
ನಟಿ ಶ್ರೀಲೀಲಾ ಅವರು ಪಕ್ಕಾ ಕನ್ನಡತಿ. ಸ್ವಚ್ಛವಾಗಿ ಕನ್ನಡ ಮಾತನಾಡುವ ಅವರು ಸದ್ಯ ಟಾಲಿವುಡ್ನಲ್ಲಿ ಬ್ಯುಸಿ ಆಗಿದ್ದಾರೆ. ಅವರಿಗೆ ಇಂದು (ಜೂನ್ 14) ಬರ್ತ್ಡೇ ಸಂಭ್ರಮ.

ಶ್ರೀಲೀಲಾ ಅವರಿಗೆ ಎಲ್ಲ ಕಡೆಗಳಿಂದ ವಿಶ್ಗಳು ಬರುತ್ತಿವೆ. ಸೋಶಿಯಲ್ ಮೀಡಿಯಾ ಮೂಲಕ ನಟಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ.

ಶ್ರೀಲೀಲಾ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಅವರ ಖ್ಯಾತಿ ದಿನೇದಿನೇ ಹೆಚ್ಚುತ್ತಲೇ ಇದೆ. ಅವರು ಸಾಕಷ್ಟು ದೊಡ್ಡ ಸ್ಟಾರ್ಗಳ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಶ್ರೀಲೀಲಾ ಬರ್ತ್ಡೇ ದಿನ ಅಭಿಮಾನಿಗಳಿಗೆ ಸರ್ಪ್ರೈಸ್ ಇದೆ. ಅಲ್ಲು ಅರ್ಜುನ್ಗೆ ಜೊತೆಯಾಗಿ ಶ್ರೀಲೀಲಾ ನಟಿಸುತ್ತಿದ್ದಾರೆ. ಸಾಂಗ್ ಒಂದಕ್ಕಾಗಿ ಇವರು ಒಂದಾಗಿದ್ದಾರೆ ಎನ್ನಲಾಗುತ್ತಿದೆ.

ಈ ಬಗ್ಗೆ ಇಂದು ಘೋಷಣೆ ಆಗಲಿದೆ. ಇದಕ್ಕಾಗಿ ಅಭಿಮಾನಿಗಳು ಕಾದಿದ್ದಾರೆ. ಇದರ ಜೊತೆ ಶ್ರೀಲೀಲಾ ಅವರ ಹೊಸ ಸಿನಿಮಾ ತಂಡಗಳ ಕಡೆಯಿಂದ ಗಿಫ್ಟ್ ಸಿಗಲಿದೆ.