Updated on: Jul 12, 2023 | 8:23 AM
ನಟಿ ಅದಿತಿ ಪ್ರಭುದೇವ ಅವರು ಮದುವೆ ಬಳಿಕ ಸಿನಿಮಾ ಕೆಲಸಗಳಿಗೆ ಬ್ರೇಕ್ ನೀಡಿದ್ದಾರೆ. ವಿದೇಶ ಸುತ್ತುತ್ತಾ ಹಾಯಾಗಿ ಸಮಯ ಕಳೆಯುತ್ತಿದ್ದಾರೆ.
ಅದಿತಿ ಪ್ರಭುದೇವ ಅವರು ತಮ್ಮ ಶ್ವಾನದ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗೆ ‘ನಾನು ನನ್ನ ಚಾಕೋಲೇಟ್’ ಎಂದು ಕ್ಯಾಪ್ಶನ್ ನೀಡಿದ್ದಾರೆ.
ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಕ್ಕಿದೆ. ‘ಏನೇ ಕನ್ನಡತಿ ನೀನ್ ಎಷ್ಟು ಚೆಂದ ಕಾಣತೀ’ ಎಂದು ಫ್ಯಾನ್ಸ್ ಬರೆದುಕೊಂಡಿದ್ದಾರೆ.
ಅದಿತಿ ಪ್ರಭುದೇವ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅಭಿಮಾನಿಗಳಿಗಾಗಿ ಅವರು ಆಗಾಗ ಫೋಟೋ ಹಂಚಿಕೊಳ್ಳುತ್ತಾರೆ.
ಯಶಸ್ ಅವರನ್ನು ಅದಿತಿ ಇತ್ತೀಚೆಗೆ ಮದುವೆ ಆದರು. ಇಬ್ಬರದ್ದೂ ಅರೇಂಜ್ ಮ್ಯಾರೇಜ್. ಇತ್ತೀಚೆಗೆ ಅವರು ಫ್ರಾನ್ಸ್ಗೆ ಪ್ರವಾಸ ತೆರಳಿದ್ದರು.
ಅದಿತಿ ಅವರು ಯೂಟ್ಯೂಬ್ ಚಾನೆಲ್ ಅನ್ನೂ ಹೊಂದಿದ್ದಾರೆ. ಇತ್ತೀಚೆಗೆ ಅವರು ಯಾವುದೇ ವಿಡಿಯೋ ಹಂಚಿಕೊಂಡಿಲ್ಲ. ಅಲ್ಲಿಯೂ ವಿಡಿಯೋ ಮಾಡಿ ಹಂಚಿಕೊಳ್ಳುವಂತೆ ಫ್ಯಾನ್ಸ್ ಕೋರಿದ್ದಾರೆ.
ಐಫೀಲ್ ಟವರ್ ಎದುರು ಅದಿತಿ