
ಸೋಶಿಯಲ್ ಮೀಡಿಯಾದಲ್ಲಿ ಪ್ರತಿ ದಿನ ನೂರಾರು ಫೋಟೋಗಳು ವೈರಲ್ ಆಗುತ್ತವೆ. ಅವುಗಳಲ್ಲಿ ನಿಜ ಯಾವುದು, ಸುಳ್ಳು ಯಾವುದು ಎಂಬುದೇ ತಿಳಿಯದಂತಾಗಿದೆ. ಅಷ್ಟರಮಟ್ಟಿಗೆ ಕೃತಕ ಬುದ್ಧಿಮತೆಯ ದುರುಪಯೋಗ ಆಗುತ್ತಿದೆ. ಅದಕ್ಕೆ ಇಲ್ಲಿದೆ ಉದಾಹರಣೆ.

ಆಪ್ ನಾಯಕ ರಾಘವ್ ಚಡ್ಡಾ ಹಾಗೂ ಅವರ ಪತ್ನಿ, ನಟಿ ಪರಿಣೀತಿ ಚೋಪ್ರಾ ಫೋಟೋಗಳನ್ನು ಎಐ ಸಹಾಯದಿಂದ ಈ ರೀತಿ ಮಾಡಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್ ಆಗಿವೆ. ಇಂಥ ಫೋಟೋಗಳಿಂದ ಜನರನ್ನು ದಾರಿ ತಪ್ಪಿಸಲಾಗುತ್ತಿದೆ.

ಪರಿಣೀತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಅವರು 2023ರಲ್ಲಿ ಮದುವೆ ಆದರು. ಅನೇಕ ಸ್ಥಳಗಳಿಗೆ ಅವರು ಪ್ರವಾಸ ತೆರಳಿದ್ದಾರೆ ಎಂಬುದು ನಿಜ. ಆದರೆ ಇಷ್ಟು ಬೋಲ್ಡ್ ಆಗಿರುವ ಫೋಟೋಗಳನ್ನು ಅವರು ಹಂಚಿಕೊಂಡಿಲ್ಲ. ಇದು ಕೃತಕ ಬುದ್ಧಿಮತೆಯ ದುರುಪಯೋಗದಿಂದ ಆಗಿದೆ.

ಈ ಮೊದಲು ಅನೇಕ ಸೆಲೆಬ್ರಿಟಿಗಳಿಗೆ ಕೂಡ ಎಐ ದುರ್ಬಳಕೆಯಿಂದ ಸಾಕಷ್ಟು ತೊಂದರೆ ಉಂಟಾಗಿತ್ತು. ಡೀಪ್ ಫೇಕ್ ರೀತಿಯ ಅಪ್ಲಿಕೇಷನ್ಗಳನ್ನು ಬಳಸಿ ನಟಿ ರಶ್ಮಿಕಾ ಮಂದಣ್ಣ ಅವರ ವಿಡಿಯೋ ಸೃಷ್ಟಿಸಲಾಗಿತ್ತು. ಅದರ ವಿರುದ್ಧ ಅವರು ಕಾನೂನು ಕ್ರಮ ತೆಗೆದುಕೊಂಡಿದ್ದರು.

‘ಹೊಸ ತಂತ್ರಜ್ಞಾನದ ಜೊತೆ ನಾವು ಎಚ್ಚರಿಕೆಯಿಂದ ಇರಬೇಕು. ಡೀಪ್ಫೇಕ್ ವಿಡಿಯೋಗಳು ರಿಯಲ್ ರೀತಿ ಕಾಣಿಸುತ್ತವೆ. ಯಾವುದೇ ವಿಡಿಯೋ ಮತ್ತು ಫೋಟೋವನ್ನು ನಂಬುವ ಮುನ್ನ ನಾವು ಖಚಿತಪಡಿಸಿಕೊಳ್ಳಬೇಕು’ ಎಂದು ನರೇಂದ್ರ ಮೋದಿ ಈ ಮೊದಲು ಹೇಳಿದ್ದರು.

‘ಎಐ ತಂತ್ರಜ್ಞಾನವು ಚಿತ್ರರಂಗಕ್ಕೆ ದೊಡ್ಡ ಮಾರಕವಾಗಿದೆ’ ಎಂದು ಅಮಿತಾಭ್ ಬಚ್ಚನ್ ಕೂಡ ಹೇಳಿದ್ದರು. ದಿನ ಕಳೆದಂತೆಲ್ಲ ಕೃತಕ ಬುದ್ಧಿಮತ್ತೆಯ ಬಲ ಹೆಚ್ಚುತ್ತಿದೆ. ಅದನ್ನು ದುರ್ಬಳಕೆ ಮಾಡಿಕೊಂಡು ಸೆಲೆಬ್ರಿಟಿಗಳ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದೆ.
Published On - 5:26 pm, Fri, 7 February 25