
ಅಕ್ಕಿನೇನಿ ನಾಗಾರ್ಜುನ ಅವರ ಮನೆಯಲ್ಲಿ ಮದುವೆ ಸಂಭ್ರಮ ನೆರವೇರಿದೆ. ಕಳೆದ ವರ್ಷಾಂತ್ಯಕ್ಕೆ ನಾಗ ಚೈತನ್ಯ ಹಾಗೂ ಶೋಭಿತಾ ವಿವಾಹ ನೆರವೇರಿತ್ತು. ಈಗ ನಾಗ ಚೈತನ್ಯ ಅವರ ಸಹೋದರ ಅಖಿಲ್ ಅಕ್ಕಿನೇನಿ ಮದುವೆ ಕಾರ್ಯ ನೆರವೇರಿದೆ.

ಅಖಿಲ್ ಹಾಗೂ ಝೈನಬ್ ರೌಜಿ ವಿವಾಹ ಸಮಾರಂಭ ಜೂನ್ 6ರ ಬೆಳಿಗ್ಗೆ 3 ಗಂಟೆಗೆ ನಡೆದಿದೆ ಅನ್ನೋದು ವಿಶೇಷ. ಈ ಸಂದರ್ಭದಲ್ಲಿ ಮುಹೂರ್ತ ಇದ್ದಿದ್ದರಿಂದ ಅಷ್ಟು ಬೆಳಿಗ್ಗೆ ಮದುವೆ ಮಾಡಬೇಕಾದ ಅನಿವಾರ್ಯತೆ ಬಂತು. ಸರಳವಾಗಿ ಈ ವಿವಾಹ ನೆರವೇರಿದೆ.

ಹೈದರಾಬಾದ್ನ ಜೂಬ್ಲಿ ಹಿಲ್ಸ್ನಲ್ಲಿ ನಾಗಾರ್ಜುನ ಅವರು ಮನೆ ಹೊಂದಿದ್ದಾರೆ. ಈ ನಿವಾಸದಲ್ಲಿಯೇ ಅಖಿಲ್ ಹಾಗೂ ಝೈನಬ್ ರೌಜಿ ಹಿಂದೂ ಸಂಪ್ರದಾಯದಂತೆ ವಿವಾಹ ಆಗಿದ್ದಾರೆ. ಆಪ್ತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಮದುವೆ ನೆರವೇರಿದೆ.

ಅಖಿಲ್ ಮತ್ತು ಝೈನಬ್ ರೌಜಿ ಹಲವು ವರ್ಷಗಳಿಂದ ಪ್ರೀತಿಯಲ್ಲಿ ಇದ್ದರು. ನಾಗ ಚೈತನ್ಯ ವಿವಾಹಕ್ಕೂ ಮೊದಲು ಅಂದರೆ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡರು. ಈಗ ಇಬ್ಬರ ಕುಟುಂಬದವರ ಸಮ್ಮುಖದಲ್ಲಿ ಸರಳವಾಗಿ ವಿವಾಹ ಆಗಿದ್ದಾರೆ.

ವಿವಹಾ ಸರಳವಾಗಿ ನಡೆದರೂ ಆರತಕ್ಷತೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಲು ನಿರ್ಧರಿಸಲಾಗಿದೆ. ಈ ವೇಳೆ ರಾಜಕೀಯ ರಂಗದವರು ಹಾಗೂ ಚಿತ್ರರಂಗದವರು ಆಗಮಿಸುವ ಸಾಧ್ಯತೆ ಇದೆ ಎಂದು ವರದಿ ಆಗಿದೆ.