
ಬಿಗ್ ಬಾಸ್ ಮನೆಯಲ್ಲಿ ಇರುವ ಐಶ್ವರ್ಯಾ ಅವರು ಭಾವನಾತ್ಮಕ ಜೀವಿ. ಸಾಕಷ್ಟು ವಿಚಾರಕ್ಕೆ ಅವರು ಕಣ್ಣೀರು ಹಾಕಿದ ಉದಾಹರಣೆ ಇದೆ. ಈಗ ಐಶ್ವರ್ಯಾ ಅವರು ಮತ್ತೊಮ್ಮೆ ಅತ್ತಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಒಂದು ಶಬ್ದ.

ಅನುಷಾ ರೈ ಅವರಿಗೆ ಮನೆಯಿಂದ ಪತ್ರ ಬಂದಿತ್ತು. ಈ ಪತ್ರ ಓದಿದ ಬಳಿಕ ಅವರು ಕಣ್ಣೀರು ಹಾಕಿದರು. ಇವರನ್ನು ಭವ್ಯಾ ಗೌಡ ಸಮಾಧಾನ ಮಾಡಿದರು. ಸಮಾಧಾನ ಮಾಡುವಾಗ ಪಾಪು ಎನ್ನುವ ಶಬ್ದವನ್ನು ಭವ್ಯಾ ಗೌಡ ಬಳಕೆ ಮಾಡಿದರು.

ಭವ್ಯಾ ಪಾಪು ಎಂದು ಕರೆಯುತ್ತಿದ್ದಂತೆ ಐಶ್ವರ್ಯಾ ಅವರ ಕರುಳು ಚುರಕ್ ಎಂದಿದೆ. ‘ನನ್ನ ತಾಯಿ ನನಗೆ ಬಳಕೆ ಮಾಡಿದ ಕೊನೆಯ ಶಬ್ದ ಕೂಡ ಪಾಪು ಎಂದೇ’ ಎಂಬುದಾಗಿ ಹೇಳುತ್ತಾ ಕಣ್ಣೀರು ಹಾಕಿದರು ಅನುಶ್ರೀ.

‘ಪಾಪು ಎಂಬ ಶಬ್ದ ಬಳಕೆ ಮಾಡುತ್ತಿದ್ದಂತೆ ನನಗೆ ನನ್ನ ತಾಯಿ ನೆನಪಾಯಿತು’ ಎನ್ನುತ್ತಿರುವಾಗ ಅವರಿಗೆ ಕಣ್ಣೀರು ಉಕ್ಕಿ ಬಂತು. ಅದನ್ನು ನಿಯಂತ್ರಣ ಮಾಡಿಕೊಳ್ಳಲು ಅವರ ಬಳಿ ಸಾಧ್ಯವಾಗಲೇ ಇಲ್ಲ.

ಐಶ್ವರ್ಯಾ ಅವರು ಈ ಮೊದಲು ಸಾಕಷ್ಟು ಬಾರಿ ಅತ್ತಿದ್ದಾರೆ. ಅವರು ತಂದೆ-ತಾಯಿ ಇಲ್ಲದೆ ಬೆಳೆದವರು. ಇತ್ತೀಚೆಗೆ ಬ್ರೇಕಪ್ ವಿಚಾರ ಹೇಳಿಕೊಂಡು ಕಣ್ಣೀರು ಹಾಕಿದ್ದರು. ‘ಬ್ರೇಕಪ್ ಆಗಿ ಆರು ತಿಂಗಳಾಗಿದೆ’ ಎಂದಿದ್ದರು ಅವರು.