Updated on: May 04, 2024 | 9:55 AM
ನಟಿ ಹೇಮಾ ಮಾಲಿನಿ ಮತ್ತು ಧರ್ಮೇಂದ್ರ ತಮ್ಮ 44ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಇತ್ತೀಚೆಗೆ ಆಚರಿಸಿಕೊಂಡರು. ಈ ವೇಳೆ ದಂಪತಿ ಮತ್ತೆ ಮದುವೆ ಆಗಿದ್ದಾರೆ ಎನ್ನಲಾಗಿದೆ. ಈ ಸಂದರ್ಭದ ಫೋಟೋ ವೈರಲ್ ಆಗಿದೆ.
ಧರ್ಮೇಂದ್ರ ಹಾಗೂ ಹೇಮಾ ಮಾಲಿನಿ ದೊಡ್ಡ ಹಾರವನ್ನು ಹಾಕಿಕೊಂಡು ಕಾಣಿಸಿಕೊಂಡಿದ್ದಾರೆ. ಹೇಮಾ ಮಾಲಿನಿ ಅವರು ಸೀರೆ ಉಟ್ಟು ಕಾಣಿಸಿಕೊಂಡರೆ, ಧರ್ಮೇಂದ್ರ ಪ್ಯಾಂಟ್-ಶರ್ಟ್ ಧರಿಸಿದ್ದಾರೆ.
ಶ್ರೀದೇವಿ ಕೆನ್ನೆಗೆ ಧರ್ಮೇಂದ್ರ ಅವರು ಕಿಸ್ ಮಾಡಿದ್ದಾರೆ. ಈ ಫೋಟೋ ಗಮನ ಸೆಳೆದಿದೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ನಾನಾ ರೀತಿಯ ಕಮೆಂಟ್ಗಳು ಬಂದಿವೆ.
ಹೇಮಾ ಮಾಲಿನಿ ಹಾಗೂ ಧರ್ಮೇಂದ್ರ ಮೊದಲ ಬಾರಿಗೆ ಭೇಟಿ ಆಗಿದ್ದು 1970ರಲ್ಲಿ. ‘ತುಮ್ ಹಸೀ ಮೇ ಜವಾನ್’ ಸಿನಿಮಾದ ಸೆಟ್ನಲ್ಲಿ ಇವರ ಭೇಟಿ ಆಯಿತು. ಈ ಜೋಡಿಯನ್ನು ಫ್ಯಾನ್ಸ್ ತೆರೆಮೇಲೆ ನೋಡಿ ಮೆಚ್ಚಿಕೊಂಡಿದ್ದಾರೆ.
1980ರಲ್ಲಿ ಹೇಮಾ ಮಾಲಿನಿ ಹಾಗೂ ಧರ್ಮೇಂದ್ರ ಮದುವೆ ಆದರು. ಈ ದಂಪತಿಗೆ ಇಶಾ ಡಿಯೋಲ್ ಹಾಗೂ ಅಹಾನಾ ಡಿಯೋಲ್ ಹೆಸರಿನ ಮಕ್ಕಳಿದ್ದಾರೆ. ಹೇಮಾ ಮಾಲಿನಿ ಡ್ರೀಮ್ ಗರ್ಲ್ ಎಂದೇ ಫೇಮಸ್. ಧರ್ಮೇಂದ್ರ ಅವರು ಹೇಮಾ ಮಾಲಿನಿಗೂ ಮೊದಲು ಪ್ರಕಾಶ್ ಕೌರ್ ಅವರನ್ನು ಮದುವೆ ಆಗಿದ್ದರು. ಈ ದಂಪತಿಗೆ ಸನ್ನಿ ಡಿಯೋಲ್ ಹಾಗೂ ಬಾಬಿ ಡಿಯೋಲ್ ಜನಿಸಿದರು.
ಹೇಮಾ ಮಾಲಿನಿ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ಮಥುರಾ ಕ್ಷೇತ್ರದಿಂದ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ.
Published On - 9:54 am, Sat, 4 May 24