
ನಟಿ ಅದಿತಿ ಪ್ರಭುದೇವ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಎಲ್ಲ ಚಿತ್ರತಂಡಗಳು ಅವರ ಹುಟ್ಟುಹಬ್ಬದ ಪ್ರಯುಕ್ತ ಪೋಸ್ಟರ್ಗಳ ಮೂಲಕ ಶುಭಕೋರಿವೆ. ಅದಿತಿಗೆ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ.

ಗಜಾನನಾ ಆ್ಯಂಡ್ ಗ್ಯಾಂಗ್, ಓಲ್ಡ್ ಮಾಂಕ್, ಮಾಫಿಯಾ, ತೋತಾಪುರಿ, ತ್ರಿಬಲ್ ರೈಡಿಂಗ್, 5ಡಿ, ಒಂಭತ್ತನೇ ದಿಕ್ಕು, ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಸೇರಿದಂತೆ ಹಲವು ಸಿನಿಮಾಗಳ ಕೆಲಸಗಳಲ್ಲಿ ಅದಿತಿ ಬ್ಯುಸಿ ಆಗಿದ್ದಾರೆ.

ಕಿರುತೆರೆಯಲ್ಲಿ ಖ್ಯಾತಿ ಗಳಿಸಿ, ನಂತರ ಸಿನಿಮಾರಂಗಕ್ಕೆ ಕಾಲಿಟ್ಟವರು ಅದಿತಿ ಪ್ರಭುದೇವ. ಅಪ್ಪಟ್ಟ ಕನ್ನಡದ ಹುಡುಗಿ ಆಗಿರುವ ಅವರಿಗೆ ಚಂದನವನದಲ್ಲಿ ಸಖತ್ ಡಿಮ್ಯಾಂಡ್ ಇದೆ. ಹಲವು ಬಗೆಯ ಪಾತ್ರಗಳನ್ನು ಅವರು ಒಪ್ಪಿಕೊಳ್ಳುತ್ತಿದ್ದಾರೆ.

ಕೆಲವೇ ದಿನಗಳ ಹಿಂದೆ ಅದಿತಿ ಪ್ರಭುದೇವ ಅವರ ನಿಶ್ಚಿತಾರ್ಥ ನೆರವೇರಿತು. ಉದ್ಯಮಿ ಯಶಸ್ ಪಾಟ್ಲ ಜೊತೆ ಅವರು ಮದುವೆ ಆಗಲಿದ್ದಾರೆ. ಈ ಜೋಡಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.


ಕನ್ನಡ ಚಿತ್ರರಂಗದಲ್ಲಿ ಅದಿತಿ ಪ್ರಭುದೇವ ಅವರು ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇಂದು (ಜ.13) ಜನ್ಮದಿನ ಆಚರಿಸಿಕೊಳ್ಳುತ್ತಿರುವ ಅವರಿಗೆ ಅಭಿಮಾನಿಗಳು, ಸ್ನೇಹಿತರು ಮತ್ತು ಸೆಲೆಬ್ರಿಟಿಗಳು ಶುಭ ಕೋರುತ್ತಿದ್ದಾರೆ.