Updated on: Oct 26, 2022 | 11:46 AM
ಎಲ್ಲೆಲ್ಲೂ ದೀಪಾವಳಿ ಸಂಭ್ರಮ ಜೋರಾಗಿದೆ. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ಈ ಹಬ್ಬವನ್ನು ಆಚರಿಸುತ್ತಿದ್ದಾರೆ. ಈಗ ನಟಿ ಅಮೂಲ್ಯ ಅವರು ದೀಪಾವಳಿ ಆಚರಿಸಿದ್ದಾರೆ.
ಬೆಳಕಿನ ಮಧ್ಯೆ ಕುಳಿತು ನಟಿ ಅಮೂಲ್ಯ ಅವರು ಹಬ್ಬ ಆಚರಿಸಿದ್ದಾರೆ. ಈ ಫೋಟೋ ಹಾಗೂ ರೀಲ್ಸ್ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅವರು ಹಂಚಿಕೊಂಡಿದ್ದಾರೆ.
ನಟಿಯ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ಗಳು ಬರುತ್ತಿವೆ. ಅಭಿಮಾನಿಗಳು ಈ ಫೋಟೋಗೆ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಅಮೂಲ್ಯ ಅವರು ಇತ್ತೀಚೆಗೆ ಅವಳಿ ಮಕ್ಕಳ ತಾಯಿ ಆದರು. ಪತಿ ಜಗದೀಶ್ ಹಾಗೂ ಮಕ್ಕಳ ಜತೆ ನಿಂತು ಅವರು ಈ ಮೊದಲು ಸಾಕಷ್ಟು ಫೋಟೋಗಳನ್ನು ಹಂಚಿಕೊಂಡಿದ್ದರು.
ಅಮೂಲ್ಯ ಅವರಿಗೆ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇತ್ತು. ಆಗಲೇ ಅವರು ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡರು. ಅವರು ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಲಿ ಎಂಬುದು ಫ್ಯಾನ್ಸ್ ಬಯಕೆ.