
ನಟಿ ಅದಿತಿ ಪ್ರಭುದೇವ ಅವರು ಇಂದು (ಜನವರಿ 13) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಶುಭಾಶಯ ತಿಳಿಸುತ್ತಿದ್ದಾರೆ.

ಅದಿತಿ ಪ್ರಭುದೇವ ಅವರಿಗೆ ಈ ವರ್ಷ ಬರ್ತ್ಡೇ ತುಂಬಾನೇ ವಿಶೇಷ. ಇದಕ್ಕೆ ಕಾರಣ ಅವರ ಮದುವೆ. ಯಶಸ್ವಿ ಅವರನ್ನು ಮದುವೆ ಆದ ನಂತರದಲ್ಲಿ ಅದಿತಿ ಆಚರಿಸಿಕೊಳ್ಳುತ್ತಿರುವ ಮೊದಲ ಹುಟ್ಟುಹಬ್ಬ ಇದು.

ಅದಿತಿ ಹಾಗೂ ಯಶಸ್ವಿ ಅವರ ಮದುವೆ ಕಳೆದ ವರ್ಷ ನವೆಂಬರ್ನಲ್ಲಿ ನಡೆಯಿತು. ಬೆಂಗಳೂರಿನಲ್ಲಿ ಅದ್ದೂರಿಯಾಗಿ ಈ ಜೋಡಿ ಮದುವೆ ಆಯಿತು.

ಅದಿತಿ ಹಾಗೂ ಯಶಸ್ವಿ ಅವರು ಒಟ್ಟಾಗಿ ಹುಟ್ಟುಹಬ್ಬ ಆಚರಿಸಿದ್ದಾರೆ ಎನ್ನಲಾಗಿದೆ. ಈ ವಿಶೇಷ ದಿನದ ಆಚರಣೆಗೆ ಈ ದಂಪತಿ ಎಲ್ಲಿಗೆ ತೆರಳಿದ್ದಾರೆ ಎನ್ನುವ ಕುತೂಹಲ ಮೂಡಿದೆ.

ಅದಿತಿ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇರುವಾಗಲೇ ಅವರು ಮದುವೆ ಆಗುವ ನಿರ್ಧಾರಕ್ಕೆ ಬಂದರು.
Published On - 9:50 am, Fri, 13 January 23