ಬಹುಭಾಷಾ ನಟಿ ಸಮಂತಾ ಟ್ರೆಂಡ್ ಸೆಟ್ಟರ್ ಎಂದರೆ ತಪ್ಪಿಲ್ಲ. ಬೋಲ್ಡ್ ಅವತಾರದ ಜತೆಜತೆಗೆ ವಿಭಿನ್ನ ದಿರಿಸುಗಳ ಮೂಲಕ ನಟಿ ಗಮನ ಸೆಳೆಯುತ್ತಾರೆ.
ಸಮಂತಾ ಧರಿಸುವ ಸ್ಟೈಲಿಶ್ ಉಡುಪುಗಳು ಫ್ಯಾಶನ್ ಪ್ರಿಯರ ಗಮನಸೆಳೆಯುತ್ತವೆ. ಹೊಸ ಹೊಸ ಮಾದರಿಗಳನ್ನು ಪ್ರದರ್ಶಿಸುವ ಸಮಂತಾ ಅದರಿಂದ ಸಖತ್ ಸುದ್ದಿಯಾಗುತ್ತಾರೆ.
ಇತ್ತೀಚೆಗೆ ಸಮಂತಾ ಖಾಸಗಿ ನಿಯತಕಾಲಿಕೆಯೊಂದಕ್ಕೆ ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಅವರ ಗೆಟಪ್ ಎಲ್ಲರ ಮನಗೆದ್ದಿದೆ.
‘ಪುಷ್ಪ: ದಿ ರೈಸ್’ ಚಿತ್ರದಲ್ಲಿ ‘ಊ ಅಂಟಾವಾ’ ಹಾಡಿಗೆ ಹೆಜ್ಜೆ ಹಾಕಿ ದೇಶ-ವಿದೇಶದಲ್ಲಿ ನಟಿ ಗುರುತಿಸಿಕೊಂಡಿದ್ದರು. ಅದಕ್ಕೂ ಮುನ್ನ ‘ಫ್ಯಾಮಿಲಿಮ್ಯಾನ್ 2’ ವೆಬ್ ಸೀರೀಸ್ ನಟಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತ್ತು.
ಪ್ರಸ್ತುತ ಸಮಂತಾ ಮಹಿಳಾ ಪ್ರಧಾನ ಚಿತ್ರಗಳತ್ತ ಒಲವು ತೋರುತ್ತಿದ್ದಾರೆ.
ಇವುಗಳ ಜತೆಜತೆಗೆ ಒಟಿಟಿ ಕ್ಷೇತ್ರದತ್ತಲೂ ಸಮಂತಾ ಚಿತ್ತನೆಟ್ಟಿದೆ. ಫ್ಯಾಮಿಲಿಮ್ಯಾನ್ ನಿರ್ದೇಶಕರ ಹೊಸ ವೆಬ್ ಸೀರೀಸ್ ಒಂದರಲ್ಲಿ ಸಮಂತಾ ಕಾಣಿಸಿಕೊಳ್ಳುತ್ತಿದ್ದಾರೆ.
ಸಮಂತಾ ನಟಿಸಿರುವ ಶಾಕುಂತಲಂ, ಕಾಥುವಾಕುಲ ರೆಂಡು ಕಾದಲ್ ಮೊದಲಾದ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದೆ.
‘ಅರೇಂಜ್ಮೆಂಟ್ಸ್ ಆಫ್ ಲವ್’ ಚಿತ್ರದ ಮೂಲಕ ಹಾಲಿವುಡ್ಗೆ ಕಾಲಿಡುತ್ತಿದ್ದಾರೆ ಸಮಂತಾ.
ಸ್ಟೈಲಿಶ್ ಗೆಟಪ್ನಲ್ಲಿ ಸಮಂತಾ