
ದೇಶಾದ್ಯಂತ ಇಂದು (ಆ.11) ಸಂಭ್ರಮ ಸಡಗರದಿಂದ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತಿದೆ. ಅತ್ತ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡಿರುವ ಯಶ್ ಅದೆಷ್ಟು ಬಿಝಿ ಇದ್ದರೂ, ರಾಖಿ ಹಬ್ಬದಂದು ತನ್ನ ತಂಗಿಯ ಮುಂದೆ ಹಾಜರಿರುತ್ತಾರೆ. ಇದಕ್ಕೆ ಸಾಕ್ಷಿಯೇ ಈ ಬಾರಿ ಕೂಡ ರಕ್ಷಾ ಬಂಧನ ದಿನದಂದು ಸಹೋದರಿ ನಂದಿನಿ ಕೈಯಿಂದ ರಾಖಿ ಕಟ್ಟಿಸಿಕೊಂಡಿರುವುದು.ದೇಶಾದ್ಯಂತ ಇಂದು (ಆ.11) ಸಂಭ್ರಮ ಸಡಗರದಿಂದ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತಿದೆ. ಅತ್ತ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡಿರುವ ಯಶ್ ಅದೆಷ್ಟು ಬಿಝಿ ಇದ್ದರೂ, ರಾಖಿ ಹಬ್ಬದಂದು ತನ್ನ ತಂಗಿಯ ಮುಂದೆ ಹಾಜರಿರುತ್ತಾರೆ. ಇದಕ್ಕೆ ಸಾಕ್ಷಿಯೇ ಈ ಬಾರಿ ಕೂಡ ರಕ್ಷಾ ಬಂಧನ ದಿನದಂದು ಸಹೋದರಿ ನಂದಿನಿ ಕೈಯಿಂದ ರಾಖಿ ಕಟ್ಟಿಸಿಕೊಂಡಿರುವುದು.

ಚಿತ್ರರಂಗದಲ್ಲಿ ಸದಾ ಬಿಝಿಯಾಗಿರುವ ರಾಕಿಂಗ್ ಸ್ಟಾರ್ ಪ್ರತಿ ಬಾರಿಯೂ ಅಣ್ಣ-ತಂಗಿಯ ಬಾಂಧವ್ಯ ಸಾರುವ ರಾಖಿ ಹಬ್ಬದಂದು ಸಹೋದರಿ ನಂದಿನಿಗೆ ವಿಶೇಷ ಉಡುಗೊರೆಯೊಂದಿಗೆ ಮನೆಯಲ್ಲಿ ಹಾಜರಿರುತ್ತಾರೆ.

ಕೆಲ ದಿನಗಳ ಹಿಂದೆಯಷ್ಟೇ ವಿದೇಶಿ ಪ್ರವಾಸದಲ್ಲಿದ್ದ ರಾಕಿ ಭಾಯ್ ರಾಖಿ ಹಬ್ಬದ ವೇಳೆಗೆ ಮನೆಗೆ ಹಿಂತಿರುಗಿದ್ದಾರೆ. ಅಷ್ಟೇ ಅಲ್ಲದೆ ತಂಗಿಯ ಕೈಯಿಂದ ರಾಖಿ ಕಟ್ಟಿಸಿಕೊಂಡಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಒಡಹುಟ್ಟಿದವರು - ದೇವರ ಪರಿಕಲ್ಪನೆಯಂತೆ ಜೊತೆಯಾಗಿದ್ದೇವೆ. ಆದರೆ ಜೀವಮಾನದ ಪ್ರೀತಿ ಮತ್ತು ಬೆಂಬಲದೊಂದಿಗೆ ಇಬ್ಬರೂ ಬಂಧಿತರಾಗಿದ್ದೇವೆ. ಇಲ್ಲಿ ಎಲ್ಲರಿಗೂ ರಕ್ಷಾ ಬಂಧನದ ಶುಭಾಶಯಗಳು ಎಂದು ಯಶ್ ಶುಭಕೋರಿದ್ದಾರೆ.

ಇದೀಗ ಯಶ್-ನಂದಿನಿಯ ರಾಖಿ ಹಬ್ಬದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟನಿಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ.

ಯಶ್-ನಂದಿನಿ ಬಾಲ್ಯದ ಫೋಟೋ