
ಮಗು ಜನಿಸಿದ ಬಳಿಕ ಮಹಿಳೆಯರು ಕಾಂತಿ ಕಳೆದುಕೊಳ್ಳುತ್ತಾರೆ. ದೇಹದ ತೂಕ ಹೆಚ್ಚುತ್ತದೆ. ಆಲಿಯಾ ಭಟ್ಗೆ ಈ ನಿಯಮ ಅನ್ವಯ ಆಗುವುದಿಲ್ಲ. ಮಗು ಜನಿಸಿದ ಬಳಿಕವೂ ಅವರು ಫಿಟ್ನೆಸ್ ಕಾಯ್ದುಕೊಂಡಿದ್ದಾರೆ.

ಆಲಿಯಾ ಭಟ್ ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರ ಮುಖದ ಕಾಂತಿ ಕಂಡು ಫ್ಯಾನ್ಸ್ ವಾಹ್ ಎಂದಿದ್ದಾರೆ.

ಆಲಿಯಾ ಭಟ್ ಅವರು ಕುಟುಂಬದ ಆರೈಕೆಯಲ್ಲಿ ಬ್ಯುಸಿ ಇರುವುದರಿಂದ ಅವರು ನಟನೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಹಾಗಂತ ಅವರು ಜಿಮ್ನಲ್ಲಿ ವರ್ಕೌಟ್ ಮಾಡುವುದನ್ನು ತಪ್ಪಿಸಿಲ್ಲ.

ಆಲಿಯಾ ಭಟ್ ಅವರ ನಟನೆಯ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಈ ಚಿತ್ರದಲ್ಲಿ ರಣವೀರ್ಗೆ ಜೊತೆಯಾಗಿ ಆಲಿಯಾ ಕಾಣಿಸಿಕೊಂಡಿದ್ದಾರೆ.

ಚಿತ್ರರಂಗದಲ್ಲಿ ಆಲಿಯಾಗೆ ದೊಡ್ಡ ಮಟ್ಟದ ಬೇಡಿಕೆ ಇದೆ. ಅವರು ಶೀಘ್ರವೇ ನಟನೆಗೆ ಮರಳಲಿದ್ದಾರೆ ಎನ್ನಲಾಗುತ್ತಿದೆ. ಇದಕ್ಕಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.