ನಟಿ ಅದಿತಿ ರಾವ್ ಹೈದರಿ ಹಾಗೂ ಸಿದ್ದಾರ್ಥ್ ಸದ್ದಿಲ್ಲದೆ ಮದುವೆ ಆಗಿದ್ದಾರೆ. ಹಲವು ವರ್ಷ ಪ್ರೀತಿಯಲ್ಲಿ ಇದ್ದ ಇವರು ನಂತರ ನಿಶ್ಚಿತಾರ್ಥ ಮಾಡಿಕೊಂಡರು. ಈಗ ಇಬ್ಬರೂ ಹಸೆಮಣೆ ಏರಿದ್ದು, ಆ ಸುಂದರ ಫೋಟೋಗಳು ವೈರಲ್ ಆಗಿವೆ.
ದಕ್ಷಿಣ ಭಾರತದ ಶೈಲಿಯಲ್ಲಿ ಅದಿತಿ ರಾವ್ ಹೈದರಿ ಹಾಗೂ ಸಿದ್ದಾರ್ಥ್ ವಿವಾಹ ನಡೆದಿದೆ. ಅದಿತಿ ರಾವ್ ಹೈದರಿ ಅವರು ಈ ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಮದುವೆಯಲ್ಲಿ ಕುಟುಂಬದವರು ಮತ್ತು ಸ್ನೇಹಿತರು ಮಾತ್ರ ಪಾಲ್ಗೊಂಡಿದ್ದರು.
ದೇವಸ್ಥಾನ ಒಂದರಲ್ಲಿ ಈ ಮದುವೆ ನಡೆದಿದೆ ಎನ್ನಲಾಗಿದೆ. ಹೆಚ್ಚಿನ ಆಡಂಬರ ಇಲ್ಲದೆ ಸರಳವಾಗಿ ಮದುವೆ ಕಾರ್ಯಗಳು ನಡೆದಿವೆ. ಮಾಧ್ಯಮಗಳಲ್ಲಿ ಈ ಸುದ್ದಿ ಹೊರ ಬೀಳದಂತೆ ಈ ಜೋಡಿ ರಹಸ್ಯ ಕಾಪಾಡಿಕೊಂಡು ಬಂದಿದ್ದರು.
ಅದಿತಿ ರಾವ್ ಹೈದರಿ ಮತ್ತು ಸಿದ್ದಾರ್ಥ್ ಇಬ್ಬರಿಗೂ ಇದು ಎರಡನೇ ವಿವಾಹ. ಈ ಮೊದಲು ಸಿದ್ದಾರ್ಥ್ ಅವರು ಮೇಘನಾ ಎಂಬುವವರನ್ನು ಮದುವೆ ಆಗಿದ್ದರು. ಇವರು 2007ರಲ್ಲಿ ಬೇರೆ ಆದರು. ಅದಿತಿ ರಾವ್ ಅವರು ಮೊದಲ ಪತಿ ಸತ್ಯದೀಪ್ ಮಿಶ್ರಾಗೆ 2013ರಲ್ಲಿ ಡಿವೋರ್ಸ್ ನೀಡಿದ್ದರು.
ಅದಿತಿ ಹಾಗೂ ಸಿದ್ದಾರ್ಥ್ ಇಬ್ಬರೂ ಚಿತ್ರರಂಗದಲ್ಲಿ ಬೇಡಿಕೆ ಹೊಂದಿದ್ದಾರೆ. ಹಲವು ಸಿನಿಮಾಗಳಲ್ಲಿ ಇವರು ನಟಿಸಿ ಗಮನ ಸೆಳೆದಿದ್ದಾರೆ. ಇಬ್ಬರ ಮಧ್ಯೆ ಸಿನಿಮಾ ಸೆಟ್ನಲ್ಲೇ ಪ್ರೀತಿ ಮೂಡಿತು ಎನ್ನಲಾಗಿದೆ.