
ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ ಸ್ವಂತ ಪ್ರತಿಭೆಯಿಂದ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಶ್ರೀದೇವಿ ಹಾಗೂ ಬೋನಿ ಕಪೂರ್ ಪುತ್ರಿಯಾಗಿರುವ ಜಾನ್ವಿ ಬತ್ತಳಿಕೆಯಲ್ಲಿ ಸದ್ಯ 4 ಚಿತ್ರಗಳಿವೆ.

‘ಗುಡ್ ಲಕ್ ಜೆರಿ’, ‘ಮಿಲಿ’ ಚಿತ್ರಗಳ ಶೂಟಿಂಗ್ ಕಂಪ್ಲೀಟ್ ಆಗಿದ್ದರೆ, ‘ಮಿಸ್ಟರ್ ಆಂಡ್ ಮಿಸಸ್ ಮಹಿ’ ಹಾಗೂ‘ಬವಾಲ್’ ಚಿತ್ರಗಳು ಚಿತ್ರೀಕರಣ ನಡೆಯುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಜಾನ್ವಿ ಸಖತ್ ಆಕ್ಟಿವ್ ಆಗಿದ್ಧಾರೆ.

ಆಗಾಗ ಪ್ರವಾಸ ತೆರಳುವ ನಟಿ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಹಾಗೆಯೇ ಸಖತ್ ಬೋಲ್ಡ್ ಫೋಟೋಶೂಟ್ಗಳ ಮೂಲಕವೂ ನಟಿ ಅಭಿಮಾನಿಗಳ ಮನಗೆಲ್ಲುತ್ತಾರೆ.

ಇತ್ತೀಚೆಗೆ ಜಾನ್ವಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪ್ರಕೃತಿಯ ಮಡಿಲಿನಲ್ಲಿ ಸುತ್ತಾಡುತ್ತಿರುವ ನಟಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

ಸದ್ಯ ಜಾನ್ವಿಯ ಫೋಟೋಗಳು ಅಭಿಮಾನಿಗಳ ಮನಗೆದ್ದಿವೆ.

ಸಿಂಪಲ್ ಗೆಟಪ್ನಲ್ಲೇ ಭರ್ಜರಿ ಪೋಸ್ ನೀಡಿದ ಜಾನ್ವಿ ಕಪೂರ್ ಫೋಟೋಗಳು ಈಗ ವೈರಲ್ ಆಗಿವೆ.
Published On - 9:30 pm, Tue, 31 May 22