿಂಗಳಿಂದ ನಿರ್ಮಾಣ ಮಾಡುತ್ತಿದ್ದಾರೆ.
ಕಲಘಟಗಿ ಚಿತ್ರಗಾರ ಕುಟುಂಬ ಕಳೆದ ನಾಲ್ಕು ತಲೆಮಾರುಗಳಿಂದ ತೊಟ್ಟಿಲು ತಯಾರಿಕೆಯಲ್ಲಿ ತೊಡಗಿಸಿಕೊಂಡಿವೆ. ಶ್ರೀಧರ್ ತಂದೆ ಲಕ್ಷ್ಮಣ ಸಾವಿನ ಬಳಿಕ ಇದೀಗ ಶ್ರೀಧರ್ ತೊಟ್ಟಿಲು ನಿರ್ಮಾಣದಲ್ಲಿ ಕಾಯಕದಲ್ಲಿ ತೊಡಗಿದ್ದಾರೆ. ಕಳೆದ ವರ್ಷ ಅಂಬರೀಶ್ ಅವರ ಆಸೆಯಂತೆ ಯಶ್ ಅವರ ಮನೆಗೆ ಕಲಘಟಗಿ ತೊಟ್ಟಿಲು ಹೋಗಿತ್ತು. ಇದೀಗ ಅಂಬರೀಶ್ ಅವರ ಮನೆಗೂ ತೊಟ್ಟಿಲು ಹೋಗುತ್ತಿದೆ. ನಾರಾಯಣ ಕಲಾಲ್ ಅನ್ನೋರು ಅಂಬರೀಶ್ ಮೊಮ್ಮಗನಿಗಾಗಿ ಕಲಘಟಗಿಯಲ್ಲಿ ತೊಟ್ಟಿಲು ನಿರ್ಮಾಣ ಮಾಡಿಸುತ್ತಿದ್ದಾರೆ.
ದೇಶ ವಿದೇಶಕ್ಕೆ ಇಲ್ಲಿನ ತೊಟ್ಟಿಲು ಹೋಗಿದ್ದು, ಕಲಘಟಗಿಯ ಇತಿಹಾಸಕ್ಕೆ ಸಾಕ್ಷಿ. ಮೋದಿಯಿಂದ ಹಿಡಿದು, ರಾಜಕುಮಾರ ಅವರ ಮನೆಗೆ ಇಲ್ಲಿನ ತೊಟ್ಟಿಲು ಹೋಗಿದ್ದಿದೆ. ಕಲಘಟಗಿಯ ತೊಟ್ಟಿಲಿಗೆ ಅದರದೆ ಆದ ವಿಶಿಷ್ಟವಾದ ಇತಿಹಾಸವಿರುವ ಕಾರಣಕ್ಕೆ ಇಲ್ಲಿನ ತೊಟ್ಟಿಲಿಗೆ ಮನ್ನಣೆ ಸಿಕ್ಕಿದೆ. ಇದೀಗ ಅಂಬರೀಶ್ ಅವರ ಮನೆಗೆ ಹೋಗಲು ರೆಡಿಯಾಗಿರುವ ತೊಟ್ಡಿಲು ಮೇಲೆ ದಶವಾತಾರ, ಕೃಷ್ಣನ ಅವತಾರದ ಚಿತ್ರಗಳನ್ನು ಕೆತ್ತನೆ ಮಾಡಿದ್ದಾರೆ. ಮಕ್ಕಳು ದೇವರ ಸಾನಿಧ್ಯದಲ್ಲಿ ಇರಲಿ ಅನ್ನೋದು ಅದರ ಆಶಯವಾಗಿದೆ.
Published On - 6:39 pm, Mon, 3 March 25