Updated on:Oct 26, 2022 | 10:49 AM
ನಟಿ ರವೀನಾ ಟಂಡನ್ ಅವರು ಇಂದು (ಅಕ್ಟೋಬರ್ 26) 48ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ವಯಸ್ಸಲ್ಲೂ ಅವರು ಯುವತಿಯರನ್ನು ನಾಚಿಸುವಂತಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ಹುಟ್ಟುಹಬ್ಬದ ಶುಭಾಶಯ ಬರುತ್ತಿದೆ.
ಈ ವರ್ಷ ತೆರೆಗೆ ಬಂದ ‘ಕೆಜಿಎಫ್ 2’ ಚಿತ್ರದ ಮೂಲಕ ರವೀನಾ ಅವರು ಸ್ಯಾಂಡಲ್ವುಡ್ಗೆ ಮರಳಿದರು. ಈ ಚಿತ್ರದಲ್ಲಿ ರಮಿಕಾ ಸೇನ್ ಪಾತ್ರದಲ್ಲಿ ರವೀನಾ ಗಮನ ಸೆಳೆದಿದ್ದಾರೆ.
ರವೀನಾ ಅವರ ಬಗ್ಗೆ ಹಲವು ಅಚ್ಚರಿಯ ವಿಚಾರಗಳು ಇವೆ. ರವೀನಾ ತಂದೆ ಹೆಸರು ರವಿ, ತಾಯಿ ವೀನಾ. ಇಬ್ಬರ ಹೆಸರನ್ನು ಸೇರಿಸಿ ಇವರಿಗೆ ರವೀನಾ ಎಂದು ಇಡಲಾಗಿದೆ.
ಬಾಲಿವುಡ್ ನಟ ಅಜಯ್ ದೇವಗನ್ ಹಾಗೂ ರವೀನಾ ಕಾಲೇಜು ದಿನಗಳಲ್ಲಿ ಒಂದೇ ತರಗತಿಯಲ್ಲಿ ಕಲಿತಿದ್ದಾರೆ. ರವೀನಾ ತಾವು 21ನೇ ವಯಸ್ಸಿನಲ್ಲಿದ್ದಾಗ ಎರಡು ಹೆಣ್ಣುಮಕ್ಕಳನ್ನು ದತ್ತು ಪಡೆದಿದ್ದಾರೆ.
1994ರಲ್ಲಿ ‘ಮೊಹ್ರಾ’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಅಕ್ಷಯ್ ಹಾಗೂ ರವೀನಾ ಒಟ್ಟಾಗಿ ಡೇಟಿಂಗ್ ಮಾಡಿದ್ದರು. ನಂತರ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ, ಮದುವೆವರೆಗೆ ಇವರ ಸಂಬಂಧ ಹೋಗಿಲ್ಲ. ಇವರ ನಿಶ್ಚಿತಾರ್ಥ ಮುರಿದುಬಿತ್ತು.
Published On - 9:55 am, Wed, 26 October 22