
ಝೈನಾಬ್ ರಾವ್ಜಿ ಮತ್ತು ಅಖಿಲ್ ಅಕ್ಕನೇನಿ ವಿವಾಹ ಜೂನ್ 6ರಂದು ಹೈದರಾಬಾದ್‌ನ ಜೂಬಿಲಿ ಹಿಲ್ಸ್‌ನಲ್ಲಿರುವ ನಾಗಾರ್ಜುನ ಅಕ್ಕಿನೇನಿ ಅವರ ನಿವಾಸದಲ್ಲಿ ನಡೆಯಿತು. ಮುಂಜಾನೆ 3 ಗಂಟೆಗೆ ಇಬ್ಬರೂ ಹಸೆಮಣೆ ಏರಿದರು. ಮೆಗಾಸ್ಟಾರ್ ಚಿರಂಜೀವಿ, ಸುರೇಖಾ, ರಾಮ್ ಚರಣ್, ಉಪಾಸನಾ, ನಿರ್ದೇಶಕ ಪ್ರಶಾಂತ್ ನೀಲ್ ಮುಂತಾದ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಜೂನ್ 8ರಂದು ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಅಖಿಲ್ ಅಕ್ಕಿನೇನಿ ಅವರ ವಿವಾಹ ಆರತಕ್ಷತೆ ಅದ್ದೂರಿಯಾಗಿ ನಡೆಯಿತು. ಸಮಾರಂಭದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಅನೇಕ ಸೆಲೆಬ್ರಿಟಿಗಳು ಸಮಾರಂಭದಲ್ಲಿ ಭಾಗವಹಿಸಿ, ನವ ದಂಪತಿಗೆ ಶುಭ ಕೋರಿದ್ದಾರೆ.

ಈ ಆರತಕ್ಷತೆಯನ್ನು ನಾಗಾರ್ಜುನ ಆಯೋಜಿಸಿದ್ದರು. ರಾಮ್ ಚರಣ್ ಮತ್ತು ಉಪಾಸನ ಕೂಡ ಈ ಆರತಕ್ಷತೆಯಲ್ಲಿ ಮಿಂಚಿದರು. ಇದರ ಫೋಟೋಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ರಾಮ್ ಚರಣ್ ‘ಪೆದ್ದಿ’ ಸಿನಿಮಾದ ಶೂಟ್ನಲ್ಲಿ ಬ್ಯುಸಿ ಇದ್ದು, ಬಿಡುವು ಮಾಡಿಕೊಂಡು ಆಗಮಿಸಿದ್ದರು.

ಸೂಪರ್‌ಸ್ಟಾರ್ ಮಹೇಶ್ ಬಾಬು ತಮ್ಮ ಪತ್ನಿಯೊಂದಿಗೆ ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಮಹೇಶ್ ಬಾಬು ಜೊತೆಗೆ ಅವರ ಮಗಳು ಸಿತಾರಾ ಕೂಡ ಮಿಂಚಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ. ಮಹೇಶ್ ಬಾಬು ಲುಕ್ ಗಮನ ಸೆಳೆದಿದೆ.

ಚಲನಚಿತ್ರ ನಟ ಅಕ್ಕಿನೇನಿ ನಾಗಾರ್ಜುನ ಅವರ ಎರಡನೇ ಪುತ್ರ ಅಖಿಲ್ ಮತ್ತು ಜೈನಾಬ್ ರಾವ್ಜಿ ಅವರ ವಿವಾಹ ಆರತಕ್ಷತೆಯಲ್ಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಭಾಗವಹಿಸಿದ್ದರು. ಉಪಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕಮಲ್ಲು ಮತ್ತು ಸಚಿವ ಕೋಮತಿರೆಡ್ಡಿ ವೆಂಕಟ ರೆಡ್ಡಿ ಕೂಡ ಆರತಕ್ಷತೆಯಲ್ಲಿ ಭಾಗವಹಿಸಿದ್ದರು.
Published On - 8:14 am, Mon, 9 June 25