
‘ಬಿಗ್ ಬಾಸ್’ ಮನೆಯಲ್ಲಿ ಪ್ರೀತಿ ಹುಟ್ಟೋದು ಹೊಸದೇನು ಅಲ್ಲ. ಈ ಬಾರಿಯೂ ಅಂಥದ್ದೇ ಒಂದು ಲವ್ ಟ್ರ್ಯಾಕ್ ಹುಟ್ಟೋ ಸೂಚನೆ ಸಿಕ್ಕಿದೆ. ಆದರೆ, ಇದನ್ನು ಐಶ್ವರ್ಯಾ ಶಿಂಧೋಗಿ ಅವರು ಅಲ್ಲಗಳೆದಿದ್ದಾರೆ. ವೀಕೆಂಡ್ ವಿಚಾರ ಚರ್ಚೆಗೆ ಬಂತು.

ಕಿಚ್ಚ ಸುದೀಪ್ ಅವರು ವೀಕೆಂಡ್ನಲ್ಲಿ ಈ ವಿಚಾರದ ಬಗ್ಗೆ ಮಾತನಾಡಿದ್ದರು. ‘ಬಿಗ್ ಬಾಸ್ ಮನೆಯಲ್ಲಿ ಪ್ರೇಮ ಕಥೆ ಹುಟ್ಟಿಕೊಳ್ಳುತ್ತಿದೆ ನಿಜವೇ’ ಎಂದು ಕೇಳಲಾಯಿತು. ಈ ಪ್ರಶ್ನೆಯನ್ನು ಸುದೀಪ್ ಅವರು ನೇರವಾಗಿ ಐಶ್ವರ್ಯಾ ಬಳಿಯೇ ಕೇಳಿದರು.

‘ಆ ರೀತಿ ಇಲ್ಲ’ ಎಂದರು ಐಶ್ವರ್ಯಾ. ಆಗ ಸುದೀಪ್ ಅವರು ‘ಕುಂಬಳಕಾಯಿ ಕಳ್ಳ ಎಂದರೆ ಹೆಗಲ ಮುಟ್ಟೇಕೆ ನೋಡಿಕೊಳ್ಳುತ್ತೀರಿ’ ಎಂದು ಪ್ರಶ್ನೆ ಮಾಡಿದರು. ಇದನ್ನು ಕೇಳಿ ಮನೆ ಮಂದಿಯೆಲ್ಲ ನಕ್ಕರು. ಈ ಮೊದಲು ಧರ್ಮ ಬಗ್ಗೆ ಮೆಚ್ಚುಗೆಯ ಮಾತನ್ನು ಐಶ್ವರ್ಯಾ ಆಡಿದ್ದರು.

‘ಧರ್ಮ ಅವರನ್ನು ನೋಡಿ ನಾನು ಬಿದ್ದಿದ್ದು ಯಾವಾಗ ಎಂದರೆ..’ ಎಂಬುದಾಗಿ ಈ ಮೊದಲು ಐಶ್ವರ್ಯಾ ಮಾತನಾಡಿದ್ದರು. ಆ ಬಳಿಕ ಮಾತು ಸರಿಪಡಿಸಿಕೊಂಡಿದ್ದ ಅವರು, ‘ಅವರು ಇಷ್ಟ ಆಗಿದ್ದು ಯಾವಾಗ ಎಂದರೆ..’ ಎಂದು ಮಾತು ಬದಲಿಸಿಕೊಂಡಿದ್ದರು.

ಧರ್ಮ ಕೀರ್ತಿರಾಜ್ ಕೂಡ ಈ ಮಾತನ್ನು ಒಪ್ಪಿಲ್ಲ. ‘ನಮ್ಮ ಮಧ್ಯೆ ಒಳ್ಳೆಯ ಬಾಂಡಿಂಗ್ ಇದೆ. ಇಬ್ಬರ ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಇದೆ’ ಎಂದು ಅವರು ಹೇಳಿದ್ದರು. ಈ ವಿಚಾರದ ಬಗ್ಗೆ ವೀಕೆಂಡ್ನಲ್ಲಿ ಸಾಕಷ್ಟು ಚರ್ಚೆಗಳು ನಡೆದಿವೆ.